Cart and foot way in Karnataka Krushi: ನಮ್ಮ ರಾಜ್ಯದ ರೈತರು ಅವರ ಖಾಸಗಿ ಜಮೀನುಗಳಲ್ಲಿ ಓಡಾಡುವುದಕ್ಕೆ ಕಾಲುದಾರಿ, ಬಂಡಿದಾರಿ ಇವುಗಳನ್ನು ಇಟ್ಟುಕೊಂಡಿರುತ್ತಾರೆ. ಆ ದಾರಿಗಳನ್ನು ಮುಚ್ಚಬಾರದು, ಅವುಗಳನ್ನು ರೈತರು ಮತ್ತು ಸ್ಥಳದ ಮಾಲೀಕರು ಬಳಸಬೇಕು ಎಂದು ಇದೀಗ ಸರ್ಕಾರ ಒಂದು ಗುಡ್ ನ್ಯೂಸ್ ನೀಡಿದೆ. ಕಂದಾಯ ಇಲಾಖೆಯು ರಾಜ್ಯದ ಎಲ್ಲಾ ತಹಸೀಲ್ದಾರ್ ಗಳ ಮೂಲಕ ಈ ವಿಚಾರವಾಗಿ ಸೂಚನೆ ಹೊರಡಿಸಿದೆ..
“ರೈತರುಗಳು ಖಾಸಗಿ ಜಮೀನುಗಳ ನಕ್ಷೆಯ ಪ್ರಕಾರ ವ್ಯವಸಾಯದ ಕಾರಣಕ್ಕೆ ಓಡಾಡಲು ಬಳಸುವ ಕಾಲುದಾರಿ, ಬಂಡಿದಾರಿ ಅಥವಾ ಇನ್ನಿತರ ದಾರಿಗಳನ್ನು ಮಾಲೀಕರು ಮುಚ್ಚುವುದು ಕಾನೂನಿಗೆ ವಿರುದ್ಧವಾದದ್ದು, ಒಂದು ವೇಳೆ ಈ ರೀತಿ ಆದರೆ ರೈತರಿಗೆ ತೊಂದರೆ ಆಗದ ಹಾಗೆ ಎಲ್ಲವನ್ನು ಸರಿಪಡಿಸಿಕೊಡಬೇಕು..” ಎಂದು ತಹಸೀಲ್ದಾರ್ ಗಳು ಸಲಹೆ ನೀಡಿದ್ದಾರೆ. ತಾವು ಕೆಲಸ ಮಾಡುವ ಜಮೀನಿನಲ್ಲಿ ರೈತರು ಕೃಷಿಗೆ ಸಂಬಂಧಿಸಿದ ವಸ್ತುಗಳನ್ನು ಸಾಗಿಸಲು, ಓಡಾಡಲು ಸಮಸ್ಯೆ ಆಗುತ್ತದೆ.
Cart and foot way in Karnataka Krushi
ಈ ವಿಚಾರವಾಗಿ ಕಂದಾಯ ಇಲಾಖೆಗೆ ದೂರು ಬಂದಿವೆ, ರೈತರಿಗೆ ಈ ದಾರಿಗಳಲ್ಲಿ ಓಡಾಡಲು ವೈಯಕ್ತಿಕ ದ್ವೇಷದ ಕಾರಣ ಅಥವಾ ಇನ್ನಿತರ ಕಾರಣಗಳಿಂದ ಅಡ್ಡಿ ಮಾಡಲಾಗುತ್ತಿದೆ, ಆ ದಾರಿಗಳನ್ನು ಮುಚ್ಚಲಾಗುತ್ತಿದೆ. ಆದರೆ ರೈತರಿಗೆ ಯಾವುದೇ ರೀತಿಯಲ್ಲೂ ತೊಂದರೆ ಮಾಡಬಾರದು ಎಂದು ಇಲಾಖೆ ಇಂದ ಆದೇಶ ನೀಡಲಾಗಿದ್ದು, ಈ ಥರದ ಪ್ರಕರಣಗಳು ಬಂದಾಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೂಡ ತಿಳಿಸಲಾಗಿದೆ..
1996ರಲ್ಲಿ ಜಾರಿಗೆ ಬಂದಿರುವ ಭೂಕಂದಾಯದ ನಿಯಮದ 59ರ ಅಡಿಯಲ್ಲಿ ದಾರಿಹಕ್ಕು ಮತ್ತು ಇನ್ನುಳಿದ ಹಕ್ಕಿನ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ದಾರಿ ವಿಷಯವಾಗಿ ಜಮೀನುದಾರರು ಹಕ್ಕುಗಳ ದಾಖಲೆಯ ಮೂಲಕ ರಿಜಿಸ್ಟರ್ ಮಾಡಿಸಬಹುದು ಎಂದು ಹೇಳಲಾಗಿದೆ. ಹಾಗೆಯೇ 1882ರಿಂದ ಜಾರಿಯಲ್ಲಿರುವ ಇಂಡಿಯನ್ ಈಸ್ ಮೆಂಟ್ ಆಕ್ಟ್ ಪ್ರಕಾರ ಜಾಗದ ಓನರ್ ಅಥವಾ ಆ ಜಾಗದಲ್ಲಿ ಹೆಚ್ಚು ಸಮಯ ಇರುವವರು ಆ ಜಾಗ ಪ್ರವೇಶ ಮಾಡುವ ಹಕ್ಕು ಮತ್ತು ವಹಿವಾಟಿನ ಹಕ್ಕನ್ನು ಕೂಡ ಹೊಂದಿರುತ್ತಾರೆ.
ಈ ಹಕ್ಕು ಇರುವುದರಿಂದ ಅಕ್ಕಪಕ್ಕದ ಜಮೀನು ಮಾಲೀಕರು ಈ ಹಕ್ಕಿಗೆ ಧಕ್ಕೆ ತರುವ ಹಾಗಿಲ್ಲ ಎಂದು ತಿಳಿಸಿದ್ದಾರೆ. ಅಕಸ್ಮಾತ್ ಈ ರೀತಿ ಸಮಸ್ಯೆ ಆದರೆ, ತಹಸೀಲ್ದಾರ್ ಅವರು ಕ್ರಮ ತೆಗೆದುಕೊಂಡು, ಸಮಸ್ಯೆಗಳನ್ನು ಪರಿಹರಿಸಬೇಕು, ಅದನ್ನು ತೆರವು ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ.