Daughters Property Rights: ಒಂದು ಮನೆ ಎಂದಮೇಲೆ ಆಸ್ತಿ ವಿಷಯಕ್ಕೆ ಸಂಬಂಧಿಸಿದ ಹಾಗೆ ಸಾಕಷ್ಟು ನಿಯಮಗಳು ಜಾರಿಗೆ ಬಂದಿವೆ, ಜನರು ಅವುಗಳನ್ನು ಪಾಲಿಸಲೇಬೇಕು. ಈಗಾಗಲೇ ಸಾಕಷ್ಟು ನಿಯಮಗಳಿದ್ದು, ಆಸ್ತಿಗೆ ಸಂಬಂಧಪಟ್ಟ ಹಾಗೆ, ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಅಡಿ ಮನೆಯ ಗಂಡು ಮಕ್ಕಳಿಗೆ ಮಾತ್ರವಲ್ಲದೆ, ಹೆಣ್ಣುಮಕ್ಕಳಿಗೆ ಕೂಡ ತಂದೆಯ ಆಸ್ತಿಯಲ್ಲಿ ಹಕ್ಕಿದೆ ಎನ್ನುವ ಕಾನೂನು ಜಾರಿಗೆ ಬಂದಿದೆ.
ಮನೆಯಲ್ಲಿ ಗಂಡು ಮಕ್ಕಳು ಹೆಣ್ಣುಮಕ್ಕಳು ಇಬ್ಬರು ಇದ್ದಾಗ, ಮನೆಯ ಗಂಡುಮಕ್ಕಳಿಗೆ ಸುಲಭವಾಗಿ ಆಸ್ತಿ ಸಿಗುತ್ತದೆ, ಆದರೆ ಹೆಣ್ಣುಮಕ್ಕಳಿಗೆ ಸುಲಭವಾಗಿ ಆಸ್ತಿ ಸಿಗುವುದಿಲ್ಲ. ಕೆಲವೊಮ್ಮೆ ನಾನಾ ಕಾರಣಗಳಿಂದ ಹೆಣ್ಣುಮಕ್ಕಳಿಗೆ ಆಸ್ತಿ ಸಿಗದೆ ಹೋಗಬಹುದು. ಹೆಣ್ಣುಮಕ್ಕಳಿಗೆ ತಂದೆಯ ಆಸ್ತಿ ಇರುವ ಹಕ್ಕಿನ ಕುರಿತ ಕಾನೂನು 2005ರ ವರೆಗು ಬೇರೆಯದೇ ರೀತಿಯಲ್ಲಿತ್ತು. ಆದರೆ 2005ರಲ್ಲಿ ಆಸ್ತಿ ವಿಚಾರದಲ್ಲಿ ಗಂಡು ಮಕ್ಕಳಿಗೆ ಇರುವ ಹಾಗೆ, ಹೆಣ್ಣುಮಕ್ಕಳಿಗೆ ಕೂಡ ಸಮಾನ ಹಕ್ಕು ಇದೆ ಎನ್ನುವ ಕಾನೂನನ್ನು ಜಾರಿಗೆ ತರಲಾಯಿತು.
ಈ ರೀತಿಯಲ್ಲಿ 2005ರ ಬಳಿಕ ತಂದೆಯ ಆಸ್ತಿಯನ್ನು ಗಂಡು ಮಕ್ಕಳಿಗೆ ಆಸ್ತಿ ಹಂಚಿಕೆ ಮಾಡುವ ಹಾಗೆ, ಹೆಣ್ಣುಮಕ್ಕಳಿಗೂ ಅಷ್ಟೇ ಸಮಾನವಾಗಿ ಹಂಚಿಕೆ ಮಾಡಬೇಕು ಎಂದು ಕಾನೂನು ಜಾರಿಗೆ ತರಲಾಯಿತು. ಈ ರೀತಿಯಾಗಿ ಒಂದು ಮನೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಪಾಲು ಕೊಡುವ ಹಾಗೆ ಹೆಣ್ಣುಮಕ್ಕಲಿಗೆ ಕೂಡ, ಸಮಾನವಾಗಿ ಆಸ್ತಿ ಹಂಚಿಕೆ ಮಾಡಬೇಕು ಎಂದು ಕಾನೂನು ಜಾರಿಯಾಯಿತು. ಇದು ಪಿತ್ರಾರ್ಜಿತ ಆಸ್ತಿಯ ವಿಚಾರಕ್ಕೆ ಜಾರಿಯಾಗಿರುವ ಕಾನೂನು.
Daughters Property Rights
ಆದರೆ ತಂದೆಯ ಸ್ವಯಾರ್ಜಿತ ಆಸ್ತಿಯ ಬಗ್ಗೆ ಹೇಳುವುದಾದರೆ, ಸ್ವಯಾರ್ಜಿತ ಆಸ್ತಿ ವಿಚಾರದಲ್ಲಿ ಕೆಲವು ಗೊಂದಲವಿದೆ. ತಂದೆ ಸ್ವಂತವಾಗಿ ಸಂಪಾದನೆ ಮಾಡಿರುವ ಆಸ್ತಿ ಆಗಿದ್ದಲ್ಲಿ ಅದನ್ನು ಹೇಗೆ ಪಾಲು ಮಾಡಬೇಕು ಎನ್ನುವುದು ಅವರ ನಿರ್ಧಾರ ಆಗಿರುತ್ತದೆ. ಗಂಡುಮಗನಿಗೆ ಹೆಚ್ಚು ಆಸ್ತಿ ಕೊಟ್ಟು, ಹೆಣ್ಣುಮಗಳಿಗೆ ಕಡಿಮೆ ಆಸ್ತಿ ಕೊಡಲೂಬಹುದು. ಇದು ತಂದೆಯ ನಿರ್ಧಾರ ಆಗಿದ್ದು, ಇದರ ಬಗ್ಗೆ ಹೆಣ್ಣುಮಕ್ಕಳು ನಿರೀಕ್ಷೆ ಮಾಡಲು ಆಗುವುದಿಲ್ಲ.
ಹಲವು ಕಡೆಗಳಲ್ಲಿ ಮನೆಯ ಮಗಳಿಗೆ ಮದುವೆ ಮಾಡಿಕೊಟ್ಟುಬಿಟ್ಟರೆ, ಅವಳಿಗೆ ಆಸ್ತಿಯ ಮೇಲೆ ಪಾಲು ಇರುವುದಿಲ್ಲ ಎಂದು ಇನ್ನು ನಂಬುತ್ತಾರೆ. ಆದರೆ ಹಿಂದೂ ಉತ್ತರಾಧಿಕಾರಿ ಕಾಯ್ದೆಯ ತಿದ್ದುಪಡಿಯಾದ ಬಳಿಕ, ಪಿತ್ರಾರ್ಜಿತ ಆಸ್ತಿಗಳಲ್ಲಿ ಗಂಡು ಮಕ್ಕಳಷ್ಟೇ ಸಮಾನವಾದ ಹಕ್ಕಿದೆ. ಮನೆಯಲ್ಲಿ ಆಸ್ತಿ ನೀಡದೆ ಮೋಸ ಮಾಡಿದರೆ, ಹೆಣ್ಣುಮಕ್ಕಳು ಕಾನೂನಿನ ಬಳಿ ಹೋಗಿ, ಕಾನೂನಿನ ಮೂಲಕವೇ ಆಸ್ತಿ ಪಡೆದುಕೊಳ್ಳಬಹುದು.
ಈ ರೀತಿಯಾಗಿ ಒಂದು ಕುಟುಂಬದಲ್ಲಿ ಹೆಣ್ಣುಮಕ್ಕಳಿಗೆ ಆಸ್ತಿ ವಿಚಾರದಲ್ಲಿ ತಂದೆಯಿಂದ ಅಥವಾ ಸಹೋದರರಿಂದ ಯಾವುದೇ ತೊಂದರೆ ಆದರೆ, ಒಂದು ವೇಳೆ ತಂದೆ ವಿಲ್ ಬರೆಯದೆ ಮರಣ ಹೊಂದಿದರೆ, ಆ ಆಸ್ತಿಯಲ್ಲಿ ಖಂಡಿತವಾಗಿ ಹೆಣ್ಣುಮಗಳಿಗೆ ಪಾಲು ಇರುತ್ತದೆ. ನೀವು ನಿಮ್ಮ ಪಾಲಿನ ಆಸ್ತಿಯನ್ನು ಪಡೆದುಕೊಳ್ಳಬಹುದು.