ನಮ್ಮ ದೇಶದಲ್ಲಿ ಅತಿಹೆಚ್ಚು ಗ್ರಾಹಕರನ್ನು ಹೊಂದಿರುವ ಮತ್ತು ಅತಿಹೆಚ್ಚು ಗ್ರಾಹಕರ ನಂಬಿಕೆ ಗಳಿಸಿರುವ ಬ್ಯಾಂಕ್ ಎಂದರೆ ಅದು SBI ಎಂದು ಹೇಳಬಹುದು. SBI ತಮ್ಮ ಗ್ರಾಹಕರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತದೆ. ಜೊತೆಗೆ ಗ್ರಾಹಕರ ಸುರಕ್ಷತೆಗಾಗಿ ಹಲವು ನಿಯಮಗಳನ್ನು ಕೂಡ ಜಾರಿಗೆ ತರುತ್ತದೆ. ಅದೇ ರೀತಿ ಈಗ SBI ತಮ್ಮ ಗ್ರಾಹಕರಿಗಾಗಿ ಎರಡು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಅದೆಲ್ಲವನ್ನು ಕೂಡ ನೀವು ಪಾಲಿಸಬೇಕಿದೆ.
ಎರಡರಲ್ಲಿ ಒಂದು ಕೆಲಸವನ್ನು ಸೆಪ್ಟೆಂಬರ್ 15ರ ಒಳಗೆ ಮಾಡಬೇಕು, ಇನ್ನೊಂದು ಕೆಲಸವನ್ನು ಸೆಪ್ಟೆಂಬರ್ 30ರ ಒಳಗೆ ಮಾಡಬೇಕು. ಒಂದು ವೇಳೆ ನೀವು ಈ ಎರಡು ಕೆಲಸಗಳನ್ನು ಮಾಡದೆ ಹೋದರೆ, ನಿಮ್ಮ ಬ್ಯಾಂಕ್ ಅಕೌಂಟ್ ಗೆ ತೊಂದರೆ ಆಗುತ್ತದೆ. ನಿಮ್ಮ ಬ್ಯಾಂಕ್ ಅಕೌಂಟ್ ನಿಷ್ಕ್ರಿಯವಾಗುತ್ತದೆ, ಅಕೌಂಟ್ ನಲ್ಲಿ ಇರುವ ಹಣ ಬ್ಲಾಕ್ ಆಗುತ್ತದೆ. ಇದು SBI ನ ಸ್ಟ್ರಿಕ್ಟ್ ಆದ ನಿಯಮ ಆಗಿರುವ ಕಾರಣ ಎಲ್ಲಾ ಗ್ರಾಹಕರು ಕೂಡ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು.
ಒಂದು ವೇಳೆ ನೀವು ಅಥವಾ ನಿಮಗೆ ಪರಿಚಯ ಇರುವವರು SBI ನಲ್ಲಿ ಅಕೌಂಟ್ ಹೊಂದಿದ್ದರೆ ಖಂಡಿತವಾಗಿ ಅವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ. ಒಂದು ವೇಳೆ ನೀವು SBI ಗ್ರಾಹಕರಾಗಿದ್ದರೆ, ಇಂದೇ ನಿಮ್ಮ ಬ್ಯಾಂಕ್ ಪಾಸ್ ಬುಕ್ ಮತ್ತು ಆಧಾರ್ ಕಾರ್ಡ್ ಎರಡನ್ನು ತೆಗೆದುಕೊಂಡು ಹೋಗಿ ಈ ಎರಡು ಕೆಲಸಗಳನ್ನು ಮಾಡಿಸಿ. ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಎನ್ನುವುದು ಕಡ್ಡಾಯ ನಿಯಮ ಆಗಿದೆ.
ಒಂದು ವೇಳೆ ನೀವು ಇನ್ನು ಕೂಡ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲ ಎಂದರೆ ಸೆಪ್ಟೆಂಬರ್ 15ರ ಒಳಗೆ ಮಾಡಿಸಬೇಕು. ನಮ್ಮ ರಾಜ್ಯ ಸರ್ಕಾರದ ಯೋಜನೆಗಳ ಹಣವು ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಅಕೌಂಟ್ ಗೆ ಡೆಪಾಸಿಟ್ ಆಗುತ್ತಿರುವ ಕಾರಣ, ಆಧಾರ್ ಕಾರ್ಸ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ.
ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ, ಅಟಲ್ ಬಿಹಾರಿ ಯೋಜನೆ ಮತ್ತು ಇನ್ನಿತರ ಯೋಜನೆಗಳ ಸೌಲಭ್ಯ ಪಡೆಯಲು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು. ಮತ್ತೊಂದು ವಿಚಾರ ಏನು ಎಂದರೆ, SBI ನಲ್ಲಿ ಲಾಕರ್ ಹೊಂದಿರುವ ಎಲ್ಲರೂ ಕೂಡ ಬ್ಯಾಂಕ್ ಗೆ ಹೋಗಿ ಲಾಕರ್ ಗೆ ಸಂಬಂಧಿಸಿದ ಹಾಗೆ ಹೊಸ ಲಾಕರ್ ಒಪ್ಪಂದಕ್ಕೆ ಸಹಿ ಹಾಕಬೇಕಾಗಿ SBI ಸೂಚನೆ ನೀಡಿದೆ.
ಈ ಕೆಲಸ ಮಾಡಲಿ ಸೆಪ್ಟೆಂಬರ್ 30ರವರೆಗು ಸಮಯ ನೀಡಲಾಗಿದೆ. ಈ ದಿನಾಂಕದ ಒಳಗೆ ಲಾಕರ್ ಹೊಂದಿರುವ ಎಲ್ಲರೂ ಕೂಡ ಹೊಸ ಒಪ್ಪಂದಕ್ಕೆ ಸೈನ್ ಮಾಡಬೇಕಾಗಿ SBI ಸೂಚನೆ ನೀಡಿದೆ. SBI ಈ ಬಗ್ಗೆ ಆದೇಶ ನೀಡಿ, ಲಾಕರ್ ಹೊಂದಿರುವ ಎಲ್ಲಾ ಗ್ರಾಹಕರು ಕೂಡ ಆದಷ್ಟು ಬೇಗ ಬ್ಯಾಂಕ್ ಶಾಖೆಗೆ ಬಂದು ಹೊಸ ಲಾಕರ್ ಒಪ್ಪಂದಕ್ಕೆ ಸೈನ್ ಮಾಡಬೇಕು, ಸೈನ್ ಮಾಡುವುದಕ್ಕಿಂತ ಮೊದಲು ಒಪ್ಪಂದದಲ್ಲಿ ಇರುವ ಸೂಚನೆಗಳನ್ನು ಓದಬೇಕು ಎಂದು ತಿಳಿಸಿದೆ. ಈ ಎರಡು ಕೆಲಸಗಳನ್ನು SBI ಗ್ರಾಹಕರು ಕಡ್ಡಾಯವಾಗಿ ಮಾಡಬೇಕಿದೆ.