Cars New Rules on Central Govt: ಕಾನೂನುಗಳಲ್ಲಿ ಹಲವಾರು ಬದಲಾವಣೆ ಆಗುವುದನ್ನು ನಾವು ನೋಡುತ್ತಲೇ ಇರುತ್ತೇವೆ. ಜನರಿಗೆ ಅನುಕೂಲದ ಹಿತದೃಷ್ಟಿಯಿಂದ ಕೆಲವೊಂದು ತಿದ್ದುಪಡಿಯನ್ನು ಮಾಡುತ್ತಾರೆ. ಸದ್ಯಕ್ಕೆ ದೇಶದಲ್ಲಿ ಹೆಚ್ಚಿನ ಜನರು ಸಂಚಾರಿ ನಿಯಮಗಳು ಮತ್ತು ಮೋಟಾರು ವಾಹನ ಕಾಯಿದೆಗಳ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ .ಅದು ಏನು ಎಂಬುದರ ಮಾಹಿತಿ ನಾವು ಇಲ್ಲಿ ತಿಳಿಸಿ ಕೊಡುತ್ತೇವೆ.

ಕಾನೂನು ಮೋಟರ್ ವಾಹನಕಾಯ್ದೆ ಮತ್ತು ವಾಹನ ಚಾಲಕರಿಗೆ ಹಲವಾರು ರೂಲ್ಸ್ ಗಳನ್ನು ಹಾಕುತ್ತಿದೆ ಅದರಿಂದ ವಾಹನ ಚಾಲಕರಿಗೆ ಸ್ವಲ್ಪ ಕಿರಿ ಕಿರಿ ಉಂ ಟಾಗಬಹುದು . ಆದರೆ ಸರ್ಕಾರ ಇದನ್ನು ಸಾರ್ವಜನಿಕ ಹಿತ ದೃಷ್ಟಿಯಿಂದ ಮಾಡಿರುತ್ತದೆ. ವಾಹನ ಚಾಲಕರು ಟ್ರಾಫಿಕ್ ರೂಲ್ಸ್ ಅನ್ನು ಉಲ್ಲಂಘನೆ ಮಾಡುವುದರಿಂದ ದಂಡತೆರುವುದನ್ನು ನೀವು ಸಾಮಾನ್ಯವಾಗಿ ನಿಮ್ಮ ಸಿಟಿಗಳಲ್ಲಿ ನೋಡಿರುತ್ತೀರಾ. ಸರ್ಕಾರದ ನಿಯಮವನ್ನು ಉಲ್ಲಂಘನೆ ಮಾಡುವುದು ಅಪರಾಧವಾಗಿರುವುದರಿಂದ ದಂಡ ಕಟ್ಟುವುದು ಕಡ್ಡಾಯವಾಗುತ್ತದೆ. ಸಾರ್ವಜನಿಕ ಹಿತ ದೃಷ್ಟಿಯಿಂದ ಮಾಡಿರುವುದರಿಂದ ಅದನ್ನು ನಾವು ಉಲ್ಲಂಘನೆ ಮಾಡಬಾರದು.

ಈಗ ಕಾನೂನು ಮತ್ತೊಂದು ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದೆ. ಅದು ಏನೆಂದರೆ ಅಪರಿಚಿತರಿಗೆ ಡ್ರಾಪ್ ಕೊಟ್ಟರೆ ಆಗ ಕೂಡ ನಿಮಗೆ ದಂಡ ವಿಧಿಸಲಾಗುವುದು ಎಂದಿದ್ದಾರೆ. ಈಗಾಗಲೇ ಮುಂಬೈಯಲ್ಲಿ ಅಂತಹದ್ದೆ ಒಂದು ಪ್ರಕರಣ ಈಗ ದಾಖಲಾಗಿದೆ. ಏಕೆಂದರೆ ಈತ ನಿಯಮವನ್ನು ಉಲ್ಲಂಘಿಸಿ ಅಪರಿಚಿತನಿಗೆ ಡ್ರಾಪ್ ಕೊಟ್ಟಿರುವುದರಿಂದ ಮುಂಬೈ ಟ್ರಾಫಿಕ್ ಪೊಲೀಸ್ 2000ರೂ ದಂಡ ವಿಧಿಸಲಾಗಿದೆ.

Cars New Rules

ಚಾಲಕ ಮಾನವೀಯತೆಯ ಹಿತ ದೃಷ್ಟಿಯಿಂದ ಅಪರಿಚಿತನಿಗೆ ಡ್ರಾಪ್ ಕೊಟ್ಟಿದ್ದಾರೆ .ಆದರೆ ಇದು ಕಾನೂನಿನ ಪ್ರಕಾರ ತಪ್ಪು ಎಂದು ಹೇಳಿ ಅಲ್ಲಿನ ಪೊಲೀಸರು ಚಾಲಕನಿಗೆ ದಂಡ ಹಾಕಿದ್ದಾರೆ. ಚಾಲಕನು, ನಾನು ಏನು ತಪ್ಪು ಮಾಡಿಲ್ಲ ಅವನು ತುಂಬಾ ಸಮಯದಿಂದ ವಾಹನಕ್ಕಾಗಿ ಕಾಯುತ್ತಿರುವುದರಿಂದ ನಾನು ಮಾನವೀಯತಾ ದೃಷ್ಟಿಯಿಂದ ಡ್ರಾಪ್ ಕೊಟ್ಟೆ ಎಂದು ಪೊಲೀಸರಿಗೆ ಹೇಳಿದಾಗ, ಪರಿಚಯ ಇಲ್ಲದ ವ್ಯಕ್ತಿಯನ್ನು ಕಾರಿನಲ್ಲಿ ಕರೆದುಕೊಂಡು ಬರುವುದು ಕಮರ್ಷಿಯಲ್ ರೀತಿಯಲ್ಲಿ ವಾಹನ ಬಳಸಿದ ರೀತಿ ಆಗುತ್ತದೆ

ಇದು ಕಾನೂನು ಕ್ರಮ ಉಲ್ಲಂಘನೆ ಮಾಡಿದ ಹಾಗೆ ಎಂದು ಹೇಳಿದರು. ಕಾರಿನಲ್ಲಿ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ಕೂಡ ನಡೆದಿರಲಿಲ್ಲ, ಆದರೂ ಪೊಲೀಸರು ಆತನಿಗೆ 2000 ದಂಡ ಕಟ್ಟಿಸಿಕೊಂಡಿರುವುದು ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ Annabhagya Yojane: ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ ತಂದ ರಾಜ್ಯ ಸರ್ಕಾರ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!