Gruha Lakshmi Scheme 2023: ಸರ್ಕಾರ ಜಾರಿಗೊಳಿಸಿರುವ ನಾಲ್ಕು ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಪ್ರಮುಖವಾದುದು ಪ್ರತಿ ಮನೆಯ ಯಜಮಾನಿಗೂ ಸಹ ಈ ಯೋಜನೆಯ ಮೂಲಕ ತಿಂಗಳಿಗೆ 2000 ಸಹಾಯಧನ ನೀಡಲಾಗುತ್ತಿದೆ. ಇದೀಗ ಈ ಯೋಜನೆಯಲ್ಲಿ ಹೊಸ ತಿದ್ದುಪಡಿಯನ್ನ ಮಾಡಲಾಗಿದೆ ಅವುಗಳು ಏನೆಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಯ ದಿನಾಂಕವು ಜೂನ್ 15ರಿಂದಲೇ ಪ್ರಾರಂಭಗೊಂಡಿದ್ದು. ಗ್ರಹಿಣಿಯರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ ಆದರೆ ಇದೀಗ ಉಂಟಾದ ತಿದ್ದುಪಡಿಯ ಪ್ರಕಾರ ಅರ್ಜಿಯನ್ನು ಸಲ್ಲಿಸುವ ದಿನಾಂಕವನ್ನು ಈಗ ಎಕ್ಸ್ಟೆಂಡ್ ಮಾಡುವ ಸಾಧ್ಯತೆ ಇದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ವಿಷಯದ ಕುರಿತು ಮಾಹಿತಿಯನ್ನ ನೀಡಿದ್ದಾರೆ. ಕೆಲವು ಕಾರಣಗಳಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಯ ದಿನಾಂಕವನ್ನು ಮುಂದೂಡಲಾಗುವುದು ಎಂದು ಇವರು ತಿಳಿಸಿದ್ದಾರೆ.
ಇನ್ನು ಎರಡನೆಯದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆಯ ಅವಧಿಯು ಒಂದು ತಿಂಗಳವರೆಗೆ ಅಷ್ಟೇ ಮಾಡಲಾಗಿತ್ತು ಅಂದರೆ ಜೂನ್ 15ರಿಂದ ಜುಲೈ 15ರ ಒಳಗಾಗಿ ಈ ಯೋಜನೆಗೆ ಗ್ರಹಿಣಿಯರು ಅರ್ಜಿಯನ್ನು ಸಲ್ಲಿಸಬೇಕಾಗಿತ್ತು ಆದರೆ ಇದೀಗ ಆ ಅವಧಿಯ ನಿರ್ಬಂಧ ಇರುವುದಿಲ್ಲ ಬದಲಾಗಿ ವರ್ಷವಿಡಿ ಈ ವ್ಯವಸ್ಥೆಗೆ ಅರ್ಜಿಯನ್ನ ಸಲ್ಲಿಸಬಹುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ ಮಾಡಿದ್ದಾರೆ.
ಗೃಹಲಕ್ಷ್ಮಿ ಭೋಜನಿಗೆ ಅರ್ಜಿ ಸಲ್ಲಿಸುವ ವೆಬ್ಸೈಟ್ ಓಪನ್ ಆಗುತ್ತಿಲ್ಲ ಇದಕ್ಕೆ ಕಾರಣವೇನೆಂದರೆ ಈ ಅರ್ಜಿ ಸಲ್ಲಿಕೆಯ ಅವಧಿಯನ್ನು ವಿಳಂಬ ಮಾಡಲಾಗಿದ್ದು ಆಯಾ ವೆಬ್ಸೈಟ್ ಗಳನ್ನು ಓಪನ್ ಮಾಡಲು ನೀವು ಇನ್ನು ಕೆಲವು ದಿನಗಳು ಕಾಯಬೇಕಾಗುತ್ತದೆ. ಇದನ್ನೂ ಓದಿ Congress Guarantee: ಕಾಂಗ್ರೆಸ್ ಸರ್ಕಾರದ ಎಲ್ಲ ಗ್ಯಾರೆಂಟಿಗಳಿಗೆ ಅರ್ಜಿ ಹಾಕೋದು ಹೇಗೆ? ಇಲ್ಲಿದೆ ನೋಡಿ ಸುಲಭ ವಿಧಾನ