Tarpaulin subsidy farmers: ರೈತರಿಗೆ ಅನುಕೂಲ ಆಗುವ ಹಾಗೆ ನಮ್ಮ ಸರ್ಕಾರವು ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತರುತ್ತದೆ. ರೈತರಿಗೆ ಕೃಷಿ ಕೆಲಸ ಮಾಡುವುದಕ್ಕೆ ಹಲವು ಉಪಕರಣಗಳು, ಸಲಕರಣೆಗಳು ಬೇಕಾಗುತ್ತದೆ. ಅದರಲ್ಲಿ ಟಾರ್ಪಲಿನ್ ಕೂಡ ಒಂದು. ಟಾರ್ಪಲಿನ್ ಅನ್ನು ಕೃಷಿ ಮಾಡುವ ಜಾಗದಲ್ಲಿರುವ ಹೊಂಡಗಳಲ್ಲಿ ನೀರನ್ನು ಸ್ಟಾಕ್ ಮಾಡುವುದಕ್ಕೆ, ಬೆಳೆದಿರುವ ಕಟಾವುಗಳನ್ನು ಮಳೆ ಇಂದ ರಕ್ಷಿಸುವುದಕ್ಕೆ ಟಾರ್ಪಲಿನ್ ಬೇಕಾಗುತ್ತದೆ. ಕೃಷಿ ಕೆಲಸದ ಪ್ರತಿ ಹಂತದಲ್ಲಿ ಕೂಡ ಟಾರ್ಪಲಿನ್ ಬೇಕಾಗುತ್ತದೆ.
ಈ ಕಾರಣಕ್ಕೆ ಕೃಷಿ ಇಲಾಖೆಯು ಟಾರ್ಪಲಿನ್ ಗಳನ್ನು ಕಡಿಮೆ ಬೆಲೆಗೆ ಸಬ್ಸಿಡಿ ಅಡಿಯಲ್ಲಿ ನೀಡುವುದಕ್ಕೆ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಇಷ್ಟು ವರ್ಷಗಳ ಹಾಗೆ ಈ ವರ್ಷ ಕೂಡ ಕಡಿಮೆ ಬೆಲೆಗೆ ಟಾರ್ಪಲಿನ್ ಗಳನ್ನು ಸಬ್ಸಿಡಿ ಮೂಲಕ ರೈತರಿಗೆ ವಿತರಣೆ ಮಾಡುವುದಕ್ಕೆ, ಅರ್ಜಿ ಆಹ್ವಾನ ನೀಡಲಾಗಿದ್ದು, ಆಸಕ್ತಿ ಇರುವ ರೈತರು ಇದಕ್ಕಾಗಿ ಅರ್ಜಿ ಸಲ್ಲಿಸಬಹುದು. ಈ ಯೋಜನೆಯ ಮೂಲಕ ಟಾರ್ಪಲಿನ್ ಪಡೆಯುವುದಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ ಏನು? ಯಾವೆಲ್ಲಾ ದಾಖಲೆ ಅಗತ್ಯವಿದೆ? ಎಲ್ಲವನ್ನು ತಿಳಿಸುತ್ತೇವೆ ನೋಡಿ..
ಈ ಯೋಜನೆಗೆ ಅರ್ಜಿ ಸಲ್ಲಿಸಿ, ಆಯ್ಕೆಯಾಗುವ ರೈತರಿಗೆ ಕೃಷಿ ಇಲಾಖೆ ವತಿಯಿಂದ 18*24 ಅಳತೆ ಬರುವ, ಅಂದರೆ 18 ಅಡಿ ಉದ್ದ ಮತ್ತು 24 ಅಡಿ ಅಗಲ ಇರುವ ಟಾರ್ಪಲಿನ್ ಗಳು 50% ಸಬ್ಸಿಡಿ ದರದಲ್ಲಿ ಸಿಗುತ್ತದೆ. ಈ ಹಿಂದಿನ ವರ್ಷದಲ್ಲಿ 1300 ರಿಂದ 1600 ರೂಪಾಯಿ ಬೆಲೆಗೆ ಟಾರ್ಪಲಿನ್ ವಿತರಣೆ ಮಾಡಲಾಗಿದೆ..ಈ ವರ್ಷ ಸಹ ಅದೇ ರೀತಿಯಲ್ಲಿ ಮಾಡಲಾಗುತ್ತದೆ. SC/ST ಸಮುದಾಯಕ್ಕೆ ಸೇರಿದವರಿಗೆ 90% ವರೆಗು ಸಬ್ಸಿಡಿ ಸಿಗುತ್ತದೆ.
ಸಬ್ಸಿಡಿ ಮೂಲಕ ಟಾರ್ಪಲಿನ್ ಪಡೆಯಲು ಅಗತ್ಯವಿರುವ ಅರ್ಹತೆಗಳು..
ರೈತ ಕರ್ನಾಟಕ ರಾಜ್ಯಕ್ಕೆ ಸೇರಿದವರೇ ಆಗಿರಬೇಕು
ಅರ್ಜಿ ಸಲ್ಲಿಸುವ ರೈತನ ಹೆಸರಿನಲ್ಲಿಯೇ ಕೃಷಿ ಭೂಮಿ ಇರಬೇಕು
ಎಲ್ಲಾ ವರ್ಗಕ್ಕೆ ಸೇರಿದ ರೈತರು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನೀಡಬೇಕಾಗುತ್ತದೆ.
ಒಂದು ಸಾರಿ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ, ಮತ್ತೊಮ್ಮೆ ಅರ್ಜಿ ಸಲ್ಲಿಸಲು ಆಗುವುದಿಲ್ಲ..
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು..
ಫಿಲ್ ಮಾಡಿರುವ ಅಪ್ಲಿಕೇಶನ್ ಜೊತೆಗೆ ಸರ್ಕಾರ ನಿರ್ಧರಿಸಿರುವ ಹಣದ ಮೊತ್ತದ ನಗದು.
ಅರ್ಜಿ ಹಾಕುವ ರೈತರ ಆಧಾರ್ ಕಾರ್ಡ್.
ಜಮೀನಿಗೆ ಸೇರಿದ ಪಹಣಿ ಪತ್ರ.
ಆಕ್ಟಿವ್ ಆಗಿರುವ ಫೋನ್ ನಂಬರ್.
SC/ST ಸಮುದಾಯಕ್ಕೆ ಸೇರಿದವರಾದರೆ ಕ್ಯಾಸ್ಟ್ ಮತ್ತು ಇನ್ಕಮ್ ಸರ್ಟಿಫಿಕೇಟ್.
ಅರ್ಜಿ ಸಲ್ಲಿಕೆ ಪ್ರಕ್ರಿಯೆ..
ಈ ಯೋಜನೆಗೆ ಅರ್ಜಿ ಸಲ್ಲಿಸಿ ಟಾರ್ಪಲಿನ್ ಪಡೆಯುವುದು ಹೇಗೆ ಎಂದರೆ ರಸಗೊಬ್ಬರ ಬಿತ್ತನೆ ಬೀಜ ಇದಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದ ರೀತಿಯಲ್ಲಿ, ಅವರವರ ತಾಲ್ಲೂಕಿನಲ್ಲಿ ಇರುವ ರೈತ ಸಂಪರ್ಕ ಕೇಂದ್ರದ ಮೂಲಕ ಅರ್ಜಿ ಸಲ್ಲಿಸುತ್ತಿದ್ದ ಹಾಗೆಯೇ ಈ ಯೋಜನೆಗೂ ಕೂಡ ರೈತರು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ರೈತರು ತಮಗೆ ಹತ್ತಿರದಲ್ಲಿರುವ ರೈತ ಉತ್ಪಾದಕ ಕಂಪನಿ (FPO) ಆಫೀಸ್ ಗೆ ಭೇಟಿ ನೀಡಿ ಕಡಿಮೆ ಬಡ್ಡಿ ಮತ್ತು ಸಬ್ಸಿಡಿಗೆ ಟಾರ್ಪಲಿನ್ ಪಡೆದುಕೊಳ್ಳಬಹುದು.