Libra Horoscope May Month Horoscope 2023: ತುಲಾ ರಾಶಿಯು (Libra) ಶುಕ್ರನ ಒಡೆತನದಲ್ಲಿ ಇರುವ ರಾಶಿಯಾಗಿದ್ದು, ಇದು ಗಾಳಿ ಮತ್ತು ಚಲಿಸುವ ಚಿಹ್ನೆಯಾಗಿದೆ. ಈ ರಾಶಿಯಡಿಯಲ್ಲಿ ಜನಿಸಿದಂತಹ ಜನರು ಸೃಜನಶೀಲ ವಿಷಯಗಳಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ. ಹಾಗಿದ್ದರೆ ತುಲಾ (Libra Horoscope) ರಾಶಿಯಲ್ಲಿ ಜನಿಸಿದ ಜನರ 2023 ರ ಮೇ ತಿಂಗಳ ಭವಿಷ್ಯ ಹೇಗಿದೆ? ಅನ್ನೋದನ್ನ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
Libra Horoscope May Month
ತುಲಾ ರಾಶಿಯಲ್ಲಿ ( Libra) ಜನಿಸಿದ ಜನರಿಗೆ ಮೇ ತಿಂಗಳಲ್ಲಿ ಪ್ರಯಾಣ ಮಾಡುವ ವಿಷಯದಲ್ಲಿ ಹೆಚ್ಚು ಉತ್ಸಾಹವನ್ನು ಹೊಂದಿರುತ್ತಾರೆ. ಮನರಂಜನೆಯಲ್ಲಿ (Entertainment) ಆಸಕ್ತಿಯನ್ನು ಹೊಂದುವ ಮೂಲಕ ಹೆಚ್ಚೆಚ್ಚು ಮನರಂಜನೆಯನ್ನು ಪಡೆಯುವುದು ಇವರ ಆಶಯವಾಗಿರುತ್ತದೆ. ಹೆಚ್ಚಿನ ಹಾಸ್ಯಪ್ರಜ್ಞೆಯನ್ನು ಇವರು ಹೊಂದಿರುತ್ತಾರೆ ಮತ್ತು ಅದನ್ನೇ ಬಳಸಿಕೊಳ್ಳುವ ಲಕ್ಷಣಗಳು ಅವರಲ್ಲಿ ಇರಲೂಬಹುದು. ಮೇ (May) ತಿಂಗಳಲ್ಲಿ ತುಲಾ ರಾಶಿಯಲ್ಲಿ ಜನಿಸಿದ ಜನರು ಕೆಲವೊಮ್ಮೆ ಅಸುರಕ್ಷಿತ ಭಾವನೆಗಳನ್ನು ಹೊಂದಬಹುದು. ಇದಕ್ಕೆ ಕಾರಣ ರಾಹು ಮತ್ತು ಕೇತು ಕ್ರಮವಾಗಿ ಮೊದಲ ಮತ್ತು ಏಳನೇ ಮನೆಯಲ್ಲಿ ನೋಡಲ್ ಗ್ರಹಗಳ ಉಪಸ್ಥಿತಿಯು ಆಗಿರುತ್ತದೆ.
ಇನ್ನೂ ತುಲಾ (Libra Astrology) ರಾಶಿಯವರ ವೃತ್ತಿಜೀವನದ ಬಗ್ಗೆ ನೋಡುವುದಾದರೆ, ಅವರು ಕೈಗೆತ್ತಿಕೊಂಡ ಕಾರ್ಯಗಳನ್ನು ಪೂರ್ಣಗೊಳಿಸಲು ವಿಳಂಬವಾಗಬಹುದು ಮತ್ತು ಈಗಾಗಲೇ ಮಾಡುತ್ತಿರುವ ಕೆಲಸದಲ್ಲಿ ತೃಪ್ತಿ ಇಲ್ಲದೆಯೂ ಇರಬಹುದು. ಈ ನೋಡಲ್ ಗ್ರಹಗಳ ಸ್ಥಾನ ರಾಹು ಮತ್ತು ಕೇತುಗಳು ಉತ್ತಮವಾಗಿ ಇಲ್ಲದೇ ಇರಬಹುದು ಮತ್ತು ವೃತ್ತಿಗೆ ಸಂಬಂಧಿಸಿದಂತೆ ಈ ಎರಡೂ ಗ್ರಹಗಳು ಹೆಚ್ಚಿನ ಸವಾಲುಗಳನ್ನು ನೀಡಬಹುದು. ಮತ್ತು ಈ ನೋಡಲ್ ಗ್ರಹಗಳಾದ ರಾಹು ಮತ್ತು ಕೇತುಗಳು ಕೆಲಸದಲ್ಲಿ ಅಡಚಣೆಗಳನ್ನು ಸಹ ಉಂಟು ಮಾಡಬಹುದು ಮತ್ತು ಮೇಲಧಿಕಾರಿಗಳಿಂದ ಕೆಲಸದ ಒತ್ತಡವನ್ನು ತರುವ ಸಾಧ್ಯತೆಯೂ ಸಹ ಇರಬಹುದು.
ಈ ತುಲಾ ರಾಶಿಯಲ್ಲಿ ಜನಿಸಿದ ಜನರಿಗೆ ಗುರುಗ್ರಹದ ಸಂಚಾರ ಚಲನೆ ಮತ್ತು ಮೊದಲ ಮನೆಯ ಮೇಲೆ ಗುರು ಗ್ರಹದ ಅಂಶವು ಅಧ್ಯಯನದಲ್ಲಿ ಪ್ರಗತಿಗೆ ಅವಕಾಶವನ್ನು ನೀಡುತ್ತದೆ. ಕೇತು ಮೊದಲ ಮನೆಯಲ್ಲಿದ್ದು ಇದು ಬುದ್ಧಿವಂತ ಗ್ರಹವಾಗಿದೆ ಮತ್ತು ಸಾಮಾನ್ಯವಾಗಿ ಉತ್ತಮವಾದ ಗುರುವಿನ ಅಂಶವನ್ನು ಪಡೆಯುತ್ತದೆ. ಈ ಅಂಶದಿಂದ ತುಲಾ ರಾಶಿಯಲ್ಲಿ ಜನಿಸಿದ ಜನರು ಚೆನ್ನಾಗಿ ಹೊಳೆಯಲು ಅಂದರೆ ತಮ್ಮ ಪ್ರಖರತೆಯನ್ನು ಹೆಚ್ಚಿಸಿಕೊಳ್ಳಬಹುದು. ಮತ್ತು ಹೆಚ್ಚಿನ ಜ್ಞಾನವನ್ನು ಗಳಿಸಲು ಸಾಧ್ಯವಾಗಬಹುದು. ಆದರೆ ಮೇ ತಿಂಗಳಲ್ಲಿ ತುಲಾ ರಾಶಿಯವರ ಕುಟುಂಬ ಜೀವನವು ಸಂತೋಷವನ್ನು ಕಳೆದುಕೊಳ್ಳಬಹುದು. ಇದು ಏಳನೇ ಮನೆಯಲ್ಲಿ ರಾಹು ಮತ್ತು ಮೊದಲ ಮನೆಯಲ್ಲಿ ಕೇತು ಇರುವ ಕಾರಣದಿಂದಲೂ ಆಗಿರಬಹುದು.
ಈ ಕಾರಣದಿಂದ, ಈ ತಿಂಗಳು ಕುಟುಂಬದಲ್ಲಿ ಸ್ವಲ್ಪ ಕಲಹ, ವಾದ-ವಿವಾದಾಗಳು ಉಂಟಾಗಲು ಬಹುದು. ತುಲಾ ರಾಶಿಯಲ್ಲಿ ಜನಿಸಿದ ಜನರಿಗೆ ಏಳನೇ ಮನೆಯಲ್ಲಿ ರಾಹು ಮತ್ತು ಮೊದಲ ಮನೆಯಲ್ಲಿ ಕೇತು ಇರುವ ಕಾರಣ ಪ್ರೀತಿ ಮತ್ತು ವೈವಾಹಿಕ ಜೀವನಕ್ಕೆ ಸಂಬಂಧಿಸಿದಂತೆ ಏರಿಳಿತಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬರಬಹುದು. ಹಣಕಾಸಿನ ವಿಷಯದಲ್ಲಿ ಏರಿಳಿತಗಳಿರಬಹುದು, ಹತ್ತನೇ ಮನೆಯಲ್ಲಿ ಎರಡನೇ ಮನೆಯ ಅಧಿಪತಿ ಮಂಗಳವು ದುರ್ಬಲ ಸ್ಥಾನದಲ್ಲಿರುವುದರಿಂದ ಇದು ಖರ್ಚುಗಳಲ್ಲಿ ಏರಿಕೆಗೆ ಕಾರಣವಾಗಬಹುದು. ವ್ಯಾಪಾರಸ್ಥರು ಮೋಸ ಹೋಗುವ ಸಾಧ್ಯತೆಗಳು ಇರುತ್ತವೆ. ಆರೋಗ್ಯದ ವಿಷಯದಲ್ಲಿ, ಆರೋಗ್ಯಕ್ಕೆ ಸಂಬಂಧಿಸಿದಂತೆ ಏರಿಳಿತಗಳನ್ನು ಹೊಂದಬಹುದು. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು, ತಲೆನೋವು ಈ ರೀತಿಯ ಸಣ್ಣ ಪುಟ್ಟ ಅನಾರೋಗ್ಯ ಉಂಟಾಗುವ ಸಂಭವ ಇರುತ್ತದೆ. ಆರೋಗ್ಯ ಕಾಳಜಿಯ ಅಗತ್ಯವಿರುತ್ತದೆ.
ಸಮಸ್ಯೆ ಅಂತಾ ಇದ್ದ ಮೇಲೆ ಅದಕ್ಕೆ ಪರಿಹಾರವೂ ಇದ್ದೆ ಇರುತ್ತದೆ ಅಲ್ಲವೇ? ಅದಕ್ಕೆ, ತುಲಾ ರಾಶಿಯಲ್ಲಿ ಜನಿಸಿದ ಜನರಿಗೆ ಈ ಮೇಲಿನ ಸಮಸ್ಯೆಗಳಿಂದ ಪಾರಾಗಲು ಪ್ರತೀ ದಿನ ನೀವು ನಿಮ್ಮ ಸಮಸ್ಯೆಗಳಿಗೆ ಪರಿಹಾರವಾಗಿ “ಓಂ ಕೇತವೇ ನಮಃ” ಎಂದು ಪ್ರತಿದಿನ 41 ಬಾರಿ ಜಪಿಸಬೇಕು.