Gruha jyoti status check: ಗೃಹಜ್ಯೋತಿ ಯೋಜನೆಯ ಸೌಲಭ್ಯ ಯಾವಾಗ ದೊರಕುತ್ತದೆ ಮತ್ತು ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಜೂನ್ 30ರೊಳಗೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಮಾತ್ರ ಆಗಸ್ಟ್ ತಿಂಗಳಲ್ಲಿ ಉಚಿತ ವಿದ್ಯುತ್ ಸಿಗುತ್ತದೆ. ಜುಲೈ 1ನೇ ತಾರೀಖಿನಿಂದ ಅಪ್ಲಿಕೇಶನ್ ಹಾಕಿದಂತವರಿಗೆ ಆಗಸ್ಟ್ ತಿಂಗಳಲ್ಲಿ ಕರೆಂಟ್ ಬಿಲ್ ಕಟ್ಟಬೇಕಾಗುತ್ತದೆ ಇವರಿಗೆ ಸಪ್ಟಂಬರ್ ತಿಂಗಳಲ್ಲಿ ಉಚಿತ ವಿದ್ಯುತ್ ಸೌಲಭ್ಯ ಸಿಗುತ್ತದೆ. ಅಪ್ಲಿಕೇಶನ್ ಹಾಕಿರುವಂತಹ ದಿನಾಂಕವನ್ನು ಮರೆತಿದ್ದರೆ ನೀವು ಅಪ್ಲಿಕೇಶನ್ ಹಾಕಿದಾಗ ನಿಮಗೆ acknowledgement ಕಾಫಿಯಲ್ಲಿ ನೀವು ಯಾವ ದಿನಾಂಕಕ್ಕೆ ಅರ್ಜಿ ಸಲ್ಲಿಸಿದ್ದೀರಿ ಎಂದು ತಿಳಿದುಕೊಳ್ಳಬಹುದು.

ಅಪ್ಲಿಕೇಶನ್ ಹಾಕಿ ಒಂದು ತಿಂಗಳ ನಂತರ ನಿಮಗೆ ಉಚಿತ ವಿದ್ಯುತ್ ಸೌಲಭ್ಯ ದೊರಕಲಿದೆ. ಜೂನ್ ತಿಂಗಳಲ್ಲಿ ಅಪ್ಲಿಕೇಶನ್ ಹಾಕಿದಂತಹ ಎಲ್ಲರಿಗೂ ಕೂಡ ಉಚಿತ ವಿದ್ಯುತ್ ಸೌಲಭ್ಯ ಸಿಗುವುದಿಲ್ಲ ಏಕೆಂದರೆ ಎಕನಾಲೆಜ್ಮೆಂಟ್ ಪ್ರಿಂಟ್ ಬಂದಿದ್ದರೂ ಕೂಡ ಕೆಲವರ ಅರ್ಜಿ ಸಲ್ಲಿಕೆಯು ಸರ್ಕಾರಕ್ಕೆ ತಲುಪಿಲ್ಲ ಇದನ್ನು ಪ್ರತಿಯೊಬ್ಬ ಅರ್ಜಿ ಸಲ್ಲಿಸಿದ ವ್ಯಕ್ತಿ ಕೂಡ ನೋಡಬೇಕಾಗುತ್ತದೆ.

ಅಪ್ಲಿಕೇಶನ್ ಹಾಕಿದರೆ ನಂತರ ನೀವು ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಅನ್ನು ಚೆಕ್ಕ್ ಮಾಡುತ್ತಿರಬೇಕು. ಅಪ್ಲಿಕೇಶನ್ ಸ್ಟೇಟಸ್ ನಲ್ಲಿ ok your gruha Jyoti scheme is received and hescom is processing ಅಂತ ಬಂದಿದ್ದರೆ ಮಾತ್ರ ನಿಮ್ಮ ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ successful ಆಗಿ ಗವರ್ನಮೆಂಟ್ ಗೆ ಸಲ್ಲಿಕೆ ಆಗಿದೆ ಎಂದರ್ಥ. ಅಪ್ಲಿಕೇಶನ್ ಸ್ಟೇಟಸ್ ನಲ್ಲಿ No data found ಅಂತ ಬಂದಿದ್ದರೆ ನಿಮ್ಮ ಅರ್ಜಿಯು ಸರ್ಕಾರಕ್ಕೆ ತಲುಪಿಲ್ಲ ಎಂದರ್ಥ.

ಗೃಹಜ್ಯೋತಿ ವೆಬ್ಸೈಟ್ http://sevasindhugs.karnataka.gov.in/ ಗೆ ಹೋಗಿ ಅಲ್ಲಿ ನಿಮ್ಮ ಅರ್ಜಿಯ ಸ್ಥಿತಿಯನ್ನು ತಿಳಿಯಿರಿ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ track your application status ಓಪನ್ ಆಗುತ್ತದೆ. ಆಗ ಅಲ್ಲಿ ನಿಮಗೆ hescom name ಭರ್ತಿ ಮಾಡಬೇಕಾಗುತ್ತದೆ. ನಂತರ ಅದರ ಕೆಳಗೆ ಕರೆಂಟ್ ಬಿಲ್ ನಲ್ಲಿರುವ (ಅಕೌಂಟ್ ಐಡಿ) ಸಂಖ್ಯೆಯನ್ನು ಎಂಟ್ರಿ ಮಾಡಿ check status ಸಿಂಬಲ್ ಮೇಲೆ ಕ್ಲಿಕ್ ಮಾಡಬೇಕು. ಈ ರೀತಿಯಾಗಿ ಅಪ್ಲಿಕೇಶನ್ ಸ್ಟೇಟಸ್ ಅನ್ನು ನೋಡಬಹುದು. ಹಾಗೆಯೆ ನೀವು ಹಾಕಿರುವಂತ ಅರ್ಜಿ ಸ್ಥಿತಿ ಹೇಗಿದೆ ಅನ್ನೋದನ್ನ ಅಲ್ಲಿ ತೋರಿಸಲಾಗುತ್ತದೆ. ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದನ್ನೂ ಓದಿ LIC Kanyadan: ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದರೆ ನಿಮಗೆ ಗುಡ್ ನ್ಯೂಸ್, ಮದುವೆ ಶಿಕ್ಷಣಕ್ಕೆ ಸರ್ಕಾರವೇ ಕೊಡುತ್ತೆ ಹಣ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!