Seva Sindhu portal: ಉಚಿತ ವಿದ್ಯುತ್ ಪಡೆಯಲು ಅರ್ಜಿಯ ಲಿಂಕ್ ಓಪನ್ ಆಗಿದೆ. ಅರ್ಜಿ ಸಲ್ಲಿಸುವ ಸ್ಟೆಪ್ ಬೈ ಸ್ಟೆಪ್ ಮಾಹಿತಿ ನಿಮ್ಮ ಮುಂದೆ. ಕಾಂಗ್ರೆಸ್ ಸರ್ಕಾರ (Congress Government )ಜಾರಿಗೆ ತಂದಿದ್ದ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯ ಸೌಲಭ್ಯ ಪಡೆಯಲು ಅರ್ಜಿ ಹಾಕಬಹುದು. ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ.Https://sevasindhug1.karnataka.gov.in
ಗೂಗಲ್ ನಲ್ಲಿ ಅಥವಾ ನಿಮ್ಮ್ ಮೊಬೈಲ್ ನ ಕ್ರೋಮ್ ನಲ್ಲಿ ಈ ಲಿಂಕ್ ಹಾಕಿದರೆ ಗೃಹ ಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆ ಮತ್ತು ಯುವನಿಧಿ ಎನ್ನುವ 4 ಯೋಜನೆಗಳನ್ನು ತೋರಿಸುತ್ತದೆ, ಅದರಲ್ಲಿ 2 ನೇ ಯೋಜನೆ ಗೃಹಜ್ಯೋತಿ, ಅದನ್ನು ಆಯ್ಕೆ ಮಾಡಿದರೆ ಅರ್ಜಿ ಕಾಣುತ್ತದೆ. ಮೊದಲು ನೀವು ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
ಇಲಾಖೆಯ ಹೆಸರು ಇಂಧನ ಇಲಾಖೆ. ಖಾತೆಯ ಸಂಖ್ಯೆ ಅಂದರೇ ನಿಮ್ಮ್ ಎಲೆಕ್ಟ್ರಿಕ್ ಬಿಲ್ನಲ್ಲಿನ ಅಕೌಂಟ್ ಡಿಟೇಲ್ಸ್ ನಲ್ಲಿರುವ ಖಾತೆಯ ಸಂಖ್ಯೆಯನ್ನು ದಾಖಲಿಸಿ, ನಂತರ ಖಾತೆದಾರರ ಹೆಸರು, ವಿಳಾಸ, ಪಿನ್ಕೋಡ್, ಮತ್ತು ನಿವಾಸಿ ವಿಧದಲ್ಲಿ ಮಾಲೀಕ, ಬಾಡಿಗೆದಾರ ಅನ್ನೋ ಆಯ್ಕೆಯಲ್ಲಿ ನೀವು ಒಂದು ಮನೆಯ ಮಾಲೀಕರಾಗಿದ್ದಲ್ಲಿ ಮಾಲೀಕರೆಂದು, ಬಾಡಿಗೆ ಮನೆಯಲ್ಲಿ ಇದ್ದರೆ ಬಾಡಿಗೆದಾರರು ಎಂದು ಆಯ್ಕೆ ಮಾಡಿ..
ಅದರ ನಂತರ ಆಧಾರ್ ಕಾರ್ಡ್ (adhar card )ನ ನಂಬರ ಹಾಕಿ ನೋಂದಾಯಿಸಿಕೊಳ್ಳಬೇಕು. ನಂತರ ಅರ್ಜಿದಾರರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ದಾಖಲಿಸಿ ಐ ಅಗ್ರಿ (I agree) ಅನ್ನುವ ಕಡೆ ಕ್ಲಿಕ್ ಮಾಡಿ ನಿಮ್ಮ್ ಮೊಬೈಲ್ ನಂಬರ್ ಗೆ ಬರುವಂತಹ ಓಟಿಪಿ (OTP) ಯನ್ನು ಹಾಕಿ ಜೊತೆಗೆ ವರ್ಡ್ ವೆರಿಫಿಕೇಷನ್ ಹಾಕಿ ಸಬ್ಮಿಟ್ ಎಂದು ಓಕೆ ಮಾಡಿದರೆ ಮುಗಿಯಿತು. ಗೃಹ ಜ್ಯೋತಿಗೆ ಅರ್ಜಿ ಅಪ್ಲೈ ಹಾಕುವ ಸಿಂಪಲ್ ಸ್ಟೆಪ್ಸ್ ಇವೆ. Traffic Rules: ವಾಹನ ಸವಾರರಿಗೆ ಗುಡ್ ನ್ಯೂಸ್, ಟ್ರಾಫಿಕ್ ನ ಹೊಸ ರೂಲ್ಸ್ ಜಾರಿ ಇನ್ಮುಂದೆ ಟ್ರಾಫಿಕ್ ಫೈನ್ ಕಟ್ಟುವ ಭಯಬೇಡ