District collector salary: ಜಿಲ್ಲಾಧಿಕಾರಿ ಆಗುವುದು ಸುಲಭದ ವಿಷಯವಲ್ಲ, UPSC ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಬಹಳಷ್ಟು ಶ್ರಮಪಡಬೇಕು. ಈ ಪರೀಕ್ಷೆ ಕ್ಲಿಯರ್ ಮಾಡಿ, ನಂತರ ಟ್ರೇನಿಂಗ್ ಎಲ್ಲವೂ ಆದ ಬಳಿಕ ಜಿಲ್ಲಾಧಿಕಾರಿಯ ಪೋಸ್ಟ್ ಸಿಗುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಒಂದೇ ಮೊತ್ತದ ವೇತನ ಸಿಗುವುದಿಲ್ಲ, ಅವರಿಗೆ ಇರುವ ಅನುಭವ, ಪ್ರೊಮೋಷನ್ ಇದೆಲ್ಲದರ ಮೇಲೆ ಬೇರೆ ಬೇರೆ ಮೊತ್ತ ಇರುತ್ತದೆ. ಹಾಗಿದ್ದರೆ ನಮ್ಮ ರಾಜ್ಯದಲ್ಲಿ ಯಾವ ಡಿಸಿಗೆ ಎಷ್ಟು ಸಂಬಳ ಸಿಗುತ್ತದೆ ಎಂದು ತಿಳಿಯೋಣ ಬನ್ನಿ..

ಮೊದಲನೆಯದಾಗಿ ದಾವಣಗೆರೆ ಡಿಸಿ ಆಗಿರುವ ಡಾ.ಎಂ.ವಿ ವೆಂಕಟೇಶ್ ಅವರಿಗೆ ಸಿಗುವ ತಿಂಗಳ ವೇತನ ₹1,34,500 ರೂಪಾಯಿಗಳು. ಇವರು ನಮ್ಮ ರಾಜ್ಯದಲ್ಲಿ ಅತಿಹೆಚ್ಚು ಸಂಬಳ ಪಡೆಯುವ ಜಿಲ್ಲಾಧಿಕಾರಿ ಆಗಿದ್ದಾರೆ. ಇನ್ನು 2ನೇ ಸ್ಥಾನದಲ್ಲಿ ಇರುವುದು ಬೀದರ್ ನ ಜಿಲ್ಲಾಧಿಕಾರಿ ತಿಕಾರಿ ಗೋವಿಂದ್ ರೆಡ್ಡಿ, ಇವರು ಅವರು ತಿಂಗಳಿಗೆ ₹1,09,100 ವೇತನ ಪಡೆಯುತ್ತಿದ್ದಾರೆ. 2013ರಲ್ಲಿ ಇವರು KAS ಅಧಿಕಾರಿ ಆಗಿದ್ದರು ನಂತರ ಜೆಲ್ಲಾಧಿಕಾರಿಯಾಗಿ ಪ್ರೊಮೋಷನ್ ಪಡೆದರು. 3ನೇ ಸ್ಥಾನದಲ್ಲಿ ಇರುವುದು ಗದಗ ಜಿಲ್ಲೆಯ ಡಿಸಿ ವೈಶಾಲಿ ಎಂಎಲ್ ಅವರು, ಇವರ ತಿಂಗಳ ವೇತನ ಕೂಡ ₹1,09,100 ರೂಪಾಯಿಗಳು.

District collector salary

4ನೇ ಸ್ಥಾನದಲ್ಲಿ ಇರುವುದು ಉಡುಪಿ ಜಿಲ್ಲೆಯ ಡಿಸಿ ವಿದ್ಯಾ ಕುಮಾರಿ ಅವರು, ಇವರ ತಿಂಗಳ ವೇತನ ಸಹ ಪ್ರತಿ ತಿಂಗಲಿ ₹1,09,100 ರೂಪಾಯಿ ಆಗಿದೆ. ಇವರು 2014ರ ಬ್ಯಾಚ್ ನಲ್ಲಿ ಮುಖ್ಯ ಕೆಎಎಸ್ ಅಧಿಕಾರಿ ಆಗಿದ್ದರು, ನಂತರ ಪ್ರೊಮೋಷನ್ ಸಿಕ್ಕಿತು. 5ನೇ ಸ್ಥಾನದಲ್ಲಿ ಬೆಂಗಳೂರು ಗ್ರಾಮಾಂತರ ವಿಭಾಗದ ಜಿಲ್ಲಾಧಿಕಾರಿ ಆಗಿರುವ ಡಾ.ಎನ್ ಶಿವಶಂಕರ್ ಇದ್ದಾರೆ ಇವರ ತಿಂಗಳ ವೇತನ ₹1,05,950 ರೂಪಾಯಿ ಆಗಿದೆ. ಇವರು 2012ನೇ ಬ್ಯಾಚ್ ನ ಕೆಎಎಸ್ ಅಧಿಕಾರಿ ಆಗಿದ್ದು, ನಂತರ ಪ್ರಮೋಟ್ ಆಯಿತು.

6ನೇ ಸ್ಥಾನದಲ್ಲಿ ಇರುವುದು ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು, ಇವರ ತಿಂಗಳ ವೇತನ ₹1,05,900 ರೂಪಾಯಿಗಳು. ಇವರು ಸಹ 2012ನೇ ಸಾಲಿನ ಕೆಎಎಸ್ ಅಧಿಕಾರಿ ಆಗಿದ್ದರು, ನಂತರ ಇವರಿಗೆ ಪ್ರಮೋಷನ್ ಸಿಕ್ಕಿ ಡಿಸಿ ಆಗಿದ್ದಾರೆ. 7ನೇ ಸ್ಥಾನದಲ್ಲಿ ಇರುವುದು ಬೆಂಗಳೂರು ನಗರ ವಿಭಾಗದ ಜಿಲ್ಲಾಧಿಕಾರಿ ದಯಾನಂದ ಕೆಎ ಅವರು, ಇವರ ತಿಂಗಳ ವೇತನ ₹1,05,900 ರೂಪಾಯಿಗಳು. 8ನೇ ಸ್ಥಾನದಲ್ಲಿ ಇರುವುದು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ, ಇವರಿಗೆ ಈಗ ಸಿಗುತ್ತಿರುವ ತಿಂಗಳ ವೇತನ ₹1,05,900 ರೂಪಾಯಿಗಳು. 9ನೇ ಸ್ಥಾನದಲ್ಲಿ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿ ಇದ್ದು, ಇವರಿಗೆ ಸಿಗುತ್ತಿರುವ ತಿಂಗಳ ವೇತನ ₹1,05,900 ರೂಪಾಯಿಗಳು..

10ನೇ ಸ್ಥಾನದಲ್ಲಿ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿ ಸತ್ಯಭಾಮ ಅವರಿದ್ದಾರೆ, ಇವರ ತಿಂಗಳ ವೇತನ ಕೂಡ ₹1,05,900 ರೂಪಾಯಿಗಳು. 11ನೇ ಸ್ಥಾನದಲ್ಲಿ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಅವರು ಇದ್ದಾರೆ, ಇವರ ತಿಂಗಳ ಸಂಬಳ ₹1,02,900 ರೂಪಾಯಿ ಆಗಿದೆ. 12ನೇ ಸ್ಥಾನದಲ್ಲಿ ಇರುವುದು ಬಾಗಲಕೋಟೆ ಜಿಲ್ಲೆಯ ಡಿಸಿ ಜಾನಕಿ ಇವರ ತಿಂಗಳ ವೇತನ ₹1,02,900 ರೂಪಾಯಿ ಆಗಿದೆ. ಇದಿಷ್ಟು ನಮ್ಮ ರಾಜ್ಯದ ಜಿಲ್ಲಾಧಿಕಾರಿಗಳು ಪಡೆಯುವ ಅತಿಹೆಚ್ಚು ವೇತನದ ವಿವರ ಆಗಿರುತ್ತದೆ.

ಇದನ್ನೂ ಓದಿ: ಅಸ್ತಿ ಖರೀದಿ ಅಥವಾ ಮಾರಾಟ ಮಾಡುವವರಿಗೆ ಇವತ್ತಿನಿಂದ ಹೊಸ ರೂಲ್ಸ್ ಜಾರಿ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!