New Ration Card Apply: ರೇಷನ್ ಕಾರ್ಡ್ ಪಡೆಯುವುದು ಹೇಗೆ ಮತ್ತು ಯಾವೆಲ್ಲ ದಾಖಲಾತಿ ಬೇಕು ಹಾಗೂ ಅರ್ಜಿ ಹೇಗೆ ಸಲ್ಲಿಸಬೇಕು ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ನೋಡಬಹುದು.ಮೊದಲಿಗೆ ನಾವು ಯಾರೆಲ್ಲ BPl ಕಾರ್ಡ್ ಮಾಡಿಸಬಹುದು ಹಾಗೂ ಯಾರೆಲ್ಲಾ APL ಕಾರ್ಡ್ ಮಾಡಿಸಬಹುದು ಎಂದು ನೋಡಬೇಕು. ಬಿಪಿಎಲ್ ಕಾರ್ಡ್ ಪಡೆಯಬೇಕೆಂದರೆ ಅವರ ವಾರ್ಷಿಕ ಆದಾಯ 1,20,000 per ವರ್ಷದೊಳಗೆ ಇರಬೇಕು ಅಂದರೆ ನಿಮ್ಮ ತಿಂಗಳ ಆದಾಯ ಸುಮಾರು 10 ಸಾವಿರ ಇದ್ದರೆ ನೀವು BPL ಕಾರ್ಡ್ ಒಳಗೆ ಬರುತ್ತೀರಾ.
ಬಿಪಿಎಲ್ ಕಾರ್ಡ್ ಅನ್ನು ಮಾಡಿಸಲು ಬೇಕಾಗುವಂತಹ ಅತಿ ಮುಖ್ಯವಾದ ದಾಖಲೆ ಆದಾಯ ಪ್ರಮಾಣ ಪತ್ರ ನಿಮ್ಮ ಬಳಿ ಆದಾಯ ಪ್ರಮಾಣ ಪತ್ರವಿಲ್ಲದಿದ್ದರೆ ಹೋಗಿ ಮೊದಲ ಮಾಡಿಸಬೇಕಾಗುತ್ತದೆ. ನಿಮ್ಮ ನಾಡಕಚೇರಿಯಲ್ಲಿ, ತಾಲೂಕ್ ಆಫೀಸ್ನಲ್ಲಿ ಅಥವಾ ಗ್ರಾಮ ಒನ್ ನಲ್ಲೂ ಕೂಡ ಆದಾಯ ಪ್ರಮಾಣ ಪತ್ರವನ್ನು ಮಾಡಿಕೊಡುತ್ತಾರೆ.
ಮತ್ತೊಂದು ಪ್ರಮುಖ ವಿಷಯ ಗೊತ್ತಿರಲೇಬೇಕಾದದ್ದು ಏನೆಂದರೆ, ಆದಾಯ ಪ್ರಮಾಣ ಪತ್ರ ಐದು ವರ್ಷ ಆದಮೇಲೆ ಅದರ ಅವಧಿ ಮುಗಿಯುತ್ತದೆ ಆಗ ನೀವು ಅದನ್ನು ರಿನಿವಲ್ ಮಾಡಿಸಿಕೊಳ್ಳಲೇಬೇಕು ಯಾವುದೇ ರೀತಿಯ ಅರ್ಜಿ ಸಲ್ಲಿಸಲು ಕೂಡ ಅವಧಿ ಮುಗಿದಿರುವಂತಹ ಆದಾಯ ಪ್ರಮಾಣ ಪತ್ರವನ್ನು ತೆಗೆದುಕೊಳ್ಳುವುದಿಲ್ಲ.
New Ration Card Apply
ರೇಷನ್ ಕಾರ್ಡ್ ಮಾಡಿಸಲು ಬೇಕಾಗುವಂತಹ ಮತ್ತೊಂದು ದಾಖಲಾತಿ ಏನೆಂದರೆ ಅದು ಆಧಾರ್ ಕಾರ್ಡ್. ದೇಶದ ಪ್ರತಿಯೊಬ್ಬ ಪ್ರಜೆಯ ಬಳಿಯೂ ಕೂಡ ಆಧಾರ್ ಕಾರ್ಡ್ ಇರಲೇಬೇಕು ಹಾಗೂ ಆ ಆಧಾರ್ ಕಾರ್ಡಿಗೆ ನಿಮ್ಮ ಫೋನ್ ನಂಬರ್ ಲಿಂಕ್ ಆಗಿರಬೇಕು. ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ ಹಾಗೂ ಫೋಟೋ ಇದ್ದರೆ ಸಾಕು ನೀವು ಕಾರ್ಡನ್ನು ಮಾಡಿಸಬಹುದು ಇಷ್ಟು ಇಟ್ಟುಕೊಂಡು ಹೋದರೆ ಫುಡ್ ಆಫೀಸ್ ನಲ್ಲೂ ಕೂಡ ಮಾಡಿಕೊಡುತ್ತಾರೆ ಅಥವಾ ನೀವು ಆನ್ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು.
1,20,000 ಗಿಂತ ಹೆಚ್ಚು ವಾರ್ಷಿಕ ಆದಾಯವಿದ್ದರೆ ಅವರಿಗೆ APL ಕಾರ್ಡ್ ಸಿಗುತ್ತದೆ. ಸರ್ಕಾರಿ ನೌಕರಿಯಲ್ಲಿದ್ದವರು ಎಪಿಎಲ್ ಕಾರ್ಡ್ ಅಂಡರ್ ಅಲ್ಲಿ ಬರುತ್ತದೆ. ರೇಷನ್ ಕಾರ್ಡ್ ಆಪ್ಷನ್ ಕೂಡ ಬಿಡುಗಡೆ ಮಾಡುತ್ತಿದ್ದಾರೆ ಯಾರಾದರೂ ಅಪ್ಡೇಟ್ ಮಾಡುವವರಿದ್ದರೆ ಮಾಡಿಸಿಕೊಳ್ಳಿ.
APL ಕಾರ್ಡ್ ಅಥವಾ ಬಿಪಿಎಲ್ ಕಾರ್ಡ್ ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಮೊದಲಿಗೆ ಈ ವೆಬ್ಸೈಟ್ಗೆ ಹೋಗಿ ಆಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವೆಬ್ಸೈಟ್ ಓಪನ್ ಆಗುತ್ತದೆ ಆಗ ನೀವು ಇ-ಸೇವೆಗಳು ಎನ್ನುವ ಆಪ್ಷನ್ಗೆ ಹೋಗಬೇಕು ನಂತರ ನೀವು ಈ ಪಡಿತರ ಚೀಟಿ ಎನ್ನುವ ಆಪ್ಷನ್ ಕ್ಲಿಕ್ ಮಾಡಬೇಕು ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಇದೆಯಾ ಇಲ್ಲವಾ ಎಂದು ತಿಳಿದುಕೊಳ್ಳಲು ಪಡಿತರ ಚೀಟಿ ತೋರಿಸು ಆಪ್ಷನ್ ಕ್ಲಿಕ್ ಮಾಡಿ ಅಲ್ಲಿ ಆಕ್ಟಿವ್ ಇದೆಯಾ ಇಲ್ಲವಾ ಹಾಗೂ ರೇಷನ್ ಕಾರ್ಡ್ ನಲ್ಲಿ ಮನೆ ಸದಸ್ಯರು ಎಷ್ಟು ಎನ್ನುವ ಎಲ್ಲಾ ಮಾಹಿತಿಗಳು ಬರುತ್ತದೆ.
ನಂತರ ಹೊಸ ಪಡಿತರ ಚೀಟಿ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಆಗ ಎರಡು ಆಪ್ಷನ್ ಬರುತ್ತದೆ ಅದು ಯಾವುದೆಂದರೆ ಆದ್ಯತಾ ಕುಟುಂಬ (BPL )ಹಾಗೂ ಆದ್ಯತೇತರ ಕುಟುಂಬ(APL) ನೀವು ಬಿಪಿಎಲ್ ಕಾರ್ಡ್ ಅಂಡರ್ ಅಲ್ಲಿ ಬರುವವರಾಗಿದ್ದರೆ ಆದ್ಯತಾ ಕುಟುಂಬ ಎನ್ನುವ ಆಪ್ಷನ್ ಕ್ಲಿಕ್ ಮಾಡಿ ನಂತರ ನಿಮಗೆ ಇಲ್ಲಿ ಆಧಾರ್ ಕಾರ್ಡ್ ನಂಬರ್ ಕೇಳಲಾಗುತ್ತದೆ ನಂತರ ಓಟಿಪಿ ಬರುತ್ತದೆ ಅದನ್ನು ಎಂಟ್ರಿ ಮಾಡಿದ ನಂತರ ನಿಮ್ಮ ಇನ್ಕಮ್ ಸರ್ಟಿಫಿಕೇಟ್ ಹಾಗೂ ನಿಮ್ಮ ಮಾಹಿತಿಗಳನ್ನು ಕೇಳುತ್ತದೆ. ಅದನ್ನು ಸರಿಯಾಗಿ ಭರ್ತಿ ಮಾಡಿ ಹಾಗೂ ಅಲ್ಲಿ ಕೇಳಿರುವಂತಹ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ನಂತರ ನಿಮ್ಮ ಕುಟುಂಬ ಸದಸ್ಯರನ್ನು ಸೇರಿಸುವದಿದ್ದರೆ ಅಲ್ಲಿ ಸೇರಿಸಬಹುದು. ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದ ನಂತರ ಸಬ್ಮಿಟ್ ಕೊಡಿ ಈ ಮಾಹಿತಿ ಫುಡ್ ಆಫೀಸ್ ಅಲ್ಲಿ ವೇರಿಫೈ ಆಗಿ ನಂತರ ನಿಮಗೆ ರೇಷನ್ ಕಾರ್ಡ್ ಸಿಗುತ್ತದೆ.