Rain Reports: ನಮ್ಮ ದೇಶದ ಹಲವು ರಾಜ್ಯಗಳಲ್ಲಿ ಈಗ ಹವಾಮಾನ ಪೂರ್ತಿಯಾಗಿ ಬದಲಾಗಿದೆ. ಉತ್ತರ ಭಾರತದ ಹಲವು ಕಡೆ ಪರಿಸ್ಥಿತಿ ಬದಲಾಗಿದೆ, ದಕ್ಷಿಣದ ಹಲವು ಕಡೆ ಕೆಲ ದಿನಗಳಿಂದ ನಿಲ್ಲದಂತೆ ಮಳೆ ಬರುತ್ತಿದೆ. ಇನ್ನು ಕೆಲವು ಗುಡ್ಡಗಳ ಪ್ರದೇಶದಲ್ಲಿ ಹಿಮಪಾತ ಕಂಡುಬಂದಿದೆ. ಉತ್ತರ ಭಾರತದಲ್ಲಿ ಶುಷ್ಕ ವಾತಾವರಣ ನಿರ್ಮಾಣ ಆಗಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚು ಬದಲಾವಣೆ ಆಗಲಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ ಇಳಿಕೆ ಆಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನು ನಾಗಾಲ್ಯಾಂಡ್, ಅಸ್ಸಾಮ್, ಮಿಜೋರಂ ಹಾಗೂ ಮಣಿಪುರ ಈ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ ಎಂದ್ ವೆದರ್ ರಿಪೋರ್ಟ್ ತಿಳಿಸಿದೆ. ಇನ್ನೆರಡು ದಿನಗಳಲ್ಲಿ ಅಂದರೆ ನವೆಂಬರ್ 23ರಂದು ದೆಹಲಿ ರಾಜ್ಯದ ತಾಪಮಾನ 10℃ ಗೆ ತಲುಪಬಹುದು ಎಂದು ಮಾಹಿತಿ ಸಿಕ್ಕಿದೆ. ಈ ವಾರದ ತಾಪಮಾನ 2 ಡಿಗ್ರಿ ಕಡಿಮೆಯಾಗಿ 14℃ ಗೆ ತಲುಪಬಹುದು ಎಂದು ಕೂಡ ಹೇಳಲಾಗುತ್ತಿದೆ. ಇನ್ನು ಉತ್ತರಾಖಂಡ್ ರಾಜ್ಯದ ತಾಪಮಾನ 11℃ ಆಗಬಹುದು.
ಜೊತೆಗೆ ಹಿಮಪಾತ ಇರಲಿದ್ದು, ಗುಡ್ಡಗಾಡಿನ ಪ್ರದೇಶಗಳಲ್ಲಿ ನೋಟ ಸುಂದರವಾಗಿರುತ್ತದೆ. ಹವಾಮಾನ ವರದಿಯ ಪ್ರಕಾರ ಅಂಡಮಾನ್ ನಿಕೋಬಾರ್ ಹಾಗೂ ತಮಿಳುನಾಡಿನ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆ ಆಗಬಹುದು ಎಂದು ಹೇಳಲಾಗುತ್ತಿದೆ. ಕೇರಳ, ಲಕ್ಷದ್ವೀಪ ಮತ್ತು ಕರ್ನಾಟಕದ ಕರಾವಳಿ ಭಾಗದಲ್ಲಿ ಕೂಡ ದಿಢೀರ್ ಮಳೆಯಾಗುವ ಸಾಧ್ಯತೆ ಇದೆ. ಗಿಲ್ಗಿಟ್ ಬಾಲ್ಟಿಸ್ತಾನ್, ಮುಜಫರಾಬಾದ್ ಮತ್ತು ಜಮ್ಮು ಕಾಶ್ಮೀರ್ ನ ಕೆಲವು ಕಡೆಗಳಲ್ಲಿ ದಿಢೀರ್ ಮಳೆ ಶುರುವಾಗುವ ಸಾಧ್ಯತೆ ಇದೆ.
ಇನ್ನು ಎರಡು ದಿನಗಳು ಕಳೆದ ಮೇಲೆ ಮಧ್ಯ ಭಾರತದ ರಾಜ್ಯಗಳು ಮತ್ತು ವಾಯುವ್ಯ ಭಾರತದ ರಾಜ್ಯಗಳಲ್ಲಿ ಬೆಳಗ್ಗೆ ಮತ್ತು ರಾತ್ರಿ ಎರಡು ಸಮಯದಲ್ಲಿ ತಾಪಮಾನ ಕಡಿಮೆ ಆಗುವ ಸಾಧ್ಯತೆ ಇದೆ. ವಾಯುವ್ಯ ರಾಜ್ಯಗಳು ಚಳಿಗಾಲ ಶುರುವಾಗುವುದಕ್ಕೆ ಎದುರು ನೋಡುತ್ತಿವೆ. ರಾಜಸ್ಥಾನದ ಟೆಂಪರೇಚರ್ 30 ಡಿಗ್ರಿ ಇರಲಿದೆ, ಇಲ್ಲಿನ ಮ್ಯಾಕ್ಸಿಮಮ್ ಟೆಂಪರೇಚರ್ 31 ರಿಂದ 34 ಡಿಗ್ರಿ ಇರಬಹುದು. ಇನ್ನು ಪಶ್ಚಿಮಾತ್ಯ ಹಿಮಾಲಯದಲ್ಲಿ ಅಡಚಣೆಗಳು ಕಂಡು ಬಂದಿಲ್ಲ. ಹಾಗಾಗಿ ಹಿಮಪಾತ ಇರುವುದಿಲ್ಲ ಎಂದು ಮಾಹಿತಿ ಸಿಕ್ಕಿದೆ.