ರೈತ ಕೂಡ ಒಬ್ಬ ವಿಜ್ಞಾನಿ ಅನ್ನೋದ್ರಲ್ಲಿ ಯಾವುದೇ ಸಂಶಯವಿಲ್ಲ, ಯಾಕೆಂದರೆ ಪ್ರತಿದಿನ ಒಂದೊಂದು ಹೊಸ ಆವಿಷ್ಕಾರವನ್ನು ಮಾಡುತ್ತಲೇ ಇರುತ್ತಾನೆ, ಇಲ್ಲೊಬ್ಬ ರೈತ ತಾನು ಯಾವುದೇ ಇಂಜಿನಿಯರ್ ಸಹಾಯವಿಲ್ಲದೆ ತನ್ನ ಸ್ವಂತ ಬುದ್ದಿ ಶಕ್ತಿಯಿಂದ ಮರ ಏರುವ ಬೈಕ್ ಕಂಡುಹಿಡಿದಿದ್ದಾನೆ. ನಿಜಕ್ಕೂ ಈತನ ಕಾರ್ಯ ವೈಖರಿಗೆ ಹಲವು ಕಡೆ ಮೆಚ್ಚುಗೆ ವ್ಯಕ್ತ ಪಡಿಸಲಾಗಿದೆ.
ಭಾರತದ ರೈತರು ಯಾವುದು ಕಮ್ಮಿ ಎಲ್ಲ ಅನ್ನೋದನ್ನ ಮತ್ತೊಮ್ಮೆ ಇವರಿಂದ ಗೊತ್ತಾಗಿದೆ, ನಮ್ಮ ದೇಶದಲ್ಲಿ ತೆಂಗು, ಅಡಿಕೆ ಬೆಳೆಗಾರರು ತುಂಬಾನೇ ಜನ ಇದ್ದಾರೆ ಇವರಿಗೆ ಹೆಚ್ಚಿನ ರೀತಿಯಲ್ಲಿ ಈ ರೈತ ಕಂಡುಹಿಡಿರುವಂತ ಬೈಕ್ ಉಪಯೋಗವಾಗಲಿದೆ.
ಶಿಕ್ಷಣದ ಜ್ಞಾನವಿಲ್ಲದೆ ಯಾವ ಇಂಜಿನಿಯರ್ ಸಹವಿಲ್ಲದೆ ಮಾಡಿರುವಂತ ಸಾಧನೆಗೆ ನಿಜಕ್ಕೂ ಮೆಚ್ಚಲೇಬೇಕು ಈ ರೈತ ಕಂಡು ಹಿಡಿದಿರುವಂತ ಬೈಕ್ ನ ವಿಶೇಷತೆ ಏನು ಅನ್ನೋದನ್ನ ನೋಡುವುದಾದರೆ, ಬೈಕ್ ಮೇಲೆ ಕುಳಿತು ಸ್ಟಾರ್ಟ್ ಮಾಡಿದರೆ ಅದೇ ಮರದ ತುದಿಯವರೆಗೆ ಕರೆದೊಯ್ಯುತ್ತದೆ ಹಾಗೂ ಇದರ ನಿಯಂತ್ರಣಕ್ಕೆ ಹಲವು ಹಲವು ಯೋಜನೆಗಳನ್ನು ರೂಪಿಸಲಾಗಿದೆ.
ಹೀಗೆ ಮುಂದಿನ ದಿನಗಳಲ್ಲಿ ಹೊಸ ಹೊಸ ಆವಿಷ್ಕಾರವನ್ನು ನಮ್ಮ ಭಾರತೀಯ ರೈತರು ಹುಟ್ಟು ಹಾಕಲಿ ಅನ್ನೋದೇ ನಮ್ಮ ಆಶಯ ಅಂತವರಿಗೆ ಸರ್ಕಾರ ಒಂದು ಯೋಜನೆಯನ್ನು ರೂಪಿಸಬೇಕು ಇದರಿಂದ ದೇಶಕ್ಕೂ ಉಪಯೋಗವಾಗುವ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಲ್ಲ ರೈತರಿಗೂ ಒಳ್ಳೆಯದಾಗಲಿ.