Rented House New Rules: ನಮ್ಮ ದೇಶದಲ್ಲಿ ಸಾಕಷ್ಟು ಜನರು ಬಾಡಿಗೆ ಮನೆಗಳಲ್ಲೇ ವಾಸ್ತವ್ಯ ಹೂಡಿದ್ದಾರೆ. ಇತ್ತ ನಮ್ಮ ಸರ್ಕಾರಕ್ಕೆ ದೇಶದ ಎಲ್ಲರೂ ಕೂಡ ಸ್ವಂತ ಮನೆಯಲ್ಲಿ ವಾಸ ಮಾಡಬೇಕು ಎಂದು ಆಸೆ ಇದೆ. ಅದಕ್ಕಾಗಿ ಸರ್ಕಾರ ಕೆಳವರ್ಗದ ಜನರಿಗೆ ಹೊಸ ಮನೆಗಳನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಅಷ್ಟೇ ಅಲ್ಲದೆ, ಮನೆ ಕಟ್ಟಿಸಲು ಆರ್ಥಿಕ ಸಹಾಯವನ್ನು ಕೂಡ ನೀಡುತ್ತದೆ. ಹಲವು ಯೋಜನೆಗಳ ಮೂಲಕ ಜನರಿಗೆ ಸ್ವಂತ ಮನೆ ಸಿಗುವ ಹಾಗೆ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶ.

ಆದರೆ ಎಲ್ಲಾ ನಾಗರೀಕರಿಗೂ ಕೂಡ ಸ್ವಂತ ಮನೆ ಸಿಗುವ ಹಾಗೆ ಮಾಡುವುದಕ್ಕೆ ಇನ್ನು ಹೆಚ್ಚಿನ ಸಮಯ ಬೇಕಾಗುತ್ತದೆ. ಆದರೆ ದೊಡ್ಡ ನಗರಗಳಿಂದ ಹಿಡಿದು ಸಣ್ಣ ಹಳ್ಳಿಗಳವರೆಗು ಕೂಡ ಬಹಳಷ್ಟು ಜನರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಹಾಗಿರುವಾಗ, ಬಾಡಿಗೆ ಮನೆಯಲ್ಲಿ ವಾಸ ಮಾಡುವ ಜನರು ತಮ್ಮ ಮನೆಯ ಮಾಲೀಕರ ವಿಚಾರಕ್ಕೆ ಸಂಬಂಧಿಸಿದ ಹಾಗೆ ಜಾರಿಗೆ ಬಂದಿರುವ ಕಾನೂನಿನ ನಿಯಮಗಳನ್ನು ತಿಳಿಡುಕೊಳ್ಳಬೇಕು. ಆಗ ನಿಮಗೆ ಯಾವುದೇ ತೊಂದರೆ ಆಗುವುದಿಲ್ಲ.

ಒಂದು ಮನೆಗೆ ಬಾಡಿಗೆಗೆ ಹೋಗುವಾಗ, ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಅಗ್ರಿಮೆಂಟ್ ಮಾಡಲಾಗುತ್ತದೆ. ಅದರಲ್ಲಿ ಪ್ರತಿ ತಿಂಗಳು ಮನೆಯ ಬಾಡಿಗೆ ಎಷ್ಟು, ಅಡ್ವಾನ್ಸ್ ಹಣ ಎಷ್ಟು ಕೊಡುತ್ತಾರೆ, ಮನೆಯ ವಾಟರ್ ಬಿಲ್ ಮತ್ತು ಎಲೆಕ್ಟ್ರಿಸಿಟಿ ಬಿಲ್ ಗಳನ್ನು ಬಾಡಿಗೆಗೆ ಇರುವವರೇ ಕಟ್ಟಬೇಕು, ಮನೆ ಬದಲಾವಣೆ ಮಾಡುವ ವೇಳೆ ತಾವಿದ್ದ ಬಾಡಿಗೆ ಮನೆಯ ವಸ್ತುಗಳನ್ನು ಡ್ಯಾಮೇಜ್ ಮಾಡಿರಬಾರದು ಹಾಗೇನಾದರು ಮಾಡಿದ್ದರೆ, ಅದನ್ನು ಸರಿಪಡಿಸಲು ಅವರೇ ಹಣ ಕೊಡಬೇಕು. ಮನೆ ಪೇಂಟಿಂಗ್ ಗಾಗಿ ಅಡ್ವಾನ್ಸ್ ಕೊಟ್ಟಿರುವ ಹಣದಲ್ಲಿ ಕಟ್ ಮಾಡಿಕೊಳ್ಳಲಾಗುತ್ತದೆ. ಈ ಎಲ್ಲಾ ವಿಚಾರಗಳು ರೆಂಟ್ ಅಗ್ರಿಮೆಂಟ್ ನಲ್ಲಿ ಬರೆದಿರುತ್ತಾರೆ.

Rented House New Rules

ಸಾಮಾನ್ಯವಾಗಿ ರೆಂಟ್ ಅಗ್ರಿಮೆಂಟ್ ಮಾಡುವುದು 11 ತಿಂಗಳಿಗೆ, ಈ ಗಡುವು ಮುಗಿದ ಮೇಲು ಮನೆಯಲ್ಲೇ ಕಂಟಿನ್ಯೂ ಮಾಡುವುದಾದರೆ ಮತ್ತೆ ರಿನ್ಯು ಮಾಡಿಸಬೇಕಾಗುತ್ತದೆ. ಇದನ್ನು ಓದಿ ಓನರ್ ಮತ್ತು ರೆಂಟ್ ಗೆ ಇರುವವರು ಸೈನ್ ಮಾಡಬೇಕು. 11 ತಿಂಗಳ ನಂತರ ರೆಂಟ್ ಅಗ್ರಿಮೆಂಟ್ ಅನ್ನು ಹೊಸದಾಗಿ ಮಾಡಿಸದೆ ಹೋದರೆ, ಹೆಚ್ಚಿನ ಸಮಸ್ಯೆಗಳನ್ನು ಅನುಭವಿಸುತ್ತೀರಿ. ಅದಕ್ಕೆ ಕಾರಣ ಸುಪ್ರೀಂ ನಲ್ಲಿ ಬಂದ ಒಂದು ಕೇಸ್ ನಲ್ಲಿ, ಒಬ್ಬ ವ್ಯಕ್ತಿ 12 ವರ್ಷಗಳ ಕಾಲ ಒಂದು ಮನೆಯಲ್ಲಿ ವಾಸ್ತವ್ಯ ಹೂಡಿದರೆ, ಆ ಮನೆಯನ್ನು ತಮ್ಮ ಸ್ವಂತವಾಗಿ ಸ್ವಾಧೀನ ಪಡಿಸಿಕೊಳ್ಳಲು ದಾವೆ ಹೂಡಬಹುದು ಎಂದು ಕೋರ್ಟ್ ನಲ್ಲಿ ತಿಳಿಸಲಾಗಿದೆ.

ಇದಕ್ಕಾಗಿ ಕೋರ್ಟ್ ನಲ್ಲಿ ಅಗತ್ಯವಿರುವ ದಾಖಲೆ ನೀಡಿ ಸಾಬೀತು ಮಾಡಬೇಕಾಗುತ್ತದೆ. ಈ ರೀತಿ ಸ್ವಾಧೀನ ಪಡಿಸಿಕೊಳ್ಳುವುದಕ್ಕೆ ಆ ವ್ಯಕ್ತಿ 12 ವರ್ಷಗಳ ಕಾಲ ಆ ಮನೆಯಲ್ಲಿ ವಾಸ ಮಾಡಿರುವ ವಿಚಾರ ಓನರ್ ಗೆ ಗೊತ್ತಿರಬೇಕು, ಅಕ್ಕಪಕ್ಕದ ಮನೆಯವರಿಗೆ ಗೊತ್ತಿರಬೇಕು. ಕರೆಂಟ್ ಬೈಕ್, ವಾಟರ್ ಬಿಲ್ ಎರಡನ್ನು ಕಟ್ಟಿರುವುದಕ್ಕೆ ಪ್ರೂಫ್ ಇರಬೇಕು. ಹೀಗೆ ಎಲ್ಲಾ ದಾಖಲೆಗಳು ಇದ್ದು, ಅವರು 12 ವರ್ಷಗಳ ಕಾಲ ಅದೇ ಮನೆಯಲ್ಲಿದ್ದರೆ, ಆ ಮನೆಯನ್ನು ತಮ್ಮ ಮನೆಯಾಗಿ ಮಾಡಿಕೊಳ್ಳಬಹುದು.

ಈ ರೂಲ್ಸ್ ಇರುವುದರಿಂದ ಮನೆಯನ್ನು ಬಾಡಿಗೆಗೆ ಕೊಡುವವರು 12 ವರ್ಷಗಳ ಕಾಲ ಯಾರಿಗೂ ಮನೆಯನ್ನು ಬಾಡಿಗೆಗೆ ಕೊಡಬಾರದು, ಅದು ಉತ್ತಮವಾದ ಕೆಲಸ ಆಗಿದೆ..2014ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ದ್ವಿಸದಸ್ಯರ ಪೀಠದಲ್ಲಿ 12 ವರ್ಷಗಳ ಕಾಲ ಇರುವ ಮನೆ ಅಥವಾ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಆಗುವುದಿಲ್ಲ ಎನ್ನುವುದಾಗಿ ತಿಳಿಸಿತ್ತು, ಆದರೆ ಈ ಕಾನೂನನ್ನು ರದ್ದು ಮಾಡಲಾಯಿತು. ನ್ಯಾಯಾಧೀಶರಾದ ಅರುಣ್ ಮಿಶ್ರ ಅವರ ನೇತೃತ್ವದ ತ್ರಿಸದಸ್ಯ ಪೀಠ ರಚನೆಯಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದೆ. ಹಾಗಾಗಿ ಮನೆಯ ಓನರ್ ಗಳು ಈ ವಿಚಾರವಾಗಿ ಹುಷಾರಾಗಿ ಇರುವುದು ಒಳ್ಳೆಯದು.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!