Kannada actor Suraj: ಪಾರ್ವತಮ್ಮ ರಾಜ್ ಕುಮಾರ್ (Parvathamma Rajkumar) ಅವರ ತಮ್ಮನ ಮಗ ಸೂರಜ್, ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು ಹಾಗೂ ತಮ್ಮದೇ ಸಿನಿಮಾ ಮಾಡಿ ನಟನಾಗಿ ಅಭಿನಯಿಸಲು ಹಲವು ಶ್ರಮ ಪಡುತ್ತಿದ್ದರು ಆದ್ರೆ, ವಿಧಿಯಾಟ ಬೇರೆದ್ದೇ ಆಗಿದೆ ಇಂದು ಅಪಘಾತದಲ್ಲಿ ತೀವ್ರ ಪೆಟ್ಟು ಬಿದ್ದು ತಮ್ಮ ಕಾಲನ್ನು ಕಳೆದುಕೊಂಡಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
ಸೂರಜ್ (Suraj) ತಮ್ಮ ಬುಲೆಟ್ ಬೈಕ್ ನಲ್ಲಿ ಊಟಿಗೆ ತೆರಳುತ್ತಿದ್ದ ವೇಳೆ ಟಿಪ್ಪರ್ ಲಾರಿ ಗುದ್ದಿದೆ, ಇದರಿಂದ ತೀವ್ರ ಪೆಟ್ಟು ಬಿದ್ದು ಸೂರಜ್ ಬಲಗಾಲು ನಜ್ಜು ಗುಜ್ಜಾಗಿದೆ, ನೆನ್ನೆ ಸಂಜೆ ನಡೆದ ಅಪಘಾತದಲ್ಲಿ ಈ ಘಟನೆ ಸಂಭವಿಸಿದ್ದು ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇನ್ನು ಸೂರಜ್ ಬಲಗಾಲು ಅಪಘಾತದಲ್ಲಿ ತೀವ್ರವಾದ ಪೆಟ್ಟು ಬಿದ್ದುದರಿಂದ ಕಾಲು ತಗೆಯಬೇಕು ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಅದೇನೇ ಇರಲಿ, ಕನ್ನಡ ಚಿತ್ರರಂಗದಲ್ಲಿ ಹಲವು ಕನಸುಗಳನ್ನು ಹೊತ್ತು ಶ್ರಮ ಪಡುತ್ತಿದ್ದ ಯುವ ನಟನಿಗೆ ದೊಡ್ಡ ಆಘಾತ ಆಗಿರುವುದಂತೂ ನಿಜ. ಆ ದೇವರು ಅವರಿಗೆ ಆದಷ್ಟು ಬೇಗನೆ ಚೇತರಿಸಿಕೊಳ್ಳುವ ಶಕ್ತಿ ಕೊಡಲಿ ಎಂಬುದೇ ಸಿನಿಮಾ ಅಭಿಮಾನಿಗಳ ಪ್ರಾರ್ಥನೆಯಾಗಿದೆ.
ಇದನ್ನೂ ಓದಿ Father Property: ಮಕ್ಕಳ ಪರ್ಮಿಷನ್ ಇಲ್ಲದೆ ತಂದೆ ಅಸ್ತಿ ಮಾರಾಟ ಮಾಡಬಹುದಾ? ಕೋರ್ಟ್ ಕೊಟ್ಟ ತೀರ್ಪು ಏನು ಗೊತ್ತಾ