Free gas connection 2023 Karnataka: ನಿಮ್ಮ ಹತ್ತಿರ ಬಿಪಿಎಲ್ ಕಾರ್ಡ್ ಇದ್ದು, ಇನ್ನು ನಿಮ್ಮ ಹತ್ತಿರ ಗ್ಯಾಸ್ ಸಿಲಿಂಡರ್ ಇಲ್ಲ ಎಂದರೆ, ಉಚಿತವಾಗಿ ಗ್ಯಾಸ್ ಸಿಲಿಂಡರ್ ಪಡೆಯುವುದಕ್ಕೆ ಸರ್ಕಾರದಿಂದ ನಿಮಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಇದೀಗ ಸರ್ಕಾರ ನೀಡಿರುವ ಈ ಅವಕಾಶದಿಂದ ನೀವು ಗ್ಯಾಸ್ ಸಿಲಿಂಡರ್ ಗಾಗಿ ಅರ್ಜಿ ಸಲ್ಲಿಸಿ ಸುಲಭವಾಗಿ ಗ್ಯಾಸ್ ಸಿಲಿಂಡರ್ ಪಡೆಯಬಹುದು. ಆನ್ಲೈನ್ ಮೂಲಕ ಗ್ಯಾಸ್ ಸಿಲಿಂಡರ್ ಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಸರ್ಕಾರವೇ ನೀಡಿದೆ.
ಸರ್ಕಾರದಿಂದ ಈಗ ಸಿಕ್ಕಿರುವ ಮಾಹಿತಿಯ ಅನುಸಾರ, ಪ್ರಸ್ತುತ ನಮ್ಮ ದೇಶದಲ್ಲಿರುವ 3 ಗ್ಯಾಸ್ ಏಜೆನ್ಸಿಗಳ ಪೈಕಿ ನಿಮಗೆ ಯಾವುದು ಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬಹುದು. ಆ ಕಂಪನಿಗೆ ನೀವೇ ನೇರವಾಗಿ ಅರ್ಜಿ ಸಲ್ಲಿಸಬಹುದು. ನಿಮಗೆ ಗ್ಯಾಸ್ ಸಿಲಿಂಡರ್ ಸೌಲಭ್ಯ ಸಿಗುವುದು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ. ಈ ಯೋಜನೆಯ ಮೂಲಕ ಗ್ಯಾಸ್ ಸಿಲಿಂಡರ್ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ನೀವು ಮೊದಲಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಅಲ್ಲಿಂದ ಅಧಿಕೃತವಾಗಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಅಪ್ಲಿಕೇಶನ್ ಡೌನ್ಲೋಡ್ ಮಾಡಲು ನೀವು ಕೆಲವು ಮಾಹಿತಿಯನ್ನು ಕೂಡ ನೀಡಬೇಕಾಗುತ್ತದೆ. ಅಪ್ಲೈ ಮಾಡಲು ಕೆಲವು ದಾಖಲೆಗಳ ಅಗತ್ಯ ಕೂಡ ಇದ್ದು, ಅವುಗಳು ಯಾವುವು ಎಂದರೆ ಆಧಾರ್ ಕಾರ್ಡ್, ಫೋನ್ ನಂಬರ್, ಮನೆ ಅಡ್ರೆಸ್ ಇದೆಲ್ಲವೂ ಬೇಕಾಗುತ್ತದೆ.
Free gas connection 2023 Karnataka
ಅಪ್ಲಿಕೇಶನ್ ನಲ್ಲಿ ಕೇಳುವ ಎಲ್ಲಾ ಮಾಹಿತಿಯನ್ನು ಫಿಲ್ ಮಾಡಿ, ಅಗತ್ಯವಿರುವ ಎಲ್ಲಾ ದಾಖಲೆಗಳ ಜೊತೆಗೆ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗೆ ಅಪ್ಲಿಕೇಶನ್ ಅನ್ನು ತಲುಪಿಸಬೇಕು. ನಿಮ್ಮ ಅಪ್ಲಿಕೇಶನ್ ಅನ್ನು ಗ್ಯಾಸ್ ಏಜೆನ್ಸಿ ಚೆಕ್ ಮಾಡಿ, 15 ದಿನಗಳ ಒಳಗೆ ನಿಮಗೆ ಗ್ಯಾಸ್ ಸಿಲಿಂಡರ್ ಒದಗಿಸುತ್ತದೆ. ಅರ್ಜಿ ಸಲ್ಲಿಕೆ ಮಾಡುವ ವಿಧಾನ ಹೇಗೆ ಎಂದು ನೋಡುವುದಾದರೆ..
ಮೊದಲಿಗೆ ನೀವು ವೆಬ್ಸೈಟ್ ಗೆ ಭೇಟಿ ನೀಡಿ, ಅಪ್ಲಿಕೇಶನ್ ಹಾಕುವ ಆಪ್ಶನ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಭಾರತೀಯ ಅನಿಲ ಅನ್ನುವ ಆಯ್ಕೆ ಕಾಣುತ್ತದೆ, ಅದನ್ನು ಸೆಲೆಕ್ಟ್ ಮಾಡಿ. ಇಲ್ಲಿ ಕೇಳುವ ನಿಮ್ಮ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ. ನಂತರ ನೀವು ಅಪ್ಲಿಕೇಶನ್ ಎನ್ನುವ ಆಪ್ಶನ್ ಆಯ್ಕೆ ಮಾಡಬೇಕು. ಇಷ್ಟು ಕೆಲಸ ಮಾಡಿದರೆ, ಆನ್ಲೈನ್ ನಲ್ಲಿ ಅಪ್ಲಿಕೇಶನ್ ಹಾಕುವ ಪ್ರಕ್ರಿಯೆ ಮುಗಿದಿದೆ ಎಂದು ಅರ್ಥ.
ಈ ಪ್ರೊಸಿಜರ್ ಫಾಲೋ ಮಾಡಿ, 15 ದಿವಸದ ಒಳಗೆ ನಿಮ್ಮ ಫೋನ್ ನಂಬರ್ ಗೆ ಗ್ಯಾಸ್ ಏಜೆನ್ಸಿ ಇಂದ ಕನ್ಫರ್ಮೇಷನ್ ಮೆಸೇಜ್ ಬರುತ್ತದೆ. ಇದನ್ನೂ ಓದಿ ರೈತರಿಗೆ ಕರೆಂಟ್ ವಿಚಾರದಲ್ಲಿ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ