Anitha kumaraswamy VS Radhika Kumaraswamy: ಅನಿತಾ ಮತ್ತು ರಾಧಿಕಾ ಇವರಿಬ್ಬರೂ ಕುಮಾರಸ್ವಾಮಿಯ ಪತ್ನಿಯರು. ಅವರಿಬ್ಬರೂ ಓದಿರುವುದು ಎಷ್ಟು ಅವರಿಬ್ಬರ ಆಸ್ತಿ ಎಷ್ಟು ಅವರಿಬ್ಬರ ಜಾತಿ ಯಾವುದು ಅವರಿಬ್ಬರ ಫುಲ್ ಬಯೋಡೇಟಾ ತಿಳಿದುಕೊಳ್ಳೋಣ. ಅನಿತಾ ಕುಮಾರಸ್ವಾಮಿ ಅವರ ವಯಸ್ಸು 63 ವರ್ಷ ಆಗಿದ್ದರೆ ರಾಧಿಕಾ ಕುಮಾರಸ್ವಾಮಿ ಅವರದು ಇನ್ನು 36 ವರ್ಷ ವಯಸ್ಸಾಗಿದೆ. ಇವರಿಬ್ಬರ ವಯಸ್ಸಿನಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಅನಿತಾ ಕುಮಾರಸ್ವಾಮಿಗಿಂತ ರಾಧಿಕಾ ಕುಮಾರಸ್ವಾಮಿ ಅವರು ಸುಮಾರು 27 ವರ್ಷ ಚಿಕ್ಕವರಾಗಿದ್ದಾರೆ.
ಕುಮಾರಸ್ವಾಮಿಯವರು ಒಕ್ಕಲಿಗ ಸಮುದಾಯದವರಾಗಿದ್ದು ಸ್ವಂತ ದೇವೇಗೌಡರೇ ತಮ್ಮ ಮಗನ ಮದುವೆಯನ್ನ ತಮ್ಮ ಸಮುದಾಯದಲ್ಲೇ ಹುಡುಕಿ ಮಾಡಿದ್ದಾರೆ. ಆದರೆ ರಾಧಿಕಾ ಕುಮಾರಸ್ವಾಮಿ ಅವರು ಮಂಗಳೂರಿನ ಬಿಲ್ಲವ ಸಮುದಾಯದವರು. ಅನುಕೂಲಕ್ಕ ಕುಟುಂಬದಲ್ಲಿ ಜನಿಸಿದ ಅಂತ ಕುಮಾರಸ್ವಾಮಿಯವರು ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ತಮ್ಮ ಬಿಎ ಪದವಿಯನ್ನು ಮುಗಿಸಿದ್ದಾರೆ.
ಆದರೆ ರಾಧಿಕಾ ಕುಮಾರಸ್ವಾಮಿ ಅವರು ಚಿಕ್ಕಂದಿನಿಂದಲೂ ಕೂಡ ಕಷ್ಟ ಕಂಡವರು ಕಷ್ಟದಲ್ಲಿ ಹುಟ್ಟಿ ಬೆಳೆದು ತಮ್ಮ ಒಂಬತ್ತನೇ ತರಗತಿಯನ್ನು ಮುಗಿಸಿದರು.ನಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸಣ್ಣ ವಯಸ್ಸಿನಲ್ಲಿ ತುಂಬಾ ಕಷ್ಟ ಕಂಡ ರಾಧಿಕಾ ಕುಮಾರಸ್ವಾಮಿಯವರು ಚಿತ್ರರಂಗಕ್ಕೆ ಬಂದು ಅಲ್ಲಿ ತಮ್ಮ ಜೀವನವನ್ನು ಕಟ್ಟಿಕೊಂಡರು.
ಅನಿತಾ ಅವರು ಕುಮಾರಸ್ವಾಮಿ ಅವರನ್ನ 1986ರಲ್ಲಿ ವಿವಾಹವಾದರು. ಇವತ್ತಿನವರೆಗೂ ಕುಮಾರಸ್ವಾಮಿಯವರ ಜೊತೆಗೆ ಸುಂದರವಾದ ಜೀವನವನ್ನು ನಡೆಸುತ್ತಿದ್ದಾರೆ. ಇವರಿಗೆ ಒಬ್ಬ ಮಗ ಸೊಸೆ ಹಾಗೂ ಮೊಮ್ಮಗ ಇದ್ದಾರೆ. ರಾಧಿಕಾ ಅವರಿಗೆ ತಮ್ಮ 14ನೇ ವಯಸ್ಸಿನಲ್ಲಿ ಮದುವೆಯಾಗಿತ್ತು ಆದರೆ ಗಂಡ ಯಾವುದು ಕಾರಣದಿಂದ ತೀರಿಕೊಂಡಿದ್ದರು ಅದಕ್ಕೋಸ್ಕರ ಅವರು ಚಿತ್ರರಂಗವನ್ನು ಮುಂದುವರಿಸಿದರು.
ನಂತರ 2006ರಲ್ಲಿ ಕುಮಾರಸ್ವಾಮಿಯವರೊಂದಿಗೆ ವಿವಾಹವಾಯಿತು ಶಮಿಕ ಎಂಬ ಮಗಳು ಕೂಡ ಇದ್ದಾಳೆ. ಕೊನೆಗೆ ರಾಧಿಕಾ ಅವರೇ ತಮ್ಮ ಮದುವೆಯ ಗುಟ್ಟನ್ನ ಜನತೆಯ ಎದುರಿಗೆ ಹೇಳಿಕೊಂಡಿದ್ದರು. ನಂತರ ಆ ಸುದ್ದಿ ಬೇರೆ ಬೇರೆ ತಿರುವನ್ನ ಪಡೆಯಿತು. ಈಗ ಕುಮಾರಸ್ವಾಮಿಯವರು ಹೆಂಡತಿಯಾದ ಅನಿತಾ ಕುಮಾರಸ್ವಾಮಿ ಹಾಗೂ ಮಗ ಸೊಸೆ ಮತ್ತು ಮೊಮ್ಮಗನ ಜೊತೆ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ, ಹಾಗೂ ಶೇರ್ ಮಾಡಿ. Video Credit For India Post