ತುಂಬಾ ಜನರಿಗೆ ಬರೀ ಬೆಳ್ಳಗೆ ಮಾತ್ರ ಇದ್ರೆ ಸಾಕಾಗುವುದಿಲ್ಲ ಚರ್ಮದಲ್ಲಿ ತಾವುದೇ ಕಲೆಗಳು ಗುಳ್ಳೆಗಳೂ ಸಹ ಇರಬಾರದು. ಚರ್ಮ ಸಾಫ್ಟ್ ಆಗಿ ಮತ್ತು ಕಾಂತಿಯುತವಾಗಿ ಇರುವಾಗ ಮಾತ್ರ ನಿಜವಾದ ಸೌಂದರ್ಯ ತಿಳಿಯುತ್ತದೆ. ಈ ದಿನ ನಾವು ಸಾಫ್ಟ್ ತ್ವಚೆಯನ್ನು ಪಡೆಯಲು ಮನೆಯಲ್ಲೇ ಸಿಗುವಂತಹ ಕೆಲವು ಪದಾರ್ಥಗಳನ್ನು ಹೇಗೆ ಬಳಸಿಕೊಳ್ಳುವುದು ಅನ್ನೋದನ್ನ ನೋಡೋಣ.
ಇತ್ತೀಚಿನ ದಿನಗಳಲ್ಲಿ ಹೊರಗಡೆ ಓಡಾಡುವುದು ಜಾಸ್ತಿ ಆಗಿ ಮುಖ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಅಂತ ಸಂದರ್ಭದಲ್ಲಿ ಈ ಒಂದು ರೆಮೆಡಿ ಮಾಡಿ ನೋಡಿ. ಇದನ್ನ ಹೇಗೆ ಮಾಡೋದು ಅನ್ನೋದನ್ನ ನೋಡೋಣ. ಮೊದಲು ಒಂದು ಬೌಲ್ ಗೆ ಒಂದು ಸ್ಪೂನ್ ಅಷ್ಟು ಫೇರ್ and ಲವ್ಲಿ ಅಥವಾ ಬೇರೆ ಯಾವುದೇ ಕ್ರೀಮ್ ತೆಗೆದುಕೊಂಡು ನಂತರ ಅದಕ್ಕೆ 2 ಸ್ಪೂನ್ ಕಡಲೆ ಹಿಟ್ಟು ಸೇರಿಸಿ, 1 ಸ್ಪೂನ್ ಅಲೋವೆರ ಜೆಲ್ ,2 ಸ್ಪೂನ್ ರೋಸ್ ವಾಟರ್ (ಮನೆಯಲ್ಲೇ ಮಾಡಿದ್ದಾದರು ಸರಿ) ಸೇರಿಸಿ ಚೆನ್ನಾಗಿ ಪೆಸ್ಟ್ ಆಗುವ ಹಾಗೆ ಯಾವುದೇ ಗಂಟುಗಳು ಇಲ್ಲದ ಹಾಗೆ ಮಿಕ್ಸ್ ಮಾಡಿಕೊಳ್ಳಬೇಕು.
ನಂತರ ಇದನ್ನು ಹಚ್ಚುವ ಮೊದಲೇ ಮುಖವನ್ನು ಇಮ್ಮೆ ಬಿಸಿ ನೀರಿನಲ್ಲಿ ತೊಳೆದುಕೊಂಡು ತಯಾರಿಸಿಕೊಂಡ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಬೇಕು. ಇದನ್ನು ಕೈ ಹಾಗೂ ಕುತ್ತಿಗೆಗೂ ಸಹ ಹಚ್ಚಬಹುದು. ಈ ಒಂದು ಫೇಸ್ ಪ್ಯಾಕ್ ಮುಖಕ್ಕೆ ಉತ್ತಮ ಕಾಂತಿಯನ್ನು ನೀಡುತ್ತದೆ ಹಾಗೂ ಮುಖವನ್ನು ಸಾಫ್ಟ್ ಆಗಿಸುತ್ತದೆ. ಮುಖಕ್ಕೆ ಹಚ್ಚಿ 10 ನಿಮಿಷ ಆರಲು ಬಿಟ್ಟು ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಬೇಕು. ಇದನ್ನು ವಾರಕ್ಕೆ ಒಂದು ಬಾರಿ ಮಾಡಿದರೂ ಸಾಕು. ಎಲ್ಲ ರೀತಿಯ ಚರ್ಮದವರೂ ಸಹ ಇದನ್ನು ಬಳಸಬಹುದು.
ಮುಖ್ಯವಾಗಿ ಕಡಲೆ ಹಿಟ್ಟು ಮುಖದಲ್ಲಿ ಇರುವಂತಹ ಕಲೆಗಳನ್ನು ತೆಗಿಯಲು ಸಹಾಯ ಮಾಡುತ್ತದೆ. ಹಾಗೂ ಇದು ಯಾವುದೇ ಅಲರ್ಜಿಯನ್ನು ಕೂಡಾ ಮಾಡುವುದಿಲ್ಲ ಯಾವುದೇ ಚರ್ಮದವರಿಗೂ ಒಗ್ಗತ್ತೆ. ಇದರಲ್ಲಿ ಹೆಚ್ಚಾಗಿ ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಬಳಸುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ. ರೋಸ್ ವಾಟರ್ ಬಳಸಿರುವುದರಿಂದ ಇದು ನಮ್ಮ ಚರ್ಮದ ಒಳಗೆ ಹೋಗಿ ಮೊಡವೆಗಳ ಕಲೆಯನ್ನು ನಿವಾರಣೆ ಮಾಡುತ್ತದೆ.ಹಾಗೆ ಅಲೋವೆರ ದಲ್ಲಿ ಇರುವಂತಹ ಆಂಟಿ ಸಪ್ಟಿಕ್ ಅಂಶಗಳು ಚರ್ಮದಲ್ಲಿನ ಬ್ಯಾಕ್ಟೀರಿಯಾಗಳನ್ನು ನಾಶ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಇದು ಒಂದು ಉತ್ತಮವಾದ ಫೇಸ್ ಪ್ಯಾಕ್ ಆಗಿದೆ.