ಕಡಿಮೆ ಸಮಯದಲ್ಲಿ ರುಚಿಕರವಾದ ಆಲೂಗಡ್ಡೆ ಚಿಪ್ಸ್ ಮಾಡೋ ಸುಲಭ ವಿಧಾನ

0 1

ರುಚಿಕರವಾದ, ಕಡಿಮೆ ಸಮಯದಲ್ಲಿ ಹೊರಗಡೆ ಸಿಗುವ ಹಾಗೆ ರುಚಿ ಇರುವ ಆಲೂಗಡ್ಡೆ ಚಿಪ್ಸ್ ಅನ್ನು ಮನೆಯಲ್ಲೇ ಸುಲಭವಾಗಿ ಹೇಗೆ ಮಾಡೋದು ಅನ್ನೋದನ್ನ ನೋಡೋಣ.
ಆಲೂಗಡ್ಡೆ ಚಿಪ್ಸ್ ಮಾಡೋಕೆ ಬೇಕಾಗಿರುವ ಸಾಮಗ್ರಿಗಳು: ಆಲೂಗಡ್ಡೆ 4, ಉಪ್ಪು, ಕೆಂಪು ಮೆಣಸಿನ ಪುಡಿ
ಎಣ್ಣೆ ಕರಿಯಲು

ಮಾಡುವ ವಿಧಾನ :ಮೊಸಲು ಅಲ್ಲೋಗಡ್ಡೆಯನ್ನ ಚೆನ್ನಾಗಿ ತೊಳೆದು ಒರೆಸಿಕೊಂಡು ಸಿಪ್ಪೆ ತೆಗೆದಿಟ್ಟುಕೊಳ್ಳಬೇಕು. ಸಿಪ್ಪೆ ತೆಗೆದ ನಂತರ ಒಂದು ಕಾಟನ್ ಬಟ್ಟೆಯಿಂದ ಇನ್ನೊಮ್ಮೆ ನೀರಿನ ಅಂಶ ಹೋಗುವವರೆಗೂ ಚೆನ್ನಾಗಿ ಒರೆಸಿಕೊಳ್ಳಬೇಕು. ನಂತರ ಆಲೂಗಡ್ಡೆಗಳನ್ನು ತೆಳುವಾಗಿ ಸ್ಲಯ್ಸ್ ಮಾಡಿಕೊಂಡು, ಆಲೂಗಡ್ಡೆಯಲ್ಲಿ ನೀರಿನ ಅಂಶ ಇರುವುದರಿಂದ ಮತ್ತೆ ಒಂದು ಕಾಟನ್ ಬಟ್ಟೆಯ ಮೇಲೆ ಹರಡಿ ಒರೆಸಿಕೊಳ್ಳಬೇಕು.

ನಂತರ ಎಣ್ಣೆ ಕಾಯಲು ಇಟ್ಟು ಎಣ್ಣೆ ಕಾದ ನಂತರ ಸಣ್ಣ ಉರಿಯಲ್ಲಿ ಇಟ್ಟುಕೊಂಡು ಒಂದೊಂದೇ ಬಿಡಿ ಬಿಡಿ ಆಗಿ ಆಲೂಗಡ್ಡೆಯ ಸ್ಲಯ್ಸ್ ಗಳನ್ನು ಎಣ್ಣೆಯಲ್ಲಿ ಬಿಟ್ಟು ಕರಿದುಕೊಳ್ಳಬೇಕು. ನಂತರ ಮತ್ತೆ ಇನ್ನೊಮ್ಮೆ ಆಲೂಗಡ್ಡೆಯ ಸ್ಲಯ್ಸ್ ಗಳನ್ನು ಎಣ್ಣೆಯಲ್ಲಿ ಬಿಡುವಾಗ ಸ್ಟೋವ್ ಅನ್ನು ಹೆಚ್ಚು ಉರಿಯಲ್ಲಿ ಇಟ್ಟುಕೊಂಡು ನಂತರ ಸಣ್ಣ ಉರಿಯಲ್ಲಿ ಕರಿದುಕೊಳ್ಳಬೇಕು. ನಂತರ ನಿಮ್ಮ ನಿಮ್ಮ ಕಾರಕ್ಕೆ ತಕ್ಕಂತೆ ಕೆಂಪು ಮೆಣಸಿನ ಪುಡಿ ಹಾಗೂ ಅದಕ್ಕೆ ಅನುಗುಣವಾಗಿ ಉಪ್ಪು ಸೇರಿಸಿ ಮಿಕ್ಸ್ ಮಾಡಿದ್ರೆ ರುಚಿಯಾದ ಗರಿ ಗರಿ ಆದ ಬಿಸಿ ಬಿಸಿ ಆಲೂಗಡ್ಡೆ ಚಿಪ್ಸ್ ತಿನ್ನೋಕೆ ರೆಡಿ.

Leave A Reply

Your email address will not be published.