Gas cylinder agency dealership: ಹಲವು ಜನರು ಮತ್ತೊಬ್ಬರ ಕೈಕೆಳಗೆ ಕೆಲಸ ಮಾಡುವುದಕ್ಕಿಂತ ಹೆಚ್ಚಾಗಿ ಸ್ವಂತ ಬ್ಯುಸಿನೆಸ್ ಮಾಡಬೇಕು ಎಂದು ಆಸೆ ಪಡುತ್ತಾರೆ. ಯಾವುದೇ ಬ್ಯುಸಿನೆಸ್ ಶುರು ಮಾಡುವುದಕ್ಕಿಂತ ಮೊದಲು ಅದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳುವುದು ಒಳ್ಳೆಯದು. ಒಂದು ವೇಳೆ ನೀವು ಕೂಡ ಸ್ವಂತ ಬ್ಯುಸಿನೆಸ್ ಮಾಡಬೇಕು ಎಂದುಕೊಂಡಿದ್ದರೆ ಗ್ಯಾಸ್ ಏಜೆನ್ಸಿ ಶುರು ಮಾಡುವುದು ಒಳ್ಳೆಯ ಆಯ್ಕೆ ಆಗಿದೆ. ಈ ಬ್ಯುಸಿನೆಸ್ ನಲ್ಲಿ ನೀವು ಒಳ್ಳೆಯ ಲಾಭ ಗಳಿಸಬಹುದು. ಹಾಗಿದ್ದಲ್ಲಿ ಗ್ಯಾಸ್ ಏಜೆನ್ಸಿ ಶುರು ಮಾಡುವುದು ಹೇಗೆ ಎನ್ನುವ ಕೆಲವು ವಿಚಾರಗಳನ್ನು ಇಂದು ತಿಳಿದುಕೊಳ್ಳೋಣ.
ಒಂದು ಗ್ಯಾಸ್ ಏಜೆನ್ಸಿ ಶುರು ಮಾಡುವುದಕ್ಕಿಂತ ಮೊದಲು ನೀವು ಯಾವ ಕಂಪನಿಯ ಗ್ಯಾಸ್ ಏಜೆನ್ಸಿ ಶುರು ಮಾಡಬೇಕು ಎಂದುಕೊಂಡಿದ್ದೀರೋ ಆ ಕಂಪನಿಯ ಎಲ್ಲಾ ನಿಯಮಗಳನ್ನು ತಿಳಿದುಕೊಂಡು, ಅದಕ್ಕೆಲ್ಲ ಒಪ್ಪಿಕೊಳ್ಳಬೇಕಾಗುತ್ತದೆ. ಹಾಗೆಯೇ ಗ್ಯಾಸ್ ಏಜೆನ್ಸಿ ಶುರು ಮಾಡುವುದಕ್ಕಾಗಿ ನೀವು ಲೈಸೆನ್ಸ್ ಕೂಡ ಪಡೆದುಕೊಳ್ಳಬೇಕಾಗುತ್ತದೆ. ಗ್ಯಾಸ್ ಏಜೆನ್ಸಿ ಶುರು ಮಾಡುವುದಕ್ಕೆ ಬೇಕಾಗುವ ಲೈಸೆನ್ಸ್ ಗೆ ನೀವು ಆನ್ಲೈನ್ ಮೂಲಕ ಅಪ್ಲಿಕೇಶನ್ ಹಾಕಬಹುದು.
ಹಿಂದೂಸ್ತಾನ್ ಪೆಟ್ರೋಲಿಯಂ ವೆಬ್ಸೈಟ್ ಇಂದ HP Gas Agency ವೆಬ್ಸೈಟ್ ಮೂಲಕ ಅಪ್ಲಿಕೇಶನ್ ಹಾಕಬಹುದು. ಲೈಸೆನ್ಸ್ ಪಡೆಯಲು ಆಗಾಗ ಅಪ್ಲಿಕೇಶನ್ ಗೆ ಆಹ್ವಾನ ಮಾಡಲಾಗುತ್ತದೆ. ಲೈಸೆನ್ಸ್ ಪಡೆಯುವುದಕ್ಕೆ ನೀವು ಒಂದು ಇಂಟರ್ವ್ಯೂ ಕೂಡ ಅಟೆಂಡ್ ಮಾಡಬೇಕಾಗುತ್ತದೆ ಜೊತೆಗೆ ಕೆಲವು ದಾಖಲೆಗಳನ್ನು ಕೂಡ ನೀಡಬೇಕಾಗುತ್ತದೆ. ಇದೆಲ್ಲವನ್ನು ಪಾಸ್ ಮಾಡಿ ಗ್ಯಾಸ್ ಏಜೆನ್ಸಿ ಡಿಸ್ಟ್ರಿಬ್ಯುಟರ್ ಆಗಿ ಆಯ್ಕೆಯಾದ ಬಳಿಕ ನೀವು ಎಲ್ಲಿ ಗ್ಯಾಸ್ ಏಜೆನ್ಸಿ ಶುರು ಮಾಡುತ್ತೀರಿ ಎನ್ನುವುದರ ವಿವರ..
ಗ್ಯಾಸ್ ಸಿಲಿಂಡರ್ ಗಳನ್ನು ಶೇಖರಣೆ ಮಾಡುವ ಗೋಡೌನ್ ಗಳನ್ನು ಅಧಿಕಾರಿಗಳು ಬಂದು ಚೆಕ್ ಮಾಡುತ್ತಾರೆ. ಒಂದು ವೇಳೆ ನಿಮ್ಮ ಬಳಿ ಸ್ವಂತ ಜಾಗ ಇಲ್ಲ ಎಂದರೆ, ನಿಮಗೆ ಇಷ್ಟ ಇರುವ ಜಾಗದ ಭೂಮಿಯನ್ನು 15 ವರ್ಷಗಳವರೆಗು ಗುತ್ತಿಗೆಗೆ ಪಡೆಯಬಹುದು. ಇದರಲ್ಲಿ ಸುಮಾರು 50% ಅಷ್ಟು ಅವಕಾಶ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.
ಇನ್ನುಳಿದ ಹಾಗೆ ರಿಟೈರ್ ಆಗಿರುವ ಪೊಲೀಸ್ ಆಫೀಸರ್ ಗಳು, ನ್ಯಾಷನಲ್ ಲೆವೆಲ್ ಕ್ರೀಡಾಪಟುಗಳು, ವಿಕಲಚೇತನರು, ಮಾಜಿ ಸೈನಿಕರು, ಸ್ವಾತಂತ್ರ್ಯ ಹೋರಾಟಗಾರರು ಇವರುಗಳು ಅರ್ಜಿ ಸಲ್ಲಿಸಿದರೆ, ಇವರಿಗೆ ರಿಸರ್ವೇಷನ್ ಪ್ರಯೋಜನ ಕೂಡ ಸಿಗುತ್ತದೆ. ಈ ಬ್ಯುಸಿನೆಸ್ ಶುರು ಮಾಡುವುದಕ್ಕೆ ನಿಮಗೆ 25 ರಿಂದ 40 ಲಕ್ಷ ರೂಪಾಯಿಯವರೆಗು ಹಣ ಬೇಕಾಗುತ್ತದೆ.
ನಿಮಗೆ ಲೈಸೆನ್ಸ್ ಸಿಕ್ಕಿ, ಒಂದು ಸಾರಿ ನೀವು ಡಿಸ್ಟ್ರಿಬ್ಯುಟರ್ ಆದರೆ ಲಕ್ಷಗಟ್ಟಲೇ ಲಾಭ ಗಳಿಸಬಹುದು. ಇದರಲ್ಲಿ ನಿಮಗೆ ಕಮಿಶನ್ ಮೂಲಕ ಲಾಭ ಸಿಗಲಿದ್ದು, 14ಕೆಜಿ ಗ್ಯಾಸ್ ಸಿಲಿಂಡರ್ ಗಳ ಮೇಲೆ 61.84 ರೂಪಾಯಿ ಕಮಿಷನ್ ಸಿಗುತ್ತದೆ. 5ಕೆಜಿಯ ಅಡುಗೆ ಗ್ಯಾಸ್ ಸಿಲಿಂಡರ್ ಮೇಲೆ 30.90 ರೂಪಾಯಿ ಕಮಿಷನ್ ಸಿಗುತ್ತದೆ. ಈ ರೀತಿಯಾಗಿ ನೀವು ಹೆಚ್ಚು ಲಾಭ ಗಳಿಸಬಹುದು. ಇದನ್ನೂ ಓದಿ ಹೋಮ್ ಗಾರ್ಡ್ ಕೆಲಸಕ್ಕೆ ಅರ್ಜಿ ಸಲ್ಲಿಕೆ ಶುರು, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ