New rule: ನಿನ್ನೆ ಇಂದ ನವೆಂಬರ್ ತಿಂಗಳು ಶುರುವಾಗಿದೆ. ಹೊಸ ತಿಂಗಳು ಶುರುವಾಗುತ್ತೆ ಎಂದರೆ, ಹೊಸ ಬದಲಾವಣೆಗಳು ಕೂಡ ಇದ್ದೇ ಇರುತ್ತದೆ. ಹಾಗಾಗಿ ಈ ತಿಂಗಳು ಯಾವೆಲ್ಲಾ ಮಹತ್ವದ ಬದಲಾವಣೆಗಳು ನಡೆಯಲಿದೆ, ಅದು ಜನರ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ಇಂದು ಪೂರ್ತಿಯಾಗಿ ತಿಳಿದುಕೊಳ್ಳೋಣ..
ಒಂದು ತಿಂಗಳು ಮುಗಿದು ಹೊಸ ತಿಂಗಳು ಶುರುವಾಗುತ್ತೆ ಎಂದರೆ, ಖಂಡಿತವಾಗಿ ಕೆಲವು ನಿಯಮಗಳ ಬದಲಾವಣೆಯನ್ನು ಸರ್ಕಾರ ಜಾರಿಗೆ ತರುತ್ತದೆ. ಅವುಗಳು ಜನಸಾಮಾನ್ಯರ ಜೀವನರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ತಿಂಗಳು ಕೂಡ ಅದೇ ರೀತಿ ಬದಲಾವಣೆಗಳು ನಡೆದಿದ್ದು, ಅವು ಏನು ಎಂದು ನೋಡುವುದಾದರೆ, ಲ್ಯಾಪ್ ಟಾಪ್, ಜಿ.ಎಸ್.ಟಿ ಮತ್ತು LPG ಗ್ಯಾಸ್ ಸಿಲಿಂಡರ್ ಇವುಗಳ ಬೆಲೆಯಲ್ಲಿ ಏರಿಕೆ ಆಗಿದೆ ಎಂದು ಮಾಹಿತಿ ಸಿಕ್ಕಿದೆ.
ಜೊತೆಗೆ ವಾತಾವರಣ ಮತ್ತು ಹವಾಮಾನ ಬದಲಾವಣೆ ಇಂದ ಟ್ರೇನ್ ಗಳ ಸಮಯದಲ್ಲಿ ಆಗಿರುವ ಬದಲಾವಣೆ, ಇದು ಕೂಡ ಜನರ ಮೇಲೆ ಪರಿಣಾಮ ಬೀರಲಿದೆ. ಹಾಗೆಯೇ ಲ್ಯಾಪ್ ಟಾಪ್, ಪರ್ಸನಲ್ ಕಂಪ್ಯೂಟರ್, ಟ್ಯಾಬ್ಲೆಟ್ ಇವುಗಳ ಖರೀದಿ ಮೇಲೆ ಡಿಸ್ಕೌಂಟ್ ಕೂಡ ಕೊಡಲಾಗುತ್ತದೆಯಂತೆ. ಇದಷ್ಟೇ ಅಲ್ಲದೆ ಬಾಂಬೆ ಸ್ಟಾಕ್ ಎಕ್ಸ್ಛೇಂಜ್ ನಲ್ಲಿ ಕೆಲವು ಶುಲ್ಕಗಳ ಬೆಲೆ ಏರಿಕೆ ಆಗಿದೆ. ಇದು ಶೇರ್ ಮಾರ್ಕೆಟ್ ನಲ್ಲಿ ಕೆಲಸ ಮಾಡುವವರ ಬದುಕಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಮಾಹಿತಿ ಸಿಕ್ಕಿದೆ.
ಹೊಸ ತಿಂಗಳು ಶುರುವಾಗುವ ಸಮಯದಲ್ಲಿ ಎಲ್.ಪಿ.ಜಿ ಸಿಲಿಂಡರ್ ಗಳ ಬೆಲೆಯನ್ನು ಪರಿಷ್ಕರಿಸಲಾಗುತ್ತದೆ. ಈ ತಿಂಗಳು ದುಮರು 5 ಜಿಲ್ಲೆಗಳಲ್ಲಿ ಎಲೆಕ್ಷನ್ ಇರುವ ಕಾರಣ, ಎಲ್.ಪಿ.ಜಿ ಸಿಲಿಂಡರ್ ಬೆಲೆ ಕಡಿಮೆ ಆಗಬಹುದು ಎಂದು ಅಂದಾಜು ಮಾಡಲಾಗಿದೆ. ಇನ್ನು ಕೆಲವು ವಿಚಾರ ಇದ್ದು, ಬ್ಯಾಂಕ್ ಲೋನ್ ಮೇಲಿನ ಶುಲ್ಕವನ್ನು ಹೆಚ್ಚಿಸಬಹುದು ಎಂದು ಮಾಹಿತಿ ಸಿಕ್ಕಿದೆ..
ಹಾಗಾಗಿ ಬ್ಯಾಂಕ್ ಗ್ರಾಹಕರು ಹುಷಾರಾಗಿರಬೇಕು. ಜೊತೆಗೆ ಇನ್ಷುರೆನ್ಸ್ ಕಂಪನಿಗಳು ತಮ್ಮ ಗ್ರಾಹಕರು ಕೆವೈಸಿ ಮಾಡಿಸದೆ ಇದ್ದರೆ, ಇನ್ಷುರೆನ್ಸ್ ಕ್ಲೇಮ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇದೆಲ್ಲವನ್ನು ನೀವು ತಿಳಿದುಕೊಳ್ಳಬೇಕು. ಜೊತೆಗೆ, ನವೆಂಬರ್ ನಲ್ಲಿ ಕನ್ನಡ ರಾಜ್ಯೋತ್ಸವ, ದೀಪಾವಳಿ, ಕನಕದಾಸ ಜಯಂತಿ ಈ ಎಲ್ಲಾ ರಜೆಗಳು ಇರುವುದರಿಂದ ಬ್ಯಾಂಕ್ ರಜೆ ಇರುತ್ತದೆ. ನಿಮ್ಮ ಬ್ಯಾಂಕ್ ಕೆಲಸಗಳನ್ನು ಪ್ಲಾನ್ ಮಾಡಿಕೊಳ್ಳಿ..