Gruhalakshmi Scheme: ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದು 2 ತಿಂಗಳು ಕಳೆದು ಹೋಯಿತು, ಆದರೆ ಇನ್ನು ಕೂಡ ಹಲವು ಮಹಿಳೆಯರಿಗೆ ಈ ಯೋಜನೆಯ ಹಣ ಸಿಕ್ಕಿಲ್ಲ. ರಾಜ್ಯದಲ್ಲಿ 1.28 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಹತೆ ಪಡೆಯುತ್ತಾರೆ. ಆದರೆ ಅವರಲ್ಲಿ 1.20 ಕೋಟಿ ಮಹಿಳೆಯರು ಈಗ ಅರ್ಜಿ ಸಲ್ಲಿಸಿದ್ದು, ಅವರುಗಳ ಪೈಕಿ 64 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಕ್ಕಿದೆ. ಸುಮಾರು 45% ಮಹಿಳೆಯರಿಗೆ ಇನ್ನು ಗೃಹಲಕ್ಷ್ಮಿ ಯೋಜನೆಯ ಹಣ ಸಿಕ್ಕಿಲ್ಲ.

ಇನ್ನು ಹಣ ಬರದೆ ಇರುವ ಮಹಿಳೆಯರು ಆತಂಕಕ್ಕೆ ಒಳಗಾಗಿದ್ದಾರೆ. ತಮಗೆ ಹಣ ಬರೋದು ಯಾವಾಗ? ಹಣ ಬರದೆ ಇರಲು ಕಾರಣ ಏನು? ಹಣ ಬರೋದು ಯಾವಾಗ? ಯಾವ ತಾರೀಕಿನ ಒಳಗೆ ಪ್ರತಿ ತಿಂಗಳು ಹಣ ಬರುತ್ತದೆ ಎನ್ನುವ ಸಾಕಷ್ಟು ಪ್ರಶ್ನೆಗಳು ಮಹಿಳೆಯರಲ್ಲಿ ಕಾಡುತ್ತಿದೆ. ಆದರೆ ಈ ಎಲ್ಲಾ ಪ್ರಶ್ನೆಗಳಿಗೆ ಸರ್ಕಾರ ಕೊಡುತ್ತಿರುವ ಉತ್ತರ ಒಂದೇ ಆಗಿದ್ದು, ತಾಂತ್ರಿಕ ಸಮಸ್ಯೆಯ ಕಾರಣದಿಂದ ಮಹಿಳೆಯರ ಖಾತೆಗೆ ಹಣ ಬಂದಿಲ್ಲ ಎಂದು ಹೇಳಿ ಸರ್ಕಾರ ತಪ್ಪಿಸಿಕೊಳ್ಳುತ್ತಿದೆ..

ಸರ್ಕಾರದಿಂದ ಸಿಕ್ಕಿರುವ ಮಾಹಿತಿಯ ಅನುಸಾರ, ಈಗಾಗಲೇ 2 ತಿಂಗಳಿಗೆ ಮಹಿಳೆಯರನ್ನು ತಲುಪಬೇಕಾದಷ್ಟು ಹಣವನ್ನು ಈಗಾಗಲೇ ಸರ್ಕಾರ ಬಿಡುಗಡೆ ಮಾಡಿದೆ. ಇದೇ ಮೊದಲ ಸಾರಿ ಸರ್ಕಾರವು DBT ಮೂಲಕ ಹಣ ಬಿಡುಗಡೆ ಮಾಡಲಿದ್ದು, ಇದರ ಜವಾಬ್ದಾರಿಯನ್ನು RBI ತೆಗೆದುಕೊಂಡಿದೆ. ಆದರೆ DBT ಮೂಲಕ ನೇರ ವರ್ಗಾವಣೆ ಮಾಡುವಲ್ಲಿ ತಾಂತ್ರಿಕ ದೋಷ ಉಂಟಾಗಿರುವ ಕಾರಣ ಇನ್ನು ಹಲವು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಕ್ರೆಡಿಟ್ ಆಗಿಲ್ಲ.

ಈ ರೀತಿ ಇದ್ದಾಗ, ಸರ್ಕಾರವು ಜನರಿಗೆ ಭರವಸೆ ಕೊಡುತ್ತಲೇ ಬಂದಿದೆ. ಬಾಕಿ ಉಳಿದಿರುವ ಹಣದ ಮೊತ್ತವನ್ನು ಶೀಘ್ರದಲ್ಲೇ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಸರ್ಕಾರ ಈಗಾಗಲೇ ಅನ್ನಭಾಗ್ಯ ಯೋಜನೆಯ ಹಣವನ್ನು ಪ್ರತಿ ವ್ಯಕ್ತಿಗೆ 170 ರೂಪಾಯಿ ನೀಡಲಾಗುತ್ತಿದೆ.

Gruhalakshmi Scheme

ಅನ್ನಭಾಗ್ಯ ಯೋಜನೆಯ ಹಣ ಬರುತ್ತಿದ್ಧ್, ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಬಂದೇ ಬರುತ್ತದೆ ಎಂದು ತಿಳಿಸಿದ್ದಾರೆ. ಆದರೆ ಮಹಿಳೆಯರು ಒಮ್ಮೆ ತಾವು ಅಪ್ಲೈ ಮಾಡಿರುವ ಅಪ್ಲಿಕೇಶನ್ ಸರಿಯಾಗಿದೆಯಾ ಎನ್ನುವುದನ್ನ ಚೆಕ್ ಮಾಡಿಕೊಳ್ಳಬೇಕು. ಹಾಗೆಯೇ ಅದರಲ್ಲಿ ಯಾವುದೇ ಮಿಸ್ಟೇಕ್ ಇದ್ದರು, ಸರಿಪಡಿಸಿಕೊಳ್ಳಬೇಕು. ಒಂದು ವೇಳೆ ಹೆಚ್ಚು ಸಮಸ್ಯೆ ಅನ್ನಿಸಿದರೆ, ಹತ್ತಿರ ಇರುವ ಆಶಾ ಕಾರ್ಯಕರ್ತೆಯರ ಸಹಾಯ ಪಡೆಯಬಹುದು ಎಂದು ಸರ್ಕಾರವೇ ಹೇಳಿದೆ.

ಜೊತೆಗೆ ಸರ್ಕಾರದ ಹೆಲ್ಪ್ ಲೈನ್ ನಂಬರ್ ಕೂಡ ಇದ್ದು, ಆ ನಂಬರ್ ಗೆ ಕಾಲ್ ಮಾಡಿ ಕೂಡ ಗೃಹಲಕ್ಷ್ಮಿ ಯೋಜನೆಗೆ ಅಪ್ಲೈ ಮಾಡಬಹುದು. ಎಲ್ಲಾ ಮಹಿಳೆಯರು ಕೂಡ ಅಪ್ಲೈ ಮಾಡಿದ ಬಳಿಕ ಸ್ಟೇಟಸ್ ಚೆಕ್ ಮಾಡಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ. ಎಲ್ಲವೂ ಸರಿ ಇದ್ದಲ್ಲಿ, ಅಂಥ ಮಹಿಳೆಯರ ಬ್ಯಾಂಕ್ ಖಾತೆಗೆ ಖಂಡಿತವಾಗಿ ಹಣ ಬಂದೆ ಬರುತ್ತದೆ ಎಂದು ತಿಳಿಸಲಾಗಿದೆ.

DBT ಹಣ ವರ್ಗಾವಣೆ ವಿಚಾರದಲ್ಲಿ ಸಮಸ್ಯೆ ಉಂಟಾಗಿರುವ ಕಾರಣ ಮೊದಲ ತಿಂಗಳು ಮತ್ತು ಎರಡನೇ ತಿಂಗಳು ಸಮಸ್ಯೆ ಆಗಿದ್ದು, ಮುಂದಿನ ತಿಂಗಳಿನಿಂದ 15ನೇ ತಾರೀಕಿನ ಒಳಗೆ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಬರುತ್ತದೆ ಎಂದು ಸರ್ಕಾರದಿಂದ ಮಾಹಿತಿ ಸಿಕ್ಕಿದೆ. ಇದನ್ನೂ ಓದಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಸರ್ಕಾರದಿಂದ ಮತ್ತೊಂದು ಅವಕಾಶ, ಈಗಲೇ ಸದುಪಯೋಗ ಪಡಿಸಿಕೊಳ್ಳಿ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!