E swathu: ಇ ದಾಖಲೆ ಪತ್ರಗಳನ್ನು ಪಡೆಯಲು ಇಷ್ಟು ದಿವಸಗಳ ಕಾಲ ದಿನಗಟ್ಟಲೇ, ತಿಂಗಳುಗಟ್ಟಲೇ ಕಾಯಬೇಕಿತ್ತು. ಆದರೆ ಇನ್ನುಮುಂದೆ ಈ ಥರದ ಸಮಸ್ಯೆ ಆಗುವುದಿಲ್ಲ. ದಿಶಾಂಕ್ ಎನ್ನುವ ಆಪ್ ಇ ಸ್ವತ್ತುಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಈ ಆಪ್ ಅನ್ನು ಇಷ್ಟು ದಿನಗಳ ಕಾಲ ನಾಡ ಕಚೇರಿ ಮತ್ತು ತಾಲ್ಲೂಕು ಕಚೇರಿಗಳಲ್ಲಿ ಮಾತ್ರ ಬಳಕೆಗೆ ಉಪಯೋಗವಾಗಿದ್ದ ದಿಶಾಂಕ್ ಆಪ್ ಅನ್ನು, ಇನ್ನುಮುಂದೆ ಗ್ರಾಮ ಅಥವಾ ಹಳ್ಳಿಗಳ ಮಟ್ಟದಲ್ಲಿ ಪರಿಚಯ ಮಾಡಲು ನಿರ್ಧಾರ ಮಾಡಲಾಗಿದೆ. ಈ ಆಪ್ ಗ್ರಾಮ ಲೆವೆಲ್ ನಲ್ಲಿ ಲಾಂಚ್ ಆದರೆ ತಿಂಗಳುಗಟ್ಟಲೇ ಕಾಯುವುದು ಮತ್ತು ಜಾಸ್ತಿ ಹಣ ನೀಡುವುದು ತಪ್ಪುತ್ತದೆ.
ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದು, ಈ ಆಪ್ ಬಗ್ಗೆ ತಿಳಿಸಿಕೊಡುತ್ತೇವೆ ನೋಡಿ.. ದಿಶಾಂಕ್ ಆಪ್ ಇದೊಂದು ಮೊಬೈಲ್ ಆಪ್ ಆಗಿದ್ದು, ನಮ್ಮ ರಾಜ್ಯದ ಎಲ್ಲಾ ಆಸ್ತಿಗಳು ಮತ್ತು ಪ್ಲಾಟ್ ಗಳ ವಿವರವನ್ನು ಈ ಆಪ್ ಇಂದ ತಿಳಿದುಕೊಳ್ಳಬಹುದು. ಈ ಆಪ್ ಇಂದ ಭೂಮಿಯ ಬಗ್ಗೆ ಮಾಹಿತಿ, ನೆಲದ ವಿಸ್ತರಣೆ, ನಕ್ಷೆ ಮತ್ತು ಇನ್ನಿತರ ಮಾಹಿತಿ, ಗ್ರಾಮ ಪಂಚಾಯಿತಿಯ ಇನ್ನಿತರ ನಕ್ಷೆ ಕೂಡ ಈ ಅಪ್ ಮೂಲಕ ಸಿಗುತ್ತದೆ. ದಿಶಾಂಕ್ ಆಪ್ ನಲ್ಲಿ ಭೂಮಿಗಳಿಗೆ ಸಂಬಂಧಿಸಿದ ಡೇಟಾ ಬೇಸ್, ದಾಖಲೆಯ ಮಾಹಿತಿಯನ್ನು ಸಹ ಲಿಂಕ್ ಮಾಡಲಾಗಿದೆ.
ಈ ಆಪ್ ನ ಉದ್ದೇಶ ಏನು ಎಂದರೆ, ಭೂಮಿಗೆ ಸಂಬಂಧಿಸಿದ ಹಾಗೆ ಯಾವುದೇ ಮೋಸಗಳನ್ನು ಎದುರಿಸದ ಹಾಗೆ ಸಹಾಯ ಮಾಡುವ ಆಪ್ ಇದಾಗಿದೆ. ಈ ಆಪ್ ಅನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಲಾಂಚ್ ಮಾಡಿದರೆ, ಬಹಳ ಬೇಗ ಇಸ್ವತ್ತುಗಳನ್ನು ಪಡೆದುಕೊಳ್ಳುವುದಕ್ಕೆ ಸಹಾಯ ಮಾಡುತ್ತದೆ. ಇದು ಬಹಳ ಸಮಯ ತೆಗೆದುಕೊಳ್ಳುವ ಕೆಲಸ ಆಗಿತ್ತು, ಇ ಸ್ವತ್ತು ಪಡೆಯಲು ತಂತ್ರಾಂಶದ ರೀತಿಯಲ್ಲಿ ನಮೂನೆ 9, 2ಎ, ನಮೂನೆ 2ಬಿ ಇದನ್ನೆಲ್ಲ ಪಡೆಯಲು ಗ್ರಾಮ ಪಂಚಾಯಿತಿ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಆಗ ಅಧಿಕಾರಿಗಳು ಆ ಆಸ್ತಿ ತಮ್ಮ ಗ್ರಾಮದ ವ್ಯಾಪ್ತಿಗೆ ಬರುತ್ತಾ ಎನ್ನುವುದನ್ನು ಚೆಕ್ ಮಾಡಿ ಆನ್ಲೈನ್ ಅರ್ಜಿಯನ್ನು ಮುಂದುವರೆಸುತ್ತಿದ್ದರು.
ಈ ಪ್ರಕ್ರಿಯೆ ಮುಗಿದ ನಂತರ ಇ ಸ್ವತ್ತು ಪಡೆಯುವ ಜನರು ನಾಡಕಚೇರಿಗೆ ಭೇಟಿ ನೀಡಿ, 800 ರೂಪಾಯಿ ಹಣ ಪಾವತಿ ಮಾಡಿದ ಬಳಿಕ, ಭೂಮಾಪಕರು ಭೂಮಿಯನ್ನು ಅಳತೆ ಮಾಡಿ, ಈ ಸದರಿ ಆಸ್ತಿಯು ಗ್ರಾಮ ಠಾಣಾ ವ್ಯಾಪ್ತಿಯ ಹೊರಗೆ ಅಥವಾ ಹೊರಗೆ ಬರುತ್ತಾ ಎನ್ನುವುದನ್ನು ಚೆಕ್ ಮಾಡಿ, ಅಗತ್ಯ ದಾಖಲೆಗಳ ಜೊತೆಗೆ ಮೋಜಣಿ ತಂತ್ರಾಂಶವನ್ನು ಗ್ರಾಮ ಪಂಚಾಯಿತಿಗೆ ನೀಡುತ್ತಿದ್ದರು. ಈ ರೀತಿಯಾಗಿ ಇದು ಹೆಚ್ಚು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆ ಆಗಿತ್ತು.
ದಿಶಾಂಕ್ ಆಪ್ ಬಳಸಿದರೆ ಇಷ್ಟು ಸಮಯ ತೆಗೆದುಕೊಳ್ಳುವುದಿಲ್ಲ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎಲ್ಲವು ಮುಗಿಯುತ್ತದೆ. ಇ ಸ್ವತ್ತು ಬೇಕಿರುವವರು, ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿದರೆ, ದ್ವಿತೀಯ ಸಹಾಯಕರು ಅರ್ಜಿಯಲ್ಲಿ ಇರುವ ಮಾಹಿತಿಯ ಅನುಸಾರ ದಿಶಾಂಕ್ ಆಪ್ ಇಂದ, ಸ್ವತ್ತಿಗೆ ಸೇರಿದ ಎಲ್ಲಾ ಜಿಪಿಎಸ್ , ಆಸ್ತಿಯ ಫೋಟೋ ತೆಗೆಯುತ್ತಾರೆ. ಈ ಪ್ರಕ್ರಿಯೆ ಇಂದ PDO ಗಳು ಮತ್ತು ಅಧಿಕಾರಿಗಳು ಆ ಸ್ಥಳಕ್ಕೆ ಭೇಟಿ ನೀಡುವ ಅಗತ್ಯ ಇರುವುದಿಲ್ಲ. ಆಪ್ ಇಂದ ಎಲ್ಲವನ್ನು ಚೆಕ್ ಮಾಡಬಹುದು.
ಈ ಪ್ರಕ್ರಿಯೆ ಇಂದ ಸಮಯ ಕಡಿಮೆ ಆಗುತ್ತದೆ, ಅರ್ಜಿ ಶುಲ್ಕ 200 ರೂಪಾಯಿ ಮಾತ್ರ ಇರುತ್ತದೆ. ಹಾಗೆಯೇ 80 ಇಂದ 90% ಅರ್ಜಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ, ನಿಗದಿ ಮಾಡಿದ ಸಮಯಕ್ಕೆ ಎಲ್ಲಾ ಕೆಲಸ ಮುಗಿಯುತ್ತದೆ. ಇನ್ನುಳಿದ 10% ಅರ್ಜಿಗಳು ಸರ್ವೇ ಇಲಾಖೆಗೆ ಹೋಗುತ್ತದೆ, ಈ ಕ್ರಮ ಜಾರಿಯಾದರೆ ಸರ್ಕಾರ ಮತ್ತು ಅರ್ಜಿ ಹಾಕುವವರು ಇಬ್ಬರಿಗೂ ಹೆಚ್ಚಿನ ಅನುಕೂಲ. ಈ ಮಾಹಿತಿಯನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ರಾಜ್ಯ ಪರಿಷತ್ ನ ಸದಸ್ಯರಾದ ಹೆಚ್.ಆರ್ ರಾಜೇಶ್ ಅವರು ತಿಳಿಸಿದ್ದಾರೆ.