Ration Card Update in Gruhalakshmi Schemes: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವಂತಹ ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಾರಂಭಗೊಂಡಿದೆ ಮತ್ತು ಅರ್ಜಿ ಹಾಕದೆ ಇರುವಂತವರು ಅರ್ಜಿಯನ್ನು ಸಲ್ಲಿಸಿ. ಸರ್ಕಾರಿ ಹುದ್ದೆ ಹೊಂದಿರುವ ಕುಟುಂಬಸ್ಥರು ಹಾಗೂ IT ರಿಟರ್ನ್ ಮತ್ತು GST ಪೇಯರ್ಸ್ ಗಳಾಗಿರುವ ಕುಟುಂಬದವರಿಗೆ ಈ ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಸಿಗುವುದಿಲ್ಲ.
ರೇಷನ್ ಕಾರ್ಡ್ ಹೊಂದಿರುವಂತಹ ಮನೆ ಯಜಮಾನನಿಗೆ 2000ರೂ ಗೃಹಲಕ್ಷ್ಮಿ ಯೋಜನೆಯಿಂದ ಸಿಗುತ್ತಿದೆ. ಐಪಿಎಲ್ ಕಾರ್ಡ್ದಾರರಿಗೂ ಕೂಡ ಅರ್ಜಿ ಸಲ್ಲಿಸುವ ಅವಕಾಶವನ್ನು ನೀಡಿದೆ ಏಕೆಂದರೆ ಅದರಲ್ಲೂ ಕೂಡ ಕೆಲವರು ಮಧ್ಯಮ ವರ್ಗದವರ ಸಂಖ್ಯೆ ಜಾಸ್ತಿ ಇದೆ. ಆದರೆ APL ಕಾರ್ಡ್ ಹೊಂದಿರುವಂತಹವರು ರೇಷನ್ ಕಾರ್ಡನ್ನು ಸರಿಯಾಗಿ ಅಪ್ಡೇಟ್ ಮಾಡಿಸಿಲ್ಲ ಇದು ಅರ್ಜಿ ಸಲ್ಲಿಸಲು ಒಂದು ದೊಡ್ಡ ತೊಂದರೆ ಆಗಿದೆ.
ಬಿಪಿಎಲ್ ಕಾರ್ಡ್ ಮತ್ತು AAY ಕಾರ್ಡ್ ಇದ್ದಂತವರ ರೇಷನ್ ಕಾರ್ಡ್ ಅಪ್ಡೇಟ್ ಆಗಿರುತ್ತದೆ ಏಕೆಂದರೆ ಅವರು ಪ್ರತಿ ತಿಂಗಳು ಪಡಿತರ ಚೀಟಿ ಪಡೆಯುವುದರಿಂದ ಅವರಿಗೆ ಇದರ ಬಗ್ಗೆ ಮಾಹಿತಿ ತಿಳಿದಿರುತ್ತವೆ, ಆದರೆ APL ಕಾರ್ಡ್ ನವರು ಕೇವಲ ವಿಳಾಸಕ್ಕೆ ಈ ಕಾರ್ಡನ್ನು ಬಳಸುತ್ತಿದ್ದು ಕೆಲವರಿಗೆ ಈ ವಿಷಯ ತಿಳಿದಿರದ ಕಾರಣ ಎಷ್ಟೋ ಜನರದ್ದು ಅಪ್ಡೇಟ್ ಆಗಿಲ್ಲ.
Ration Card Update in Gruhalakshmi Schemes
ಗೃಹಲಕ್ಷ್ಮಿ ಯೋಜನೆಗೆ ಬೇಕಾಗುವಂತಹ ಮುಖ್ಯವಾದ ದಾಖಲಾತಿ ಎಂದರೇ ಅದು ರೇಷನ್ ಕಾರ್ಡ್ ಆದರೆ ಈ ರೇಷನ್ ಕಾರ್ಡ್ ಅಪ್ಡೇಟ್ ಆಗದೆ ಇರುವ ಕಾರಣ APL ಕಾರ್ಡ್ ನವರು ಪರದಾಡುತ್ತಿದ್ದಾರೆ ಅಷ್ಟೇ ಅಲ್ಲದೆ ಕೆಲವರ ರೇಷನ್ ಕಾರ್ಡ್ ರದ್ದಾಗಿದ್ದರು ಅವರಿಗೆ ಗೊತ್ತಿರಲಿಲ್ಲ.
ಬಯೋಮೆಟ್ರಿಕ್, ಆಧಾರ್ ಸಂಖ್ಯೆ ಮೊಬೈಲ್ ಸಂಖ್ಯೆ ಮುಂತಾದ ಮಾಹಿತಿ ನೀಡುವ ಮೂಲಕ ತಮ್ಮ ಕಾರ್ಡ್ ಸರಿಪಡಿಸಿಕೊಳ್ಳಲು ಅನುಮತಿ ನೀಡಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಯಾವುದೇ ರೀತಿಯ ಕೊನೆಯ ದಿನಾಂಕವನ್ನು ನಿಗದಿಪಡಿಸಿದೆ ಇರುವ ಕಾರಣ ಫಲಾನುಭವಿಗಳು ನಿರಾಳವಾಗಿ ಇರಬಹುದು. ರೇಷನ್ ಕಾರ್ಡ್ ಅಪ್ಡೇಟ್ ಹಾಗೂ ರದ್ದಾಗಿರುವಂತದ್ದನ್ನು ಸರಿಪಡಿಸಿಕೊಂಡು ಈ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗೂ ಇದರ ಉಪಯೋಗವನ್ನು ಪಡೆದುಕೊಳ್ಳಿ. ಇದನ್ನೂ ಓದಿ ಕೊನೆಗೂ ಮಂಜೂರಾಯ್ತು ಗೃಹಲಕ್ಷ್ಮಿ ಯೋಜನೆಯ ಹಣ, ಈ ರೀತಿ ಚೆಕ್ ಮಾಡಿಕೊಳ್ಳಿ