ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಹುಡುಗರು ಹುಡುಗಿಯರು ಎದುರಿಸುತ್ತಿರುವಂತಹ ಸಮಸ್ಯೆ ಎಂದರೆ ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್ಸ್ ಗಳ ಸಮಸ್ಯೆ ಸಾಮಾನ್ಯವಾಗಿ ಎಲ್ಲರೂ ಎದುರಿಸುತ್ತಿರುವ ಸಮಸ್ಯೆ. ಅಂದರೆ ಸತ್ತುಹೋಗಿರುವ ಜೀವಕೋಶಗಳ ಕಣಗಳು ಇವಾಗ್ ಇರುತ್ತದೆ. ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್ಸ್ ಬರೋದಿಕ್ಕೆ ಕಾರಣ ಏನು ಅದು ಹೇಗೆ ಬರುತ್ತದೆ ಅನ್ನೋದಾದರೆ ನಾವು ಧೂಳಿನಲ್ಲಿ ಓಡಾಡಿದಾಗ ಧೂಳಿನ ಕಣಗಳು ನಮ್ಮ ಚರ್ಮದ ಮೇಲೆ ಕುಳಿತುಕೊಂಡು ಈ ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್ಸ್ ಗಳಾಗಿ ಪರಿವರ್ತನೆ ಹೊಂದುತ್ತವೆ.

ಮುಖ್ಯವಾಗಿ ಇವು ಮೂಗು ಕೆನ್ನೆ ಮತ್ತು ಹಣೆ ಮೇಲೆ ಕಾಣಿಸಿಕೊಳ್ಳುತ್ತದೆ. ಈ ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್ ಗಳನ್ನು ನಮ್ಮ ಚರ್ಮದಿಂದ ಓಡಿಸುವುದಕ್ಕಾಗಿ ಹಲವಾರು ರೀತಿಯ ಕ್ರೀಮುಗಳು ಲಭ್ಯವಿರುತ್ತದೆ. ಆದರೆ ಇವುಗಳು ಸ್ವಲ್ಪ ಜಾಸ್ತಿ ಬೆಲೆಯನ್ನು ಹೊಂದಿರುತ್ತದೆ ಹಾಗೂ ನಮ್ಮ ಚರ್ಮಕ್ಕೆ ಬೇರೆ ಯಾವುದೇ ಒಂದು ರೀತಿಯಲ್ಲಿ ಅಡ್ಡ ಪರಿಣಾಮವನ್ನು ಸಹ ಉಂಟುಮಾಡುತ್ತದೆ. ಆದರೆ ನಾವು ಇಷ್ಟೊಂದು ಹಣವನ್ನು ಖರ್ಚು ಮಾಡಿದೆ ಯಾವುದೇ ರೀತಿ ಅಡ್ಡ ಪರಿಣಾಮವನ್ನು ಸಹ ಎದುರಿಸಿದೆ ಮನೆಯಲ್ಲಿಯೇ ಸುಲಭವಾಗಿ ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್ಸ್ ಗಳನ್ನು ಹೇಗೆ ನಿವಾರಣೆ ಮಾಡಿಕೊಳ್ಳುವುದರ ಬಗ್ಗೆ ಎರಡು ರೀತಿಯ ವಿಧಾನಗಳನ್ನು ತಿಳಿಸಿ ಕೊಡುತ್ತೇವೆ.

ಈ ವಿಧಾನಗಳನ್ನು ಹುಡುಗಿಯರು ಅಥವಾ ಹುಡುಗರು ಯಾರು ಬೇಕಿದ್ದರೂ ಬಳಸಬಹುದು. ಈ ಎರಡು ವಿಧಾನಗಳಲ್ಲಿ ಯಾವುದೇ ಒಂದು ಮಾಡಿದರೂ ಸಹ 5 ನಿಮಿಷಗಳಲ್ಲಿ ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್ ಗಳು ನಮ್ಮ ಚರ್ಮದಿಂದ ದೂರವಾಗುತ್ತದೆ. ಒಂದು ಬೌಲ್ ಗೆ ಅರ್ಧದಿಂದ ಒಂದು ಟೀಸ್ಪೂನ್ ಅಷ್ಟು ನಿಂಬೆರಸವನ್ನು ತೆಗೆದುಕೊಂಡು ಅದಕ್ಕೆ ಕಾಲು ಚಮಚದಷ್ಟು ಬೇಕಿಂಗ್ ಸೋಡಾ ಹಾಗೂ ಕಾಲು ಚಮಚದಷ್ಟು ಹಾಲನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.

ಈ ಒಂದು ಮದ್ದನ್ನು ನಮ್ಮ ಮುಖಕ್ಕೆ ಹಚ್ಚುವುದಕ್ಕಿಂತ ಮೊದಲು ಒಂದು ಕಾಟನ್ ಬಟ್ಟೆಯನ್ನು ಸ್ವಲ್ಪ ಬಿಸಿ ನೀರಿನಲ್ಲಿ ಅದ್ದಿ ಅದರಿಂದ ನಮ್ಮ ಮುಖಕ್ಕೆ ಯಾವ ಭಾಗದಲ್ಲಿ ಬ್ಲಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಇರುತ್ತವೆಯೊ ಆ ಭಾಗದಲ್ಲಿ ಸ್ವಲ್ಪ ಹೊತ್ತು ಶಾಖವನ್ನು ಕೊಟ್ಟುಕೊಳ್ಳಬೇಕು. ಈ ರೀತಿಯಾಗಿ ಮಾಡುವುದರಿಂದ ನಮ್ಮ ಚರ್ಮದ ಮಾಡಿರುವಂತಹ ರಂಧ್ರಗಳು ತೆರೆದುಕೊಂಡು ಈ ಚುಕ್ಕಿಗಳನ್ನು ತೆಗೆಯಲು ಸಹಾಯವಾಗುತ್ತದೆ. ನಂತರ ಈಗಾಗಲೇ ರೆಡಿ ಮಾಡಿಟ್ಟುಕೊಂಡು ಇರುವಂತಹ ಪೇಸ್ಟನ್ನು ಟೂತ್ ಬ್ರಷ್ ನ ಸಹಾಯದಿಂದ ನಿಧಾನವಾಗಿ ನಮ್ಮ ಚರ್ಮದ ಮೇಲೆ ಹಚ್ಚುತ್ತಾ ಬರಬೇಕು.

ನಿಂಬೆರಸ ಸತ್ತುಹೋದ ಜೀವಕೋಶಗಳ ಕಣಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಬೇಕಿಂಗ್ ಸೋಡಾ ಮುಖದಲ್ಲಿ ಇರುವಂತಹ ಧೂಳು ಕೊಳೆ ಹಾಗೂ ಎಣ್ಣೆಯ ಅಂಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಹಾಗೆ ಹಾಲಿನಲ್ಲಿ ಲ್ಯಾಕ್ಟಿಕ್ ಆಸಿದ್ ಹೆಚ್ಚಾಗಿರುವುದರಿಂದ ಇದು ನಮ್ಮ ಚರ್ಮದ ಮೇಲಿರುವಂತಹ ಕಪ್ಪು ಚುಕ್ಕೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಒಂದೈದು ನಿಮಿಷ ಮುಖದ ಮೇಲೆ ಬ್ರಷ್ ನಿಂದ ಮಸಾಜ್ ಮಾಡಿ ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಂಡು ಕಾಟನ್ ಬಟ್ಟೆಯಿಂದ ಮುಖವನ್ನು ಒರೆಸಿ ಕೊಳ್ಳಬೇಕು. ನಿರಂತರ ಮುಖ ಸ್ವಲ್ಪ ಒಣಗಿದ ಹಾಗೆ ಅನಿಸಿದರೆ ಮಾಯಿಶ್ಚೈಸರ್ ಹಚ್ಚಿಕೊಳ್ಳಬಹುದು.

ಒಂದು ವಿಧಾನದಿಂದ ಹೇಗೆ ಬ್ಲಾಕೆಡ್ ಗಳನ್ನು ತೆಗೆಯುವುದು ಅನ್ನೋದು ನೋಡಿ ಆಯ್ತು ಈಗ ಇನ್ನೊಂದು ವಿಧಾನದಿಂದ ಹೇಗೆ ನಮ್ಮ ಮುಖದ ಮೇಲಿರುವ ಕಪ್ಪು ಚುಕ್ಕೆಗಳನ್ನು ತೆಗೆಯುವುದು ಅನ್ನೋದನ್ನ ತಿಳಿದುಕೊಳ್ಳೋಣ. ಒಂದು ಬಲಿನಲ್ಲಿ ಅರ್ಧ ಟೀ ಸ್ಪೂನ್ ನಷ್ಟು ಟೀ ಪೌಡರ್ ಅಥವಾ ಗ್ರೀನ್ ಟೀ ಪೌಡರ್ ತೆಗೆದುಕೊಂಡು ಅದಕ್ಕೆ ಒಂದು ಚಿಟಿಕೆ ಎಷ್ಟು ಅರಿಶಿಣದ ಪುಡಿ ಹಾಗೂ ಇವೆರಡನ್ನು ಮಿಕ್ಸ್ ಮಾಡಿಕೊಳ್ಳಲು ಬೇಕಾದಷ್ಟು ನಿಂಬೆರಸವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಟೀ ಪೌಡರ್ ನಲ್ಲಿ ಆಂಟಿಆಕ್ಸಿಡೆಂಟ್ ಹಾಗೂ anti-inflammatory ಗುಣಗಳು ಹೆಚ್ಚಾಗಿರುತ್ತವೆ.

ಇವುಗಳು ಸಹ ಸತ್ತು ಹೋದಂತಹ ಜೀವಕೋಶಗಳನ್ನು ನಮ್ಮ ಚರ್ಮದಿಂದ ಹೊರಹಾಕಲು ಸಹಾಯ ಮಾಡುತ್ತದೆ. ತಿನ್ನು ಈ ವಿಧಾನಕ್ಕೆ ಸಹ ಮೊದಲು ಒಂದೆರಡು ನಿಮಿಷ ಕಾಟನ್ ಬಟ್ಟೆಯಲ್ಲಿ ಬಿಸಿನೀರಿನಿಂದ ಶಾಖವನ್ನು ಕೊಟ್ಟಿಕೊಂಡು ನಂತರ ನಾವು ತೆಗೆದುಕೊಂಡ ನಿಂಬೆ ಹಣ್ಣಿನ ಸಿಪ್ಪೆಯ ಮೇಲೆ ಈ ಪೇಸ್ಟನ್ನು ಹಾಕಿ ನಿಧಾನಕ್ಕೆ ಐದು ನಿಮಿಷಗಳ ಕಾಲ ಮುಖಕ್ಕೆ ಮಸಾಜ್ ಮಾಡಬೇಕು. ನಂತರ ಮುಖವನ್ನು ತಣ್ಣೀರಿನಿಂದ ತೊಳೆದು ಒರೆಸಿಕೊಳ್ಳಬೇಕು. ಈ ಎರಡು ವಿಧಾನಗಳನ್ನು ವಾರದಲ್ಲಿ ಎರಡು ಮೂರು ಸಾರಿ ಮಾಡಿದರೆ ಸಾಕಾಗುತ್ತದೆ. ಶಾಶ್ವತವಾಗಿ ನಾವು ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್ ಗಳ ಸಮಸ್ಯೆಯಿಂದ ನಿವಾರಣೆ ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *