Aries Zodiac Sign: ಪ್ರತಿಯೊಂದು ತಿಂಗಳಿನಲ್ಲಿ ಸಹ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಮೇಷ (Aries) ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಕೆಲವರಿಗೆ ರಾಜಯೋಗ ಕೆಲವರಿಗೆ ಮಿಶ್ರ ಫಲ ಹಾಗೂ ಅಶುಭ ಫಲಗಳು ಲಭಿಸುತ್ತದೆ 2023 ಮೇ ತಿಂಗಳಲ್ಲಿ ಮೇಷ (Aries) ರಾಶಿಯವರಿಗೆ ಮಿಶ್ರ ಫಲ ಲಭಿಸುತ್ತದೆ ಅನೇಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಅನೇಕ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಕಂಡು ಬರುತ್ತದೆ
ಹಾಗೆಯೇ ಮೇಷ ರಾಶಿಯವರಿಗೆ ಶನಿಯು (Shani) ಅನುಕೂಲಕರನಾಗಿ ಇರುತ್ತಾನೆ ಆದರೆ ನಿಧಾನ ಗತಿಯಲ್ಲಿ ಶನಿಯು ಕೆಲಸ ಕಾರ್ಯ ನಡೆಸುತ್ತಾನೆ .ಕೌಟುಂಬಿಕವಾಗಿ ತೊಂದರೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಬಹಳ ಎಚ್ಚರವಹಿಸಬೇಕು ವ್ಯಾಪಾರ ವ್ಯವಹಾರ ಎಲ್ಲ ಕೆಲಸ ಕಾರ್ಯ ಗಳಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಆದರೆ ಮೇಷ ರಾಶಿಯವರಿಗೆ ಶುಕ್ರನು ಶುಭಕರವಾಗಿ ಇರುತ್ತಾನೆ ಹೆಚ್ಚಿನ ಫಲಗಳಿಗಾಗಿ ಮಂಗಳನನ್ನು ಆರಾಧನೆ ಮಾಡಬೇಕು ನಾವು ಈ ಲೇಖನದ ಮೂಲಕ ಮೇಷ ರಾಶಿಯ 2023 ಮೇ ತಿಂಗಳ ರಾಶಿ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.
ಮೇಷ ರಾಶಿಯವರು ಉರಿಯುತ್ತಿರುವ ಅಗ್ನಿ ತತ್ವ ಹಾಗೂ ಪುರುಷ ತತ್ವ ಸೇರಿದ ರಾಶಿಯಾಗಿದೆ ಮೇಷ ರಾಶಿಯಲ್ಲಿ ಜನಿಸಿದವರು ತನ್ನ ಸ್ವಭಾವದಲ್ಲಿ ಕ್ರಿಯಾತ್ಮಕವಾಗಿ ಇರುತ್ತಾರೆ ಹಾಗೆಯೇ ಅದಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತಾರೆ ಹಾಗೆಯೇ ಮೇಷ ರಾಶಿಯವರು ಸುಲಭವಾಗಿ ಆತ್ಮ ವಿಶ್ವಾಸವನ್ನು ಕಳೆದುಕೊಳ್ಳುವುದು ಇಲ್ಲ ಧೈರ್ಯವಂತರಾಗಿ ಇರುತ್ತಾರೆ ಯಾವುದೇ ಕೆಲಸವನ್ನು ಮಾಡಿದರು ಸಹ ಸಮಯಕ್ಕೆ ಸರಿಯಾಗಿ ಪೂರ್ಣ ಗೊಳಿಸಲು ನಿರ್ಧರಿಸುತ್ತಾರೆ ವೃತ್ತಿಯಲ್ಲಿ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ.
ಏಳನೆಯ ಮನೆಯಲ್ಲಿ ರಾಹು ಮತ್ತು ಕೇತುಗಳ ಜೊತೆ ಮೇಷ ರಾಶಿಯ ಚಂದ್ರನ ರಾಶಿಯಲ್ಲಿ ಏಪ್ರಿಲ್ 22 ರಿಂದ ಗುರು ಗ್ರಹ ಮೇಷ ರಾಶಿಯಲ್ಲಿ ಇರುತ್ತಾನೆ ಮೇ ತಿಂಗಳಿನಲ್ಲಿ ಮಧ್ಯಮ ಫಲವನ್ನು ಪಡೆದುಕೊಳ್ಳುತ್ತಾರೆ ಅಭಿವೃದ್ಧಿಗೆ ಅಡೆತಡೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಶನಿಯಿಂದ ಅಭಿವೃದ್ದಿ ಕಡೆಗೆ ಗಮನ ಹರಿಸಬಹುದಾಗಿದೆ ಶನಿಯು ನೀಡುವ ಪ್ರಯೋಜನಗಳು ನಿಧಾನಗತಿಯಲ್ಲಿ ಇರುತ್ತದೆ ಶನಿಯು ಬರುವಂತಹ ಲಾಭಗಳನ್ನು ಸ್ಥಿರವಾಗಿ ಇರುವ ಹಾಗೆ ಮಾಡುತ್ತಾನೆ.
ಮೇಷ ರಾಶಿಯಲ್ಲಿ ಗುರು ಮತ್ತು ರಾಹು ಇರುವುದರಿಂದ ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಧ್ಯಮ ಫಲವನ್ನು ನೀಡುತ್ತಾರೆ ಗುರು ಒಳ್ಳೆಯ ಫಲವನ್ನು ನೀಡಿದರು ಸಹ ರಾಹುವಿನಿಂದ ಫಲಗಳು ನಶಿಸಿ ಹೋಗುತ್ತದೆ ಮೇ ತಿಂಗಳಿನಲ್ಲಿ ಕೆಲಸ ಕಾರ್ಯಗಳಲ್ಲಿ ಸವಾಲುಗಳು ಹಾಗೂ ಒತ್ತಡಗಳನ್ನು ಎದುರಿಸಬೇಕಾಗಿ ಇರುತ್ತದೆ ಮೇ ಹದಿನೈದನೇ ತಾರೀಖಿನ ನಂತರ ಸೂರ್ಯನು ಇರುವಂತಹ ಪ್ರಗತಿಯಲ್ಲಿ ಸುಧಾರಿಸುವಂತೆ ಮೇಷ ರಾಶಿಯವರಿಗೆ ಮಾಡುತ್ತಾನೆ ರಾಹು ಮೊದಲನೇ ಮನೆಯಲ್ಲಿ ಇರುವುದರಿಂದ ಕೌಟುಂಬಿಕವಾಗಿ ತೊಂದರೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಕುಟುಂಬದ ಸದಸ್ಯರ ನಡುವೆ ಜಗಳ ಕಂಡು ಬರುವ ಸಾಧ್ಯತೆ ಇರುತ್ತದೆ.
ಸುಖ ಸಂತೋಷದ ಜೀವನ ನಡೆಸಲು ಹೊಂದಾಣಿಕೆಯಿಂದ ಜೀವನ ನಡೆಸಬೇಕು ಮೇ ತಿಂಗಳಿನಲ್ಲಿ ಮೇಷ ರಾಶಿಯವರು ಹೆಚ್ಚಿನ ಹಣವನ್ನು ಸಂಪಾದನೆ ಮಾಡುತ್ತಾರೆ ರಾಹು ಮೇಷ ರಾಶಿಯಲ್ಲಿ ಕೇತು 7ನೇಯ ಮನೆಯಲ್ಲಿ ಇರುವುದರಿಂದ ಜೀರ್ಣ ಕ್ರಿಯೆಗೆ ಸಂಬಂಧಿಸಿದಂತೆ ತೊಂದರೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ ಹೆಚ್ಚಿನ ಫಲಗಳಿಗಾಗಿ ಮಂಗಳನನ್ನು ಆರಾಧನೆ ಮಾಡಬೇಕು ಹೀಗೆ ಮೇಷ ರಾಶಿಯವರಿಗೆ ಮಿಶ್ರ ಫಲದಿಂದ ಕೂಡಿ ಇರುತ್ತದೆ ಅನೇಕ ಸಮಸ್ಯೆಯನ್ನು ಎದುರಿಸುತ್ತಾರೆ .