Road to agricultural land: ನಮ್ಮ ರಾಜ್ಯದಲ್ಲಿ ಹಲವು ಹಳ್ಳಿಗಳಿವೆ, ಅಲ್ಲಿ ರೈತರು ಕೃಷಿ ಕೆಲಸಗಳನ್ನು ಮಾಡುತ್ತಾರೆ. ಆದರೆ ಹಲವು ಸಾರಿ ಕೃಷಿ ನಡೆಯುವ ಜಾಗಗಳಲ್ಲಿ, ಕೃಷಿ ಭೂಮಿಯಲ್ಲಿ ನಡೆದು ಹೋಗುವ ಹಾದಿಯ ವಿಚಾರಕ್ಕೆ ಸಮಸ್ಯೆಗಳು ನಡೆಯುತ್ತದೆ. ಕೃಷಿಯ ಜಮೀನಿಗೆ ಹೋಗುವುದಕ್ಕೆ ಸರಿಯಾದ ದಾರಿ ಇಲ್ಲದೆ ಇದ್ದಾಗ, ಜನರ ನಡುವೆ ಈ ವಿಚಾರಕ್ಕೆ ಜಗಳಗಳು ನಡೆಯುವುದುಂಟು.

ಇದರಿಂದ ಹಳ್ಳಿಯ ಜಗಳಗಳ ನಡುವೆ ರೈತರ ನಡುವೆ ಮನಸ್ತಾಪಗಳು ನಡೆಯುತ್ತದೆ. ಒಂದು ವೇಳೆ ನೀವು ಈ ಥರದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಸರ್ಕಾರವೇ ನಿಮಗೆ ಒಂದು ಗುಡ್ ನ್ಯೂಸ್ ನೀಡಿದೆ. ಜಮೀನಿಗೆ ಹೋಗುವುದಕ್ಕೆ ಹಾದಿ ಇಲ್ಲದೆ, ರೈತರು ತೊಂದರೆ ಅನುಭವಿಸುತ್ತಿದ್ದು, ಇಂಥ ಸಮಸ್ಯೆಗಳನ್ನು ಸರಿಪಡಿಸಲು ಇದೀಗ ಸರ್ಕಾರ ಒಂದು ಹೊಸ ಪರಿಹಾರವನ್ನು ತಂದಿದೆ.

ಕೆಲವು ರೈತರಿಗೆ ಜಮೀನಿಗೆ ಹೋಗುವುದಕ್ಕೆ ಸರಿಯಾದ ದಾರಿ ಇಲ್ಲ, ಇದಕ್ಕಾಗಿ ಅವರು ಖಾಸಗಿ ಜಾಗಗಳಿಂದ ತಮ್ಮ ಜಮೀನಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದ ಖಾಸಗಿ ಜಾಗ ಹೊಂದಿರುವವರು ರೈತರ ಜೊತೆಗೆ ಜಗಳ ಮಾಡಿಕೊಳ್ಳುತ್ತಿದ್ದಾರೆ. ಈ ತೊಂದರೆಗೆ ಈಗ ಸರ್ಕಾರವೇ ಒಂದು ಪರಿಹಾರ ನೀಡಿದ್ದು, ಖಾಸಗಿ ಜಾಗ ಹೊಂದಿರುವವರಿಗೆ ರೈತರಿಗೆ ಓಡಾಡಲು ಜಾಗ ಮಾಡಿಕೊಡಬೇಕು ಎಂದು ಸರ್ಕಾರ ಆದೇಶ ನೀಡಿದೆ.

Road to agricultural land

ಅಕಸ್ಮಾತ್ ಪ್ರೈವೇಟ್ ಪ್ರಾಪರ್ಟಿ ಇರುವವರು ಜಾಗ ಕೊಡುವುದಕ್ಕೆ ತೊಂದರೆ ಕೊಟ್ಟರೆ, ಪೊಲೀಸರು ಅಥವಾ ತಹಸೀಲ್ದಾರ್ ಅವರ ಸಹಾಯ ಪಡೆದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದೆ ಸರ್ಕಾರ. ರೈತರ ಕೃಷಿ ಭೂಮಿಗೆ ಕಾಲುದಾರಿ ಮಾಡಿಕೊಡುವ ಜವಾಬ್ದಾರಿ ಸರ್ಕಾರದ್ದೇ ಆಗಿದ್ದು, ಇದೀಗ ಈ ವಿಚಾರದ ಸರ್ಕಾರವು ಹೊಸದಾಗಿ ಆದೇಶ ನೀಡಿದ್ದು, 1966ರ 59 ನಿಯಮದ ಅಡಿಯಲ್ಲಿ ಈ ದಾರಿ ಹಕ್ಕುಗಳ ಬಗ್ಗೆ ಪೂರ್ತಿ ಮಾಹಿತಿ ನೀಡಲಾಗಿದೆ.

ಒಂದು ಕೃಷಿ ಭೂಮಿಗೆ ಪ್ರವೇಶ ಮಾಡುವ ಹಕ್ಕು ಎಲ್ಲಾ ಕೃಷಿಕರ ಹಕ್ಕು ಆಗಿರುತ್ತದೆ. ಈ ಕಾರಣಕ್ಕೆ ರೈತರಿಗೆ ಈ ಹಕ್ಕು ಸಿಗುವ ಹಾಗೆ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶ ಆಗಿದೆ. ಇದರ ಬಗ್ಗೆ ಸರ್ಕಾರವು ಕ್ರಮ ಕೈಗೊಳ್ಳಲಿದೆ. ಸರ್ಕಾರದ ಹೊಸ ಆದೇಶದ ಪ್ರಕಾರ, ಯಾವುದೇ ರೈತ ಕೂಡ ತಮ್ಮ ಕೃಷಿ ಭೂಮಿಗೆ ಪ್ರವೇಶ ಮಾಡಲು, ಬೇರೆಯವರ ಜೊತೆಗೆ ಜಗಳ ಆಡುವ ಅವಶ್ಯಕತೆ ಇಲ್ಲ. ಪೊಲೀಸರು ಅಥವಾ ತಹಸೀಲ್ದಾರರ ಸಹಾಯ ಪಡೆದು, ತಮ್ಮ ಭೂಮಿಗೆ ಕಾಲ್ನಡಿಗೆಯ ದಾರಿ ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!