ಹನ್ನೆರಡು ರಾಶಿಗಳಲ್ಲಿ ಏಳನೇ ರಾಶಿಯಾದ ತುಲಾ (Libra) ಶುಕ್ರ ಗ್ರಹದ ಅಧಿಪತ್ಯವಿರುವ ಚಿನ್ಹೆ ಆಗಿದೆ. ಈ ರಾಶಿಯಲ್ಲಿ ಜನಿಸಿದವರು ಆಕರ್ಷಕ ಗುಣದವರೂ ಹಾಗೂ ಎಲ್ಲವನ್ನೂ ಸಮಾನ ದೃಷ್ಟಿಯಿಂದ ಕಾಣುವವರು.,ನ್ಯಾಯದ ಪರವಾಗಿ ಇರುವವರು. ತುಲಾ (Libra) ರಾಶಿಯವರ ಹುಟ್ಟು ಅವರ ಜೀವನದಲ್ಲಿ ಹೆಚ್ಚು ವ್ಯತ್ಯಾಸವನ್ನು ತೋರುವುದಿಲ್ಲ, ಸ್ವಯಂ ಕೃಷಿ ಅವರ ಜೀವನದಲ್ಲಿ ಬದಲಾವಣೆ ತರುತ್ತದೆ.
ಇವರ ನಡುವಳಿಕೆ, ಇವರು ಯಾವ ರೀತಿಯಾಗಿ ತಮ್ಮ ಜೀವನವನ್ನು ರೂಪಿಸಿಕೊಳ್ಳುತ್ತಾರೆ ಅದರ ಆಧಾರದಲ್ಲಿ ಇವರ ಭವಿಷ್ಯ ನಿಂತಿದೆ. ಮೇ 2 ನೆ ತಾರೀಖಿನಂದು ಶುಕ್ರ ಮಿಥುನ (Gemini) ರಾಶಿಗೆ ಪ್ರವೇಶ ಮಾಡಿವುದರಿಂದ ತುಲಾ ರಾಶಿಯವರಿಗೆ ಒಳಿತಾಗುತ್ತದೆ.ಮೇ 10 ರಂದು ಕುಜ ತನ್ನ ನೀಚ ಸ್ಥಾನವಾದ ಕರ್ಕಾಟಕ ರಾಶಿಗೆ ಹೋಗುತ್ತಾನೆ ಆದ್ದರಿಂದ ಕುಜನಿಂದ ಒಳಿತಾಗುವುದಿಲ್ಲ.
ಮೇ 15 ರಂದು ರವಿ ಅಷ್ಟಮಿ ಸ್ಥಾನಕ್ಕೆ ಬರುವುದರಿಂದ ಕೆಡುಕಾಗುವುದಿಲ್ಲ.ಶುಕ್ರನು ಮೇ 30 ರಂದು ಕರ್ಕ ರಾಶಿಗೆ ಪ್ರವೇಶವಾಗುತ್ತಾನೆ.ಹಾಗೆಯೇ ಮೇ 5 ರಂದು ವ್ಯಾಸ ಪೂರ್ಣಮಿ, ಬುದ್ಧ ಪೂರ್ಣಮಿ ಎಂದು ಕರೆಯುವ ಪೌರ್ಣಮಿ ಆಚರಣೆ.ಮೇ 19 ನೆ ತಾರೀಖಿ ನಂದು ಬಾದ್ ಅಮವಾಸೆ.
ಈ ತಿಂಗಳಿನ ಮೂರು ವಿಶೇಷತೆ ಎಂದರೆ,ಮೇ 1ನೇ ತಾರೀಖು ಬೃಹಸ್ಪತಿ ಜಯಂತಿ,ಮೇ 4 ನರಸಿಂಹ ಸ್ವಾಮಿ ಜಯಂತಿ,ಮೇ 14 ಹನುಮ ಜಯಂತಿ. (Hanuman Jayanti) ತುಲಾ ರಾಶಿಯವರಿಗೆ ಗುರು ಬಲ ಶುರುವಾಗಿದೆ ಹೆಚ್ಚಿನ ಬಲ, ಯಶಸ್ಸು , ಯೋಗ, ದೊರೆಯುತ್ತದೆ.ನಿಮ್ಮ ರಾಶಿಯ ಅಧಿಪತಿ ಆದಂತ ಶುಕ್ರ ಮೇ 2 ರಂದು ಭಾಗ್ಯ ಸ್ಥಾನಕ್ಕೆ ಬರುತ್ತಾನೆ,ಶುಭ ಫಲ, ಶುಭ ಕಾರ್ಯಗಳು, ಮದ್ವೆ, ಮನೆ ಕಟ್ಟುವುದು ಮುಂತಾದ ಮಂಗಳ ಕರ ಕಾರ್ಯಗಳು ನೆರವೇರುತ್ತವೆ.
ಎರಡನೇ ಮನೆಯ ಕುಜನಿಂದ ನಿಮಗೇ ಬಲ ಸಿಗುವುದಿಲ್ಲ,ದಾಂಪತ್ಯ ಜೀವನದಲ್ಲಿ (Married Life) ವಿರಸ ಮೂಡಬಹುದು. ಮತ್ತು ಭೂಮಿಯ ವಿಚಾರದಲ್ಲಿ ಜಾಗ್ರತೆಯಿಂದ ಇರಬೇಕು.ಕುಜ 10 ನೇ ಮನೆಯಲ್ಲಿರುವುದರಿಂದ ಕೆಲಸದಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಆಗುತ್ತವೆ.ಉದ್ಯೋಗದಲ್ಲಿ ಕಿರಿ ಕಿರಿ ಉಂಟಾಗುತ್ತದೆ.ಹಣಕ್ಕಾಗಿ ಪರದಾಡುವಂತಹ ಸ್ಥಿತಿ ಬರಬಹುದು, ಆದ್ರೆ ಗುರು ಇರುವುದರಿಂದ ಹೆದರುವ ಅವಶ್ಯಕತೆ ಇಲ್ಲ.
ತುಲಾ (Libra) ರಾಶಿಯಲ್ಲಿ ಸ್ತ್ರೀ ಯರದ್ದೇ ಮೇಲುಗೈ.ಕಠಿಣವಾದಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಿ, ಅದರಿಂದ ಕುಟುಂಬದಲ್ಲಿ ವೈಮನಸ್ಸು ಉಂಟಾಗಬಹುದು, ಅದರ ಯೋಚನೆಯಿಂದ ನಿದ್ರೆ ಕೂಡ ಕಮ್ಮಿ ಆಗಿ ನಿದ್ರಾ ಹೀನರಾಗಬಹುದು.
ಇದನ್ನೂ ಓದಿ..Capricorn Astrology: ಮಕರ ರಾಶಿಯವರು ಮೇ ತಿಂಗಳು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯ ಇಲ್ಲಿದೆ