ಚಿಕ್ಕವನಿದ್ದಾಗ ಒಬ್ಬ ಹುಡುಗ ಮನೆ ಮನೆಗೆ ಹೋಗಿ ಪೇಪರ್ ಹಾಕುತ್ತಿದ್ದ. ಈಗ ಇವನ ಒಟ್ಟು ಆಸ್ತಿ 77.3 ಬಿಲಿಯನ್ US ಡಾಲರ್. ಆ ಹುಡುಗನಿಗೆ ಎಂಥದ್ದೋ ಒಂದು ವಿಶೇಷ ಆಸಕ್ತಿ ಇದ್ದು ಅವನು ತಾನೂ ಕೂಡಾ ಒಂದಲ್ಲ ಒಂದು ದಿನ ವಿಶ್ವದ ಅತೀ ಶ್ರೀಮಂತರ ಪಟ್ಟಿಯಲ್ಲಿ ಸೇರುತ್ತೇನೆ ಎಂದು ನಿರ್ಧರಿಸಿದ್ದ . ಹೇಳಿದ ಹಾಗೆಯೇ ವಿಶ್ವದ ಅತೀ ಶ್ರೀಮಂತರ ಪಟ್ಟಿಯಲ್ಲಿ ಸೇರಿದರು ಕೂಡಾ. ಆದರೆ ಇವರು ಶ್ರೀಮಂತ ಆಗಬೇಕಿದೆ ಅವರ ಹಾದಿ ಏನೂ ಅಷ್ಟೊಂದು ಸುಗಮವಾಗಿ ಏನೂ ಇರಲಿಲ್ಲ. ತಾನು ಸ್ವಾವಲಂಭಿಯಾಗಿ ಬದುಕಬೇಕು ತಾನೂ ಎಲ್ಲರ ಹಾಗೆ ತನ್ನ ಕಾಲಮೇಲೆ ನಿಂತು ತನ್ನ ಖರ್ಚನ್ನು ತಾನೇ ನೋಡಿಕೊಳ್ಳಬೇಕು ಎಂದು ನೀರ್ದರಿಸಿದ್ದಾಗ ಅವರಿಗೆ ಕೇವಲ ಒಂಭತ್ತು ವರ್ಷ. ಅವರ ತಂದೆ ಅಮೆರಿಕಾ ಪಾರ್ಲಿಮೆಂಟ್ ನಲ್ಲಿ ಅತೀ ದೊಡ್ಡ ಹೆಸರು ಮಾಡಿದ ವ್ಯಕ್ತಿ. ಆದರೆ ಮಗನಿಗೆ ಅಪ್ಪನ ನೆರಳಲ್ಲಿ ಬದುಕುವುದು ಇಷ್ಟ ಇರಲಿಲ್ಲ ಹಗಗಲಿ ತನ್ನ 9ನೆ ವಯಸ್ಸಿನಲ್ಲಿ ಸ್ವಾವಲಂಭಿ ಬದುಕನ್ನು ಆರಿಸಿಕೊಂಡರು. ಚಿವಿಂಗ್ ಗಂ, ಕೊಕೊ ಕೋಲ ಬಾಟಲಿಗಳನ್ನು ಮಾರುತ್ತಾ , ಮನೆ ಮನೆಗೆ ಪೇಪರ್ ಹಾಕುವುದನ್ನು ಮಾಡುತ್ತಾ ಏನೆಲ್ಲ ಮಾಡಲು ಸಾಧ್ಯವೂ ಎಲ್ಲವನ್ನೂ ಮಾಡುತ್ತಿದ್ದರು. ಆಗ ಅವರ 11ನೇ ವಯಸ್ಸಿನಲ್ಲಿ ಕಣ್ಣಿಗೆ ಬಿದ್ದಿದ್ದು ನ್ಯೂಯಾರ್ಕ್ ಸ್ಟಾಕ್ ಎಕ್ಸ್ಛೇಂಜ್ . ಷೇರು ಮಾರ್ಕೆಟ್ ಅಂದ್ರೆ ಏನು ಎಂದು ಜನ ತಲೆ ಕೆರೆದುಕೊಳ್ಳುತ್ತ ಇದ್ದ ಆ ಸಮಯದಲ್ಲೇ ಈ ಹುಡುಗನಿಗೆ ಶೇರ್ ಮಾರ್ಕೆಟ್ ನಲ್ಲಿ ಇನ್ವೆಸ್ಟ್ ಮಾಡುವ ಉಪಾಯ ಹೊಳೆಯಿತು. ಅವನ ಹಾಗೂ ಅವನ ತಂದೆಯ ಹೆಸರಿನಲ್ಲಿ ತಲಾ 3 ಷೇರುಗಳನ್ನು ಕೊಂಡು ಕೊಂಡು ಅಲ್ಲಿಂದ ಸುರು ಆಗಿತ್ತು ಷೇರು ಮಾರ್ಕೆಟ್ ನ ಯಶೋ ಗಾಥೆ.

ವಾರ್ನರ್ ಬಫೆಟ್ ಮೊದಲ ಬಾರಿಗೆ ಟ್ಯಾಕ್ಸ್ ರಿಟರ್ನ್ಸ್ ಮಾಡಿದ್ದು 1987ರಲ್ಲಿ ಅಂದರೆ ತನ್ನ 14 ನೆ ವಯಸ್ಸಿನಲ್ಲಿ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಏಜೆನ್ಸಿ ಪಡೆದು ಒಂದಷ್ಟು ಹುಡುಗರನ್ನು ಸಹ ಪಡೆದುಕೊಂಡು ಅವರ ಜೊತೆಗೆ ಇವರೂ ಸಹ ಮನೆ ಮನೆಗೆ ಪೇಪರ್ ಹಾಕುತ್ತಿದ್ದರು. ಆ ಕಾಲಕ್ಕೆ ಪ್ರತೀ ದಿನ 175 ಡಾಲರ್ ಉಳಿಸುತ್ತಿದ್ದರಂತೆ. ಹಾಗಾಗಿ ಆ ಕಾರಣಕ್ಕೆ 24ನೆ ವಯಸ್ಸಿನಲ್ಲಿ 40 ಎಕರೆ ಜಾಗ ಖರೀದಿ ಮಾಡಿದ್ದರು. 1951 ರಿಂದ 1979 ರ ವರೆಗೆ ಮೂರು ಬೇರೇ ಬೇರೆ ಕಂಪನಿಗಳನ್ನು ವಾರ್ನರ್ ಬಫೆಟ್ ಆರಂಭಿಸಿದರು. ಅವು ಮೂರು ಕೂಡಾ ಉತ್ತಮ ಬೆಳವಣಿಗೆ ಕಂಡವು. ಅವು ಕೂಡಾ ಷೇರು ಮಾರ್ಕೆಟ್ ಗೆ ಸಂಬಂಧಿಸಿದ ಕಂಪೆನಿಗಳೇ ಆಗಿದ್ದವು.

ಯಾವಾಗ ಬಫೆಟ್ ಹಾತ್ ವೆ ಕಂಪನಿಯ ಷೇರುಗಳನ್ನು ಖರೀದಿ ಮಾಡಲು ಆರಂಭಿಸಿದ್ದರೋ ಅಲ್ಲಿಂದ ಬರೀ ಷೇರುಗಳನ್ನು ಮಾತ್ರ ಕೊಂಡುಕೊಳ್ಳುವುದಲ್ಲದೆ ಕಂಪನಿಗಳ ಮೇಲೂ ಸಹ ತಮ್ಮ ಪ್ರಭಾವವನ್ನು ಬೀರಲು ಆರಂಭಿಸಿದರು. ಕಂಪನಿಯನ್ನು ತಮ್ಮ ಹತೋಟಿಗೆ ತೆಗೆದುಕೊಂಡರು. ಮೊದಲೇ ಪಕ್ಕ ಬ್ಯುಸನೆಸ್ ಮ್ಯಾನ್ ಆಗಿದ್ದ ಇವರು ಪ್ರತೀ ಬಾರಿ ಷೇರು ತೆಗೆದುಕೊಂಡಾಗ 7.60 ಡಾಲರ್ ಲೆಕ್ಕದಲ್ಲಿ ತೆಗೆದುಕೊಳ್ಳುತ್ತಿದ್ದರು. ಕ್ರಮೇಣ ಶೇರಿನ ಮೌಲ್ಯ ಏರುತ್ತಾ ಹೋಯಿತು. ಶೇರಿನ ಮೌಲ್ಯ ಏರುತ್ತಾ ಹೋದಂತೆ ಅದರ ಮೇಲೆ ಜಾಸ್ತಿ ಇನ್ವೆಸ್ಟ್ ಮಾಡುತ್ತಿದ್ದರು. 1971 ರಲ್ಲಿ ಬಾಗ್ ಶೇರ್ ಕಂಪನಿಯ ಒಂದು ಶೇರಿಗೆ 775 ಡಾಲರ್ ಇದ್ದು, ವರ್ಷದ ಕೊನೆಗೆ ಮೌಲ್ಯ 1,110 ಡಾಲರ್ ಆಗಿತ್ತು. ಆಗ ಬಫೆಟ್ ಆಸ್ತಿ 4ಸಾವಿರ ಕೋಟಿ ಇತ್ತು. ಅದೇ ಮೊದಲ ಬಾರಿಗೆ ವಾರ್ನರ್ ಬಫೆಟ್ ಮೊದಲ ಬಾರಿಗೆ ವಿಶ್ವದ ಅತೀ ಶ್ರೀಮಂತರ ಪಟ್ಟಿಗೆ ಸೇರಿದ್ದರು.

ಅಷ್ಟರಲ್ಲಾಗಲ್ಲೇ ಬಾಗ್ ಶೇರ ಕಂಪನಿಯನ್ನು ಸಂಪೂರ್ಣವಾಗಿ ತನ್ನ ಹತೋಟಿಗೂ ತೆಗೆದುಕೊಂಡಾಗಿತ್ತು. ನಂತರ ಚೆರ್ ಮೆನ್, CEO, ಪ್ರೆಸಿಡೆಂಟ್ ಎಲ್ಲವೂ ಆದರೂ.ಅಮೆರಿಕಾದ ದೊಡ್ಡ ದೊಡ್ಡ ಕಂಪನಿಗಳ ಶೇರ್ ಗಳನ್ನು ಕೊಂಡುಕೊಂಡರು. ಪ್ರಸ್ತುತ ಬಾಗ್ ಶೇರ್ ಹಾತ್ ವೇ ಕಂಪನಿ 9 ಕಂಪನಿಗಳನ್ನು ತನ್ನ ಸ್ವಂತ ಮಾಡಿಕೊಂಡಿದೆ. ಅಮೆರಿಕನ್ ಎಕ್ಸ್ಪ್ರೆಸ್, ಕೊಕೊ ಕೋಲ, IBM ಕಂಪೆನಿಗಳಲ್ಲೂ ಬಫೆಟ್ ತಮ್ಮ ಶೇರ್ ಹೊಂದಿದ್ದಾರೆ ಎಂದರೆ ನಂಬಲೇಬೇಕಾದ ವಿಷಯ. ಇದೇ ಬಫೆಟ್ ಒಂದು ಕಾಲದಲ್ಲೂ ಕೊಕೊ ಕೋಲಾ ಮಾರುತ್ತಿದ್ದವರು ಇಂದು ಅದೇ ಕಂಪನಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಷೇರುಗಳನ್ನು ಹೊಂದಿದ್ದಾರೆ. ಅಂದು ರಸ್ತೆಯಲ್ಲಿ ಸೈಕಲ್ ತುಳಿದು ಮನೆ ಮನೆಗೆ ಪೇಪರ್ ಹಾಕುತ್ತಿದ್ದ ವ್ಯಕ್ತಿ ಇಂದು ವಿಶ್ವದ ಷೇರು ಮಾರುಕಟ್ಟೆಯ ಕಿಂಗ್ ಈಗ ಅವರ ದಿನದ ದುಡಿಮೆ ನೋಡುವುದಾದರೆ ದಿನಕ್ಕೆ ಸುಮಾರು 300 ಕೋಟಿ ರೂಪಾಯಿ. ಆದರೆ ಅವರ ಜೀವನದ ಅರ್ಧ ಆಸ್ತಿ ಗಳಿಸಿದ್ದು ಅವರ 50 ನೆ ವಯಸ್ಸಿನ ನಂತರವಂತೆ. ಇಷ್ಟೆಲ್ಲ ದುಡಿದರೂ ಸಹ ಯಾವತ್ತಿಗೂ ವೈಭವದ ಜೀವನವನ್ನು ಇಷ್ಟ ಪಡಲಿಲ್ಲ.

ಅನವಶ್ಯಕ ಖರ್ಚು ಮಾಡಲಿಲ್ಲ. ಇಷ್ಟೊಂದು ಹಣ ಗಳಿಸಿದ ಬಫೆಟ್ ಹಕವಾರು ಸಂಸ್ಥೆಗಳಿಗೆ ಕೋಟಿಗಟ್ಟಲೆ ದಾನ ಮಾಡಿದ್ರು. ತನ್ನ ಷೇರುಗಳನ್ನು ಹಂತವಾಗಿ ದಾನ ಮಾಡುತ್ತ ಇದ್ದಾರೆ. ಗಳಿಸುವುದಕ್ಕಿಂತ ಅ ದಾನ ಮಾಡುವುದರಲ್ಲಿ ಹೆಚ್ಚು ಖುಷಿ ಎನ್ನುತ್ತಾರೆ ವಾರ್ನರ್ ಬಫೆಟ್. ನೀವು ಕೂಡ ನಿಮ್ಮ ಜಿನವದಲ್ಲಿ ಏನಾದ್ರು ಸಾಧಿಸಬೇಕು ಅನ್ನೋ ಛಲ ಹೊಂದಿದ್ರೆ ಖಂಡಿತ ಯಶಸ್ಸನ್ನು ಕಾಣಲು ಸಾಧ್ಯ. ಇದೆ ರೀತಿ ಇನ್ನು ಹೆಚ್ಚಿನ ಸ್ಪೂರ್ತಿದಾಯಕ ಸ್ಟೋರಿಯನ್ನು ಪಡೆಯಲು ನಮ್ಮನ್ನು ಪ್ರೋತ್ಸಾಹಿಸಿ. ಧನ್ಯವಾದಗಳು ಶುಭವಾಗಲಿ

Leave a Reply

Your email address will not be published. Required fields are marked *