ತಲೆನೋವು ಒಂದಲ್ಲ ಹಲವು ಕಾರಣಗಳಿಂದ ಪ್ರತಿಯೊಬ್ಬ ಮನುಷ್ಯನಿಗೆ ಕಾಡುವಂತ ಸಾಮಾನ್ಯ ಸಮಸ್ಯೆಯಾಗಿದೆ. ಇನ್ನು ಈ ತಲೆನೋವಿನಲ್ಲಿ ಎರಡು ಬಗೆಯನ್ನು ಕಾಣಬಹುದು ಒಂದು ಪೂರ್ಣ ತಲೆ ನೋವು ಇನ್ನೊಂದು ಅರ್ಧ ತಲೆನೋವು ಎಂಬುದಾಗಿ ಆದ್ದರಿಂದ ಈ ಮೂಲಕ ನಾವುಗಳು ಅರ್ಧ ತಲೆನೋವಿಗೆ ಪರಿಹಾರ ನೀಡುವಂತ ಮನೆಮದ್ದನ್ನು ತಿಳಿದುಕೊಳ್ಳೋಣ.
ಅರ್ಧ ತಲೆನೋವು ಬಂದ್ರೆ ಯಮಯಾತನೆ ನೀಡುವಂತ ನೋವಾಗಿದೆ ಇದಕ್ಕೆ ಬೇಗನೆ ಪರಿಹಾರ ಕಂಡುಕೊಳ್ಳಬೇಕು ಇಲ್ಲದಿದ್ದರೆ ಇಡೀ ದಿನವೆಲ್ಲ ನೆಮ್ಮದಿಯಿಂದ ಇರಲು ಆಗೋದಿಲ್ಲ ಕಿರಿ ಕಿರಿ ಅನಿಸುತ್ತದೆ. ಅಡುಗೆ ಮನೆಯಲ್ಲಿ ಬಳಸುವಂತ ಎಳ್ಳು, ಕರಿಎಳ್ಳು ಹಾಗೂ ಬಿಳಿಎಳ್ಳು ಎಂಬುದಾಗಿ ಎರಡು ಬಗೆಯನ್ನು ಹೊಂದಿದೆ ಅದರಲ್ಲಿ ಬಿಳಿ ಎಳ್ಳು ಬಳಸಿ ಅರ್ಧ ತಲೆನೋವಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಹೌದು ಬಿಳಿಎಳ್ಳು ಹಾಗೂ ಎಮ್ಮೆ ಹಾಲು ಬಳಸಿ ಮನೆಮದ್ದು ತಯಾರಿಸಿಕೊಳ್ಳಬೇಕು, ಇದು ಅತಿ ಸುಲಭವಾಗಿದೆ. ನಿಮ್ಮ ಸ್ನೇಹಿತರಿಗೂ ಇದನ್ನು ಶೇರ್ ಮಾಡಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ ಮನೆಮದ್ದುಗಳು ಪಾರಂಪರಿಕವಾಗಿ ಬಂದಿರುವಂಥದ್ದು ಯಾವುದೇ ಅಡ್ಡ ಪರಿಣಾಮ ಇರೋದಿಲ್ಲ.
ಮನೆಮದ್ದು: ಅರ್ಧ ತಲೆನೋವು ನಿವಾರಣೆಗೆ ಬಿಳಿ ಎಳ್ಳಿನೊಂದಿಗೆ ಎಮ್ಮೆ ಹಾಲನ್ನು ಸೇರಿಸಿ ಅರೆದು ಹಣೆಗೆ ಪಟ್ಟು ಹಾಕಿಕೊಂಡರೆ ಅರ್ಧ ತಲೆ ನೋವು ಬೇಗನೆ ನಿವಾರಣೆಯಾಗುತ್ತದೆ. ಇದು ಸುಲಭವಾಗಿ ಅರ್ಧ ತಲೆನೋವನ್ನು ನಿವಾರಿಸಿಕೊಳ್ಳುವಂತ ಮನೆಮದ್ದಾಗಿದೆ.