Free Bus Scheme: ಉಚಿತ ಪ್ರಯಾಣ ಸೌಲಭ್ಯ ಪಡೆಯಲು ಸ್ಮಾರ್ಟ್ ಕಾರ್ಡ್ ಅನ್ನು ಪಡೆಯಬೇಕಾಗುತ್ತದೆ. ಈ ಸ್ಮಾರ್ಟ್ ಕಾರ್ಡ್ ಪಡೆಯಲು ನೀವು ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದು ಮೊಬೈಲ್ ನಲ್ಲಿ ಹೇಗೆ ಅರ್ಜಿ ಸಲ್ಲಿಸಬಹುದು ಎಂದು ಇಲ್ಲಿ ನೋಡೋಣ.
ಸರ್ಕಾರ ಜೂನ್ 11 ಕ್ಕೆ ಶಕ್ತಿ ಯೋಜನೆ ಜಾರಿಗೊಳಿಸಿದೆ ಅದರಂತೆಯೇ ಖಾಸಗಿ ಬಸ್ಸುಗಳನ್ನು ಹೊರತುಪಸು ಪಡಿಸಿ ಸರ್ಕಾರದ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಿದ್ದಾರೆ. ಉಚಿತ ಬಸ್ ಸೌಲಭ್ಯ ಪಡೆಯಲು ಸ್ಮಾರ್ಟ್ ಕಾರ್ಡ್ ಕಡ್ಡಾಯ ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿರುವಂತಹ ವಿಚಾರ.
ಈ ಸ್ಮಾರ್ಟ್ ಕಾರ್ಡ್ ಅನ್ನು ಮಾಡಿಸಿಕೊಳ್ಳಲು ಮೂರು ತಿಂಗಳ ಕಾಲಾವಕಾಶ ನೀಡಿದೆ ಅಲ್ಲಿಯತನಕ ನಿಮ್ಮ ಆಧಾರ್ ಕಾರ್ಡ್, ವೋಟರ್ ಐಡಿ ಡ್ರೈವಿಂಗ್ ಲೈಸೆನ್ಸ್ ಯಾವುದಾದರೂ ಐಡಿಯನ್ನು ತೋರಿಸಬೇಕಾಗುತ್ತದೆ. ಆದರೆ ಮಹಿಳೆಯರು ಕಡ್ಡಾಯವಾಗಿ ಜೀರೋ ಬ್ಯಾಲೆನ್ಸ್ ಟಿಕೆಟ್ ಅನ್ನು ತೆಗೆದುಕೊಳ್ಳಬೇಕು.
ಮೊದಲಿಗೆ ಸೇವಾ ಸಿಂಧು ವೆಬ್ಸೈಟ್ ಗೆ ಹೋಗಿ ಲಾಗಿನ್ ಆಗಬೇಕುನಂತರ ಶಕ್ತಿ ಸ್ಮಾರ್ಟ್ ಕಾರ್ಡ್ ಎಂದು ಸರ್ಚ್ ಮಾಡಬೇಕು ಅಲ್ಲಿ ನಿಮಗೆ ಅರ್ಜಿ ಫಾರಂ ಸಿಗುತ್ತದೆ ಅಲ್ಲಿ ಕ್ಲಿಕ್ ಮಾಡಿ. ಅರ್ಜಿ ಫಾರಂನಲ್ಲಿ ಕೇಳಿರುವಂತಹ ಮಾಹಿತಿಯನ್ನು ಸರಿಯಾಗಿ ತುಂಬಬೇಕು ಹಾಗೂ ಅವಶ್ಯಕತೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
ಎಲ್ಲ ಮಾಹಿತಿಯನ್ನು ಸರಿಯಾಗಿ ತುಂಬಿದ್ದೀರಾ ಎಂದು ಪರಿಶೀಲನೆ ನಡೆಸಿ ಸಬ್ಮಿಟ್ ಪ್ರೆಸ್ ಮಾಡಬೇಕು ಕೊನೆಗೆ ಒಂದು ಪ್ರಿಂಟ್ ಔಟ್ ಸಿಗುತ್ತದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೊನೆಗೊಳ್ಳುತ್ತದೆ. ಈ ರೀತಿಯಾಗಿ ಅರ್ಜಿ ಸಲ್ಲಿಸಿ ಸ್ಮಾರ್ಟ್ ಕಾರ್ಡ್ ಪಡೆದುಕೊಂಡು ಉಚಿತ ಬಸ್ ಸೌಲಭ್ಯವನ್ನು ಎಲ್ಲಾ ಮಹಿಳೆಯರು ಉಪಯೋಗಿಸಿಕೊಳ್ಳಿ ಇದನ್ನೂ ಓದಿ. Seva Sindhu: ಬಾಡಿಗೆದಾರರು ಅಥವಾ ಮಾಲೀಕರು ಉಚಿತ ವಿದ್ಯುತ್ ಪಡೆಯಲು ಅರ್ಜಿಯ ಲಿಂಕ್ ಓಪನ್ ಆಗಿದೆ, ಅರ್ಜಿಹಾಕುವ ಸುಲಭ ವಿಧಾನ ಇಲ್ಲಿದೆ