Gruha jyoti Application link: ಗೃಹ ಜ್ಯೋತಿ ಯೋಜನೆಗೆ ಹೊಸದಾಗಿ ಅರ್ಜಿಹಾಕುವರಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ ಯಾವುದೇ ಗೊಂದಲ ಬೇಡ ಯಾಕೆಂದರೆ ರಾಜ್ಯ ಸರಕಾರ ಗೃಹಜ್ಯೋತಿ ಯೋಜನೆಗೆ ಯಾವುದೇ ಡೆಡ್ ಲೈನ್ ಕೊಟ್ಟಿಲ್ಲ, ಹಾಗಾಗಿ ಉಚಿತ 200 ಯೂನಿಟ್ ಕರೆಂಟ್ ಪಡೆಯಲು ಸಮಾಧಾನವಾಗಿಯೇ ಅರ್ಜಿ ಹಾಕಿ. ಗೃಹ ಜ್ಯೋತಿ (Gruha jyoti) ಯೋಜನೆಗೆ ಯಾವೆಲ್ಲ ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು ಮತ್ತೆ ಮೊಬೈಲ್ ಮೂಲಕ ಅರ್ಜಿ ಹಾಕುವುದು ಹೇಗೆ ಅನ್ನೋದನ್ನ ಈ ಕೆಳಗೆ ಸಂಪೂರ್ಣವಾಗಿ ಸುಲಭವಾಗಿ ವಿವರಿಸಿದ್ದೇವೆ ನೋಡಿ.
ಮೊದಲನೆಯದಾಗಿ ಗೃಹ ಜ್ಯೋತಿ ಯೋಜನೆಗೆ ಅರ್ಜಿಹಾಕಲು ಹೆಸ್ಕಾಂ, ಬೆಸ್ಕಾಂ ಮುಂತಾದ ವಿದ್ಯುತ್ ಸರಬರಾಜು ಕಚೇರಿಗಳ ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲ ನಿಮ್ಮ ಮೊಬೈಲ್ ಮೂಲಕ ಕೂಡ ಅತಿ ಸುಲಭವಾಗಿ ಅರ್ಜಿಹಾಕಬಹುದು. ಅದು ಹೇಗೆ ಅನ್ನೋದನ್ನ ತಿಳಿದುಕೊಳ್ಳಿ
ಗೃಹ ಜ್ಯೋತಿ ಯೋಜನೆಗೆ ಅರ್ಜಿ ಹಾಕಲು ಹೊಸ ಲಿಂಕ್
ಸರ್ಕಾರ ಹಲವು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ, ಕಾರಣ ಒಂದೇ ಬಾರಿಗೆ ಸಾವಿರಾರು ಅರ್ಜಿಗಳನ್ನು ಹಾಕುವುದರಿಂದ ಸರ್ವರ್ ಡೌನ್ ಆಗುತ್ತದೆ ಹಾಗಾಗಿ ಇದೀಗ ಈ ವಿಚಾರದಲ್ಲಿ ಸರ್ಕಾರ ಮತ್ತಷ್ಟು ಅಭಿವೃದ್ಧಿ ಪಡಿಸಿದೆ. ಇನ್ನು ಅರ್ಜಿ ಹಾಕಲು ಬಯಸುವವರು ಈ ಹೊಸ ಲಿಂಕ್ ಮೂಲಕ ಅರ್ಜಿಹಾಕಬಹುದು (https://sevasindhugs.karnataka.gov.in/)
ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಸಲು ಬೇಕಾಗುವ ದಾಖಲೆಗಳು
ಆಧಾರ್ ಕಾರ್ಡ್ ಹಾಗೂ ಕರೆಂಟ್ ಬಿಲ್, ಮೊಬೈಲ್ ಸಂಖ್ಯೆ ಬೇಕಾಗುತ್ತದೆ.
ಮೊದಲನೆಯದಾಗಿ ಸೇವಾ ಸಿಂಧೂ ವೆಬ್ ಲಿಂಕ್ ಓಪನ್ ಮಾಡಿದಾಗ ಅರ್ಜಿಯಲ್ಲಿ ಕೇಳುವ ದಾಖಲೆಯನ್ನು ನಮೂದಿಸಬೇಕು ಹಾಗೂ ಅರ್ಜಿ ಹಾಕುವ ವಿಧಾನ ಮುಗಿದ ನಂತರ, ಅರ್ಜಿ ಸ್ವೀಕೃತಿಯನ್ನು ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ Govt Scheme: ಕೇಂದ್ರ ಸರ್ಕಾರದಿಂದ ಹೊಸ ಯೋಜನೆ, ತಿಂಗಳಿಗೆ 5000 ರೂ. ಸಿಗಲಿದೆ ಆದ್ರೆ ಈ ದಾಖಲೆ ಕಡ್ಡಾಯ