Lakshmi Hebbalkar biography: ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹುಟ್ಟಿದ್ದು 1975ರ ಫೆಬ್ರವರಿ 14ರಂದು ಬೆಳಗಾವಿಯಲ್ಲಿ. ಇವರ ತಂದೆ ಬಸವರಾಜ್ ಹಟ್ಟಿಹೊಳಿ, ತಾಯಿ ಗಿರಿಜಾದೇವಿ ಹಟ್ಟಿಹೊಳಿ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಶಾಲಾ ಶಿಕ್ಷಣ ಮುಗಿಸಿದ್ದು ಬೆಳಗಾವಿಯಲ್ಲೇ, ಮೈಸೂರು ಯೂನಿವರ್ಸಿಟಿಯಲ್ಲಿ ಪೊಲಿಟಿಕಲ್ ಸೈನ್ಸ್ ವಿಷಯದಲ್ಲಿ ಎಂಎ ಮಾಡಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜಕೀಯಕ್ಕೆ ಬಂದಿದ್ದು 1998 ರಲ್ಲಿ. 23 ವರ್ಷದವರಿದ್ದಾಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು ರಾಜಾಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಇವರನ್ನು ರಾಜಕೀಯಕ್ಕೆ ಕರೆತಂದಿದ್ದು, ಕಾಂಗ್ರೆಸ್ ಪಕ್ಷದ ಖ್ಯಾತ ರಾಜಕಾರಣಿ ಮಾರ್ಗರೇಟ್ ಆಳ್ವ ಅವರು.

ಆ ವೇಳೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಾರ್ಗರೇಟ್ ಆಳ್ವ ಅವರು ಕೆನರಾ ಕ್ಷೇತ್ರದಿಂದ ಎಲೆಕ್ಷನ್ ಗೆ ನಿಂತಿದ್ದರು, ಈ ಕ್ಷೇತ್ರಕ್ಕೆ ಖಾನಾಪುರ, ಬೆಳಗಾವಿ ಊರುಗಳು ಕೂಡ ಸೇರುತ್ತಿದ್ದವು. ಇಲ್ಲಿಗೆ ಪ್ರಚಾರಕ್ಕಾಗಿ ಬಂದ ಮಾರ್ಗರೇಟ್ ಆಳ್ವ ಅವರು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಅವರನ್ನು ನೋಡಿ ರಾಜಕೀಯಕ್ಕೆ ಕರೆತಂದರು. ಮಾರ್ಗರೇಟ್ ಆಳ್ವ ಅವರೇ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮೊದಲ ರಾಜಕೀಯ ಗುರು. ಆಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕಾಂಗ್ರೆಸ್ ಪಕ್ಷದ ಒಬ್ಬ ಕಾರ್ಯಕರ್ತೆ ಆಗಿರುತ್ತಾರೆ ಅಷ್ಟೇ, ಆಗಿನ ಸಿಎಂ ಎಸ್.ಎಂ.ಕೃಷ್ಣ ಅವರು ಮೊದಲ ಸಾರಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಖಾನಾಪುರದ ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ಲಿಮಿಟೆಡ್ ಗೆ ನೇಮಕ ಮಾಡಿದರು.

ಆಗ ಕೋ ಆಪರೇಟಿವ್ ಶುಗರ್ ಫ್ಯಾಕ್ಟರಿಗಳೆಲ್ಲವು ರಾಜ್ಯ ಸರ್ಕಾರದ ಸಹಕಾರ ಇಲಾಖೆಯ ಕೆಳಗೆ ಬರುತ್ತಿದ್ದವು, ಈ ಇಲಾಖೆಗೆ ಡಿಕೆ ಶಿವಕುಮಾರ್ ಅವರು ಮಂತ್ರಿ ಆಗಿದ್ದರು. ಸಕ್ಕರೆ ಕಾರ್ಖಾನೆಯ ನಿರ್ದೇಶಕಿಯಾದ ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬೆಂಗಳೂರಿಗೆ ಬಂದು ಹೋಗುವುದು ಜಾಸ್ತಿಯಾಯಿತು. ಆಗಿನಿಂದ ಡಿಕೆಶಿ ಅವರ ಪರಿಚಯವಾಯಿತು. ಎಸ್.ಎಮ್. ಕೃಷ್ಣ ಅವರು ಸಿಎಂ ಆಗಿದ್ದಾಗ ಡಿಕೆಶಿ ಅವರು ಸಹಕಾರ ಇಲಾಖೆ ಜೊತೆಗೆ ನಗಾರಭಿವೃದ್ಧಿ ಮಂತ್ರಿ ಕೂಡ ಆಗಿದ್ದರು, 2007ರಲ್ಲಿ ಡಿಕೆಶಿ ಅವರು ಬೆಳಗಾವಿ ನಗರಾಭಿವೃದ್ಧಿಗೆ ಸೇರಿದ G ಕ್ಯಾಟಗರಿಯ 7 ನಿವೇಶನಗಳನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕುಟುಂಬದವರಿಗೆ ಹಂಚಿದ್ದಾರೆ ಎಂದು ಆರೋಪ ಕೇಳಿಬಂದಿತ್ತು.

ಈ ಆರೋಪ ಮಾಡಿದ್ದು ಕಾಂಗ್ರೆಸ್ ಪಕ್ಷದ ಶಾಸಕರೇ ಆಗಿದ್ದ ಶಂಕರ್ ಮುನವಳ್ಳಿ ಎನ್ನುವವರು. ಆದರೆ ಡಿಕೆಶಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಇಬ್ಬರು ಕೂಡ ಈ ಆರೋಪ ಸುಳ್ಳು ಎಂದಿದ್ದರು. 2009ರಲ್ಲಿ ಕಾಂಗ್ರೆಸ್ ಪಕ್ಷವು ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿಯಾಗಿ ನೇಮಕ ಮಾಡಿತು. ನಂತರ ಎಐಸಿಸಿ ಸದಸ್ಯೆ ಕೂಡ ಆದರು. 2010ರಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆಯಾದರು, ಇವರು ಬೆಳಗಾವಿ ಕಾಂಗ್ರೆಸ್ ಪಕ್ಷದ ಮೊದಲ ಮಹಿಳಾ ಅಭ್ಯರ್ಥಿ ಎಂದು ಕೂಡ ಹೆಸರು ಪಡೆದರು. 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಭಾಗಕ್ಕೆ ಕಾಂಗ್ರೆಸ್ ಪಕ್ಷದ ಎಲೆಕ್ಷನ್ ಟಿಕೆಟ್ ಸಿಕ್ಕಿತು.

ಈ ಎಲೆಕ್ಷನ್ ನಲ್ಲಿ ಬಿಜೆಪಿ ಪಕ್ಷದ ಸಂಜಯ್ ಪಾಟೀಲ್, ಕಾಂಗ್ರೆಸ್ ನ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಪಕ್ಷೇತರ ಅಭ್ಯರ್ಥಿ ನಡುವೆ ಟಫ್ ಫೈಟ್ ನಡೆದಿತ್ತು, ಆದರೆ ಕೇವಲ 2500 ವೊಟ್ಸ್ ಅಂತರದಲ್ಲಿ, 3ನೇ ಸ್ಥಾನದಲ್ಲಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಎಲೆಕ್ಷನ್ ಸೋತಿದ್ದರು. ನಂತರ 2014ರಲ್ಲಿ ಕಾಂಗ್ರೆಸ್ ಪಕ್ಷ ಇವರಿಗೆ ಲೋಕಸಭೆಯ ಟಿಕೆಟ್ ಕೊಟ್ಟಿತ್ತು, ಈ ಎಲೆಕ್ಷನ್ ನಲ್ಲಿ ಬಿಜೆಪಿಯ ಸುರೇಶ್ ಅಂಗಡಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಡುವೆ ಪೈಪೋಟಿ ಇತ್ತು. ಆದರೆ 75 ಸಾವಿರ ವೋಟ್ ಗಳ ಅಂತರದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೋತಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೋಲು ಕಂಡಿದ್ದರು ಕೂಡ, 2015ರಲ್ಲಿ ಇವರನ್ನು ಕೆಪಿಸಿಸಿ ಮಹಿಳಾ ಸಂಘದ ಅಧ್ಯಕ್ಷೆಯಾಗಿ ಕಾಂಗ್ರೆಸ್ ಸರ್ಕಾರ ಇವರನ್ನು ನೇಮಕ ಮಾಡಿತು.

ಇವರ ಪದಗ್ರಹಣ ಕಾರ್ಯಕ್ರಮಕ್ಕೆ ಆಗಿನ ಸಿಎಂ ಸಿದ್ದರಾಮಯ್ಯ ಅವರು ಕೂಡ ಭಾಗಿಯಾಗಿದ್ದರು. ಈ ರೀತಿ ಆದ ನಂತರ ಇವರಿಗೆ ಹೈಕಮಾಂಡ್ ವರೆಗು ಒಳ್ಳೆಯ ಕನೆಕ್ಷನ್ ಇದೆ ಎನ್ನುವ ವಿಚಾರ ಸುದ್ದಿಯಾಗಿತ್ತು. ಬೆಳಗಾವಿ ಕಡೆಯಲ್ಲಿ ಜಾರಕಿಹೊಳಿ ಕುಟುಂಬದ ಸತೀಶ್ ಜಾರಕಿಹೊಳಿ ಮತ್ತು ರಮೇಶ್ ಜಾರಕಿಹೊಳಿ ಇವರಿಬ್ಬರ ಪ್ರಾಬಲ್ಯತೆ ಹೆಚ್ಚು, ಇವರೊಡನೇ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಒಳ್ಳೆಯ ಒಡನಾಟ ಇತ್ತು. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಆಗುವುದಕ್ಕೆ ಮತ್ತು ಒಳ್ಳೆಯ ಸ್ಥಾನ ಪಡೆಯುವುದಕ್ಕೆ ಸತೀಶ್ ಜಾರಕಿಹೊಳಿ ಅವರ ಸಹಕಾರ ಇದೆ ಎಂದು ಹೇಳಲಾಗುತ್ತದೆ. ಇನ್ನು ರಮೇಶ್ ಜಾರಕಿಹೊಳಿ ಅವರು ಕೂಡ ಲಕ್ಷ್ಮಿ ಅವರೊಡನೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದರು, ಇಬ್ಬರ ನಡುವೆ ಹಣಕಾಸಿನ ನಂಟು ಕೂಡ ಇತ್ತು ಎನ್ನಲಾಗಿದೆ.

ಈ ವೇಳೆ 2016ರಲ್ಲಿ ಸತೀಶ್ ಜಾರಕಿಹೊಳಿ ಅವರು ಮಂತ್ರಿಪಟ್ಟ ಕಳೆದುಕೊಂಡರು. ರಮೇಶ್ ಜಾರಕಿಹೊಳಿ ಅವರು ಮಂತ್ರಿಯಾದರು. ಈ ಬದಲಾವಣೆ ಇಂದ ರಮೇಶ್ ಅವರು ಲಕ್ಷ್ಮೀ ಅವರಿಗೆ ಹೆಚ್ಚು ಹತ್ತಿರವಾದರು. ರಮೇಶ್ ಜಾರಕಿಹೊಳಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರ ರಾಜಕೀಯದ ಮೆಂಟರ್ ಆದರು. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಲಕ್ಷ್ಮಿತಾಯಿ ಫೌಂಡೇಶನ್ ಹೆಸರಿನಿಂದ ಸಮಾಜಸೇವೆಯ ಕಾರ್ಯಗಳನ್ನು ಮಾಡುತ್ತಿದ್ದರು, ಹಾಗೆಯೇ 2018ರಲ್ಲಿ ಅವರಿಗೆ ವಿಧಾನಸಭಾ ಎಲೆಕ್ಷನ್ ಟಿಕೆಟ್ ಸಿಕ್ಕಿತು, ಆಗ ಎದುರಾಳಿ ಸಂಜಯ್ ಪಾಟೀಲ್ ಅವರ ವಿರುದ್ಧ ಬರೋಬ್ಬರಿ 52 ಸಾವಿರ ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದರು.

ಮೊದಲ ಸಾರಿ ಎಂ.ಎಲ್.ಎ ಆದ ನಂತರ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಈ ಎಲೆಕ್ಷನ್ ನಲ್ಲಿ ಏನಾದರೂ ಸೋತಿದ್ದರೆ ಏನಾದರೂ ಮಾಡಿಕೊಳ್ಳುತ್ತೇನೆ ಅಂತ ಅಮ್ಮನ ಜೊತೆಗೆ ಹೇಳಿದ್ದೆ. ನನ್ನಲ್ಲಿ ಧೈರ್ಯವಿದೆ ಆದರೆ ಈ ವೇಳೆಗೆ ನನ್ನಲ್ಲಿ ಶಕ್ತಿ ಉಳಿದಿರಲಿಲ್ಲ. ನೀವಲ್ಲ ನನ್ನನ್ನು ಬದುಕುಳಿಯುವ ಹಾಗೆ ಮಾಡಿದ್ರಿ, ಧನ್ಯವಾದಗಳು ಎಂದು ಹೇಳಿದ್ದರು. ಈ ಎಲೆಕ್ಷನ್ ಮುಗಿದ ಕೆಲವೇ ತಿಂಗಳುಗಳಲ್ಲಿ, ಬೆಳಗಾವಿಯ PLD ಬ್ಯಾಂಕ್ ಅಧ್ಯಕ್ಷ ಸ್ಥಾನದ ಎಲೆಕ್ಷನ್ ಬಂತು. ಈ ಎಲೆಕ್ಷನ್ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಾರಕಿಹೊಳಿ ಅಣ್ಣ ತಮ್ಮಂದಿರ ನಡುವೆ ಭಾರಿ ಫೈಟ್ ನಡೆದಿತ್ತು, ಈ ಜಗಳ ವಿಪರೀತವಾದರು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಠ ಬಿಡಲಿಲ್ಲ, ಕೊನೆಗೆ ಆ ವೇಳೆ ಕೆಪಿಸಿ ಕಾರ್ಯಧ್ಯಕ್ಷರಾಗಿದ್ದ ಈಶ್ವರ್ ಖಂಡ್ರೆ ಅವರು ಸಂಧಾನ ಮಾಡಿಸಿದ್ದರು.

Lakshmi Hebbalkar biography

ಬಳಿಕ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯ ಸ್ಥಾನವನ್ನು ಕಳೆದುಕೊಂಡರು. ಇದಕ್ಕೆ ಜಾರಕಿಹೊಳಿ ಬ್ರದರ್ಸ್ ಕಾರಣ ಎಂದು ಕೂಡ ಹೇಳಲಾಗಿತ್ತು. ನಂತರ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಮೈಸೂರು ಮಿನಿರಲ್ಸ್ ಲಿಮಿಟೆಡ್ ಅಧ್ಯಕ್ಷೆಯಾಗಿ ನೇಮಕ ಮಾಡಲಾಯಿತು. ಬಳಿಕ 2019ರಲ್ಲಿ ಅಕ್ರಮ ಹಣ ವರ್ಗಾವಣೆ ಕಾರಣಕ್ಕೆ ED ಅಧಿಕಾರಿಗಳು ಡಿಕೆ ಶಿವಕುಮಾರ್ ಅವರನ್ನು ಅರೆಸ್ಟ್ ಮಾಡಿದ್ದರು, ಆ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೊಡನೆ ಲಿಂಕ್ ಇದ್ದ ಕಾರಣಕ್ಕೆ, ಅವರನ್ನು ದೆಹಲಿಗೆ ಕರೆಸಿ ವಿಚಾರಣೆ ಮಾಡಲಾಗಿತ್ತು. 2021ರಲ್ಲಿ ವಿಧಾನ ಪರಿಷತ್ ಚುನಾವಣೆ ನಡೆದಾಗ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮನಾದ ಚೆನ್ನರಾಜ್ ಹಟ್ಟಿಹೊಳಿ ಅವರಿಗೆ ಕಾಂಗ್ರೆಸ್ ಇಂದ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದರು.

ಇನ್ನು ಈ ವರ್ಷ ನಡೆದ ವಿಧಾನಸಭಾ ಎಲೆಕ್ಷನ್ ನಲ್ಲಿ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಿ, ಬರೋಬ್ಬರಿ 56 ಸಾವಿರ ಮತಗಳಿಂದ ಯಶಸ್ಸು ಗಳಿಸಿ, MLA ಆದರು. ಇವರಿಗೆ ಮಂತ್ರಿಪಟ್ಟ ಕೊಟ್ಟಿರುವ ಕಾಂಗ್ರೆಸ್ ಸರ್ಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮತ್ತು ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಖಾತೆಯನ್ನು ನೀಡಿ ಮಂತ್ರಿಯನ್ನಾಗಿ ಮಾಡಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮದುವೆಯಾಗಿದ್ದು ರವೀಂದ್ರ ಹೆಬ್ಬಾಳ್ಕರ್ ಅವರೊಡನೆ. ಇವರ ಮಗನ ಹೆಸರು ಮೃಣಾಲ್ ಹೆಬ್ಬಾಳ್ಕರ್, ಇವರ ಆಸ್ತಿ ಸುಮಾರು 13ಕೋಟಿ ರೂಪಾಯಿಗಳು ಎಂದು 2023ರಲ್ಲಿ ತಿಳಿಸಿದ್ದಾರೆ. ಹಾಗೆಯೇ ಲಕ್ಷ್ಮೀ ಹೆಬ್ಬಾಳ್ಕರ್ ಅವರ ತಮ್ಮ ಚೆನ್ನರಾಜ್ ಹಟ್ಟಿಹೊಳಿ ಅವರ ಒಟ್ಟು ಆಸ್ತಿ 33 ಕೋಟಿ ಎಂದು 2021ರಲ್ಲಿ ತಿಳಿಸಿದ್ದರು.

ಹರ್ಷ ಶುಗರ್ಸ್, ಮೃಣಾಲ್ ಶುಗರ್ಸ್, ಹರ್ಷ ಬಿಲ್ಡರ್ಸ್ ಮತ್ತು ಡೆವೆಲಪರ್ಸ್ ಕಂಪನಿಯ ಡೈರೆಕ್ಟರ್ ಆಗಿದ್ದಾರೆ ಲಕ್ಷ್ಮಿ ಹೆಬ್ಬಾಳ್ಕರ್. ಹಾಗೆಯೇ ತಾವು ಶುರು ಮಾಡಿರುವ ಫೌಂಡೇಶನ್ ನ ಅದ್ಯಾಕೆಯಾಗಿದ್ದಾರೆ. ಒಂದು ಸಾರಿ ತಮ್ಮ ವಿರುದ್ಧ ಬಂದ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿ, ಸುಂದರವಾಗಿ ಕಾಣುವವರ ಮೇಲೆ ಆರೋಪಗಳು ಹೆಚ್ಚಾಗಿ ಬರುತ್ತದೆ. ನಾನು ಸುಮಾರಾಗಿ ಇದ್ದಿದ್ರೆ ನನ್ನ ಮೇಲೆ ಇಷ್ಟು ಆರೋಪಗಳು ಬರುತ್ತಾ ಇರಲಿಲ್ಲವೇನೋ.. ಎಂದು ಹೇಳಿದ್ದರು. ಇದಿಷ್ಟು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗೆಗಿನ ವಿಚಾರಗಳು.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!