ಜೇನುತುಪ್ಪದಲ್ಲಿ ಹಲವಾರು ಔಷಧೀಯ ಗುಣಗಳು ಇವೆ. ಪ್ರತಿಯೊಬ್ಬರಿಗೂ ಇಷ್ಟವಾಗುವ ಪ್ರಕೃತಿಯ ಈ ಕೊಡುಗೆಯೇ ಜೇನು. ಬಣ್ಣವನ್ನು ತಿಳಿಯಾಗಿಸಲು ಯುವಕರಿಗೆ ಇದು ಹೇಳಿ ಮಾಡಿಸಿದ ಉತ್ತಮ ಔಷಧವಾಗಿದೆ.. ಹೇಗೆಂದರೆ, ಪ್ರತೀ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಜೇನುತುಪ್ಪ ಮತ್ತು ನಾಲ್ಕು ಹನಿ ನಿಂಬೆ ರಸವನ್ನು ಬೆರೆಸಿ ಸೇವಿಸುವುದರಿಂದ ಚರ್ಮದ ಬಣ್ಣ ತಿಳಿಯಾಗುತ್ತದೆ. ಜೊತೆಗೆ ರಕ್ತ ಕೂಡಾ ಶುದ್ಧಿಯಾಗಿ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ವಿಧ ವಿಧವಾದ ಹೂವುಗಳಿಂದ ಜೇನು ಹುಳಗಳು ಮಕರಂದವನ್ನು ಹೀರಿಕೊಂಡು ಶೇಖರಣೆ ಮಾಡಿ ಸಂಗ್ರಹಮಾಡುತ್ತವೆ. ಹೀಗೆ ಶೇಖರಣೆ ಮಾಡಿದ ಜೇನನ್ನು ಸೇವಿಸಿ ಮಾನವ ಉತ್ತಮ ಆರೋಗ್ಯವನ್ನು ಪಡೆಯುತ್ತಾನೆ. ಇಂತಹ ಅತ್ಯದ್ಭುತ ಆಹಾರ ಪದಾರ್ಥದ ಪ್ರಯೋಜನ ಹಲವಾರು ಇದೆ ಅದು ಏನು ಅನ್ನೋದನ್ನ ಇಲ್ಲಿ ತಿಳಿದುಕೊಳ್ಳೋಣ.
ಜೇನುತುಪ್ಪ ಹಿಮೋ ಕಂಟೆಂಟ್ ಕಂಪೋನ್ ಇಂದ ಹೆಚ್ಚು ಸಮೃದ್ಧವಾಗಿದೆ. ಆದ್ದರಿಂದ ಜೇನು ನಮ್ಮ ತ್ವಚೆಯ ತೇವಾಂಶವನ್ನು ಹೆಚ್ಚಿಸಿ ಅದರ ಹಿಗ್ಗುವಿಕೆಯನ್ನು ತಡೆದು ಚರ್ಮ ಮತ್ತಷ್ಟು ಮೃದುವಾಗಿ ಇರುವಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೇ ಚರ್ಮದ ಮೇಲೆ ಇರುವ ಸತ್ತ ಜೀವಕೋಶಗಳನ್ನು ತೆಗೆದು ಹಾಕಿ ಚರ್ಮ ಸುಕ್ಕುಗಟ್ಟದಂತೆ ನಿಯಂತ್ರಣ ಮಾಡುತ್ತದೆ. ಅಷ್ಟೇ ಅಲ್ಲದೇ ಆಂಟಿ ಬ್ಯಾಕ್ಟೀರಿಯಲ್ ಹಾಗೂ ಆಂಟಿ ಮ್ಯಾಕ್ರೊಬಿಯಲ್ ಗುಣವನ್ನು ಹೊಂದಿರುವ ಜೇನು ಕೆಲವು ಸೂಕ್ಷ್ಮಾಣು ಜೀವಿಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ಇನ್ನು ಸಣ್ಣ ಪುಟ್ಟ ಗಾಯಗಳು, ಸುಟ್ಟ ಗಾಯಗಳು, ಹಾಗೂ ತುರಿಕೆ ಆಗುವ ಚರ್ಮದ ಮೇಲೆ ಜೇನನ್ನು ಔಷಧೀಯ ರೂಪದಲ್ಲಿ ಬಳಕೆ ಮಾಡಬಹುದು. ಜೇನು ಗಾಯವನ್ನು ಸ್ವಚ್ಛಗೊಳಿಸಿ ಗಾಯದ ವಾಸನೆಯನ್ನು ಹಾಗೂ ಕೀವು ಕಟ್ಟುವುದನ್ನು ನಿಯಂತ್ರಿಸುತ್ತದೆ. ನೋವನ್ನು ಬೇಗ ಕಡಿಮೆ ಮಾಡಲು ಹಾಗೂ ಗಾಯವೂ ಬೇಗ ವಾಸಿ ಆಗಲು ಸಹ ಸಹಾಯಕಾರಿ ಆಗಿರುತ್ತದೆ. ಹಾನಿಯಾದ ತ್ವಚೆಯನ್ನು ಗುಣಪಡಿಸಲು ಹಾಗೂ ತ್ವಚೆಯಲ್ಲಿ ಹೊಸ ಜೀವ ಕಣಗಳನ್ನು ಉತ್ಪತ್ತಿ ಮಾಡಲು ಸಹ ನೆರವಾಗುತ್ತದೆ.
ಜೇನು ಪ್ರಾಚೀನವಾದ ಆಂಟಿ ಫಂಗಲ್ಸ್ ಗುಣವನ್ನು ಹೊಂದಿರುವುದರಿಂದ ಸೋಂಕು ಜಾಢ್ಯವಾದ ಜಾಕಿಜ್ ಮುಂತಾದವುಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇನ್ನು ನೈಸರ್ಗಿಕ ಆಂಟಿ ಆಕ್ಸಿಡೆಂಟ್ ಗಳನ್ನು ಸಹ ಜೇನು ಒಳಗೊಂಡಿರುವುದರಿಂದ ಚರ್ಮವನ್ನು ಅಲ್ಟ್ರಾ ವೈಲೆಟ್ ರಶ್ಮಿಗಳಿಂದ ಆಗುವ ಹಾನಿಗಳನ್ನು ಕಾಪಾಡುತ್ತದೆ. ತ್ವಚೆಯನ್ನು ಶುದ್ಧವಾಗಿ ಇಡುತ್ತದೆ. ಗುಲ್ಕೋಸ್ ಮತ್ತು ಪ್ರೋಕ್ತೋಸ್ ಗಳಂತಹ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸಿ ಗಾಯ ನೋವನ್ನು ಸಹ ಕಡಿಮೆ ಮಾಡಲು ನೆರವಾಗುತ್ತದೆ. ಬೆಳಗಿನ ಸಮಯದಲ್ಲಿ ಜೇನುತುಪ್ಪ ಸೇವಿಸುವುದರಿಂದ ದೇಹದ ಆಲಸ್ಯವನ್ನು ಓಡಿಸುತ್ತದೆ. ನಿಯಮಿತ ಸೇವನೆಯಿಂದ ಕ್ಯಾಲ್ಶಿಯಂ ಹೀರುವಿಕೆ , ಹಿಮೋಗ್ಲೋಬಿನ್ ಅನ್ನು ಸಹ ಹೆಚ್ಚು ಮಾಡಿ ರಕ್ತದೊತ್ತದ ಸಮಸ್ಯೆಯನ್ನು ಸಹ ನಿವಾರಣೆ ಮಾಡುತ್ತದೆ. ಜೇನು ಪೂರ್ಣವಾಗಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಾಗಲು ಸಹಾಯ ಮಾಡುತ್ತದೆ. ಶ್ವಾಸಕೋಶದ ಸಮಸ್ಯೆಯನ್ನು ಸಹ ದೂರ ಮಾಡುತ್ತದೆ. ಅಷ್ಟೇ ಅಲ್ಲದೇ ಜೇನು ತೂಕ ಜಾಸ್ತಿ ಹೆಚ್ಚಾಗುವುದನ್ನು ಅತ್ಯಂತ ಸಮರ್ಥವಾಗಿ ನಿಯಂತ್ರಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಜೀರ್ಣ ಕ್ರಿಯೆಯ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ದೇಹದಲ್ಲಿ ಹೆಚ್ಚಾಗಿರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ ಹಾಗೂ ಹೀಗೆ ಹತ್ತು ಹಲವಾರು ಕಾರಣಗಳಿಗೆ ಜೇನು ಉಪಯುಕ್ತವಾಗಿದೆ.