Gruhalakshmi online application Update: ರೇಷನ್ ಕಾರ್ಡ್ ಇದ್ದಂತಹ ಮನೆಯ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ ಪಡೆಯುವಂತಹ ಗೃಹಲಕ್ಷ್ಮಿ (Gruhalakshmi) ಯೋಜನೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವುದು ಹೇಗೆ ಎಂದು ನಾವು ಇಲ್ಲಿ ತಿಳಿಸಿಕೊಡುತ್ತಿದ್ದೇವೆ.
ಜುಲೈ 19 ರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಎಲ್ಲಾ ಮಹಿಳೆಯರು ಕೂಡಲೇ ಅರ್ಜಿ ಸಲ್ಲಿಸಿ. ಮನೆ ಯಜಮಾನಿಯ ಖಾತೆಗೆ 2000 ಸರ್ಕಾರದಿಂದ ಬರುತ್ತದೆ.ಈ ಯೋಜನೆ ಕೇವಲ ಬಡ ಕುಟುಂಬದ ಮಹಿಳೆಯರಿಗೆ ಮಾತ್ರ ಅಂದರೆ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವಂತಹ ಕೆಲವು ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಗೃಹಲಕ್ಷ್ಮೀ’ ಯೋಜನೆಗೆ ಅರ್ಜಿ ಸಲ್ಲಿಕೆ ಹೇಗೆ ತಿಳಿದುಕೊಳ್ಳಿ
ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಮಹಿಳೆ ಅಂದರೆ ಗೃಹಿಣಿ 2000 ಸಾವಿರ ರೂಪಾಯಿ ಪಡೆಯಲು ಈ ರೀತಿಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು 8147500500 ಸಂಖ್ಯೆಗೆ SMS ಮಾಡ್ಬೇಕು. ಹೀಗೆ ಎಸ್‌ಎಂಎಸ್ ಮಾಡುತ್ತಿದ್ದಂತೆಯೇ ಎರಡೇ ಸೆಕೆಂಡ್‌ನಲ್ಲೇ ಇಲಾಖೆಯಿಂದ ನಿಮಗೆ ಮೇಸೇಜ್ ಬರುತ್ತೆ.
ನಂತರ ನೀವು ಆ ಮೆಸೇಜ್ ನಲ್ಲಿ ಗೊತ್ತು ಮಾಡಿರುವಂತ ಸ್ಥಳ ದಿನಾಂಕ, ಸಮಯ ಸಂದೇಶ ಬರಲಿದೆ. ಅದೇ ದಿನ, ಅದೇ ಸಮಯಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸಲು ಮನೆ ಒಡತಿ ಹೆಸರು ಇರೋ ಪಡಿತರ ಕಾರ್ಡ್ ಕಡ್ಡಾಯವಾಗಿದ್ದು, ಇದರ ಜತೆ ಮನೆ ಯಜಮಾನಿಯ ಆಧಾರ್ ಕಾರ್ಡ್ ಹಾಗೂ ಮೊಬೈಲ್ ಕೂಡಾ ತೆಗೆದುಕೊಂಡು ಹೋಗಬೇಕು.
ಇಲ್ಲಿ ಗಮನಿಸಿ ಮತ್ತೊಂದು ವಿಷಯ ಏನು ಅಂದ್ರೆ?
ಗೃಹಿಣಿ ಯೋಜನೆಯನ್ನು ಪಡೆಯಲು ಪತಿಯ ಆಧಾರ್ ಕೂಡ ಕಡ್ಡಾಯವಾಗಿದೆ, ನಿಮ್ಮ ನಿಮ್ಮ ದಾಖಲೆಗಳು ಏನು ಅನ್ನೋದನ್ನ ನೋಡುವುದಾದರೆ ರೇಷನ್ ಕಾರ್ಡ್ಮ್ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಇವುಗಳಿಗೆ ಆಧಾರ್ ಲಿಂಕ್ ಕಡ್ಡಾಯವಾಗಿರಬೇಕು.
ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು
ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಸೇರಿದಂತೆ ಸರ್ಕಾರಿ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ. ಇವತ್ತಿನಿಂದ ಯೋಜನೆಗೆ ಚಾಲನೆ ಸಿಕ್ಕಿದ್ದು ಇದರಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ ನೇರವಾಗಿ ಸರ್ಕಾರದಿಂದ ಗೃಹಿಣಿಗೆ ಇದರ ಪ್ರಯೋಜನ ಪಡೆಯಲಾಗುತ್ತೆ. ನಿಮಗೆ ಈ ಯೋಜನೆಯ ಬಗ್ಗೆ ಗೊಂದಲ ವಿದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ ಈ ನಂಬರ್ಗೆ ಕರೆ ಮಾಡಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ ಇದನ್ನೂ ಓದಿ Old One Rupee Note: ನಿಮ್ಮ ಬಳಿ 1 ರೂಪಾಯಿಯ ಈ ನೋಟು ಇದೆಯಾ? ಹಾಗಿದ್ರೆ ನಿಮಗೆ ಸಿಗತ್ತೆ 1 ಲಕ್ಷ ರೂಪಾಯಿ