Almonds Benefits: ಬಾದಾಮಿ ತಿನ್ನುವುದರಿಂದ ಆಗುವ ಪ್ರಯೋಜನಗಳನ್ನು ಕೇಳಿದರೆ ಇಂದಿನಿಂದಲೇ ನೀವು ಬಾದಾಮಿ ತಿನ್ನೋದನ್ನ ಪ್ರಾರಂಭಿಸುತ್ತೀರಾ. ಈಗಾಗಲೇ ಅತ್ಯಂತ ಪರಿಣಿತ ವೈದ್ಯಕೀಯ ತಜ್ಞರಿಂದ ಬಾದಾಮಿ ತಿಂದರೆ ಆಗುವಂತಹ ಪ್ರಯೋಜನಗಳು ಏನು ಎಂಬುದನ್ನು ವೈದ್ಯಕೀಯವಾಗಿ ಸಾಬೀತುಪಡಿಸಿ ತೋರಿಸಿರುವ ಕಾರಣದಿಂದಾಗಿ ಬಾದಾಮಿಯನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು ಕೂಡ ಈಗಾಗಲೇ ಲಭ್ಯವಾಗಿವೆ. ಮಧುಮೇಹವನ್ನು ಹೊಂದಿರುವಂತಹ ವ್ಯಕ್ತಿಗಳು ಬಾದಾಮಿ ತಿನ್ನುವುದರಿಂದ ಮಧುಮೇಹವನ್ನು ಕಂಟ್ರೋಲ್ ನಲ್ಲಿ ಇಡಬಹುದಾಗಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಬಾದಾಮಿ ಅನ್ನು ಊಟಕ್ಕಿಂತ ಮುಂಚೆ ತಿಂದರೆ ನಿಮ್ಮ ಬೊಜ್ಜನ್ನು ಕೂಡ ಕಂಟ್ರೋಲ್ ನಲ್ಲಿ ಇಡಬಹುದಾಗಿದೆ ಎಂಬುದಾಗಿ ವೈದ್ಯರು ಸಲಹೆ ನೀಡಿದ್ದಾರೆ. ಊಟಕ್ಕಿಂತ 30 ನಿಮಿಷ ಮುಂಚೆ ಒಂದು ಹಿಡಿ ಅಂದರೆ 20 ಗ್ರಾಂ ಬಾದಾಮಿಯನ್ನು ತಿನ್ನುವುದು ಸಾಕಷ್ಟು ಆರೋಗ್ಯಕರ ಲಾಭಗಳನ್ನು ನೀಡಲಿವೆ. ಇದರ ಸೇವನೆ ಎನ್ನುವುದು ಗ್ಲುಕೋಸ್ ಹಾಗೂ ಇನ್ಸುಲಿನ್ ಏರಿಳಿತವನ್ನು ಕಂಟ್ರೋಲ್ ನಲ್ಲಿ ಇಡುತ್ತದೆ ಎಂಬುದಾಗಿ ತಿಳಿದು ಬಂದಿದೆ. ಕೇವಲ ಮೂರು ದಿನಗಳಲ್ಲಿ ಊಟಕ್ಕೂ ಮುಂಚೆ ಬಾದಾಮಿಯನ್ನು ತಿನ್ನುವುದರಿಂದ ಪ್ರಿ ಡಯಾಬಿಟಿಕ್ ವ್ಯಕ್ತಿಗಳು ಗ್ಲೈಸಮಿಕ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದಂತೆ.

ಬಾದಾಮಿ ಹಣ್ಣು ತಿನ್ನುವುದರಿಂದ ರ’ ಕ್ತದಲ್ಲಿರುವಂತಹ ಶುಗರ್ ಹಾರ್ಮೋನುಗಳನ್ನು ಕಂಟ್ರೋಲ್ ಮಾಡಬಹುದಾಗಿದ್ದು, ಫೈಬರ್ ಮನೋಸಾಚುರೆಟೆಡ್ ಕೊಬ್ಬು ಮೆಗ್ನೀಷಿಯಂ ಹಾಗೂ ಸತು ಅಂಶವನ್ನು ಪಡೆಯಬಹುದಾಗಿದೆ.

ಕಡಿಮೆ ತೂಕವನ್ನು ಉತ್ತೇಜಿಸಲು ಆಹಾರವನ್ನು ಸೇವಿಸುವಂತಹ ಜನರಿಗೆ ಬಾದಾಮಿ ಸೇವನೆ ಎನ್ನುವುದು ಉತ್ತಮ ಪ್ರಯೋಜನಗಳನ್ನು ನೀಡುತ್ತದೆ. ಅದರಲ್ಲೂ ವಿಶೇಷವಾಗಿ ಸಕ್ಕರೆ ಸಮಸ್ಯೆಯಿಂದ ಬಳಲುತ್ತಿರುವಂತಹ ಜನರಿಗೆ ಬಾದಾಮಿ ಸೇವನೆ ಎನ್ನುವುದು ಸಾಕಷ್ಟು ವಿಧಗಳಲ್ಲಿ ಪ್ರಯೋಜನಕಾರಿ ಪ್ರೋಟೀನ್ ಅಂಶಗಳನ್ನು ನೀಡುತ್ತವೆ ಎಂಬುದನ್ನು ಸ್ವತಃ ಪರಿಣಿತ ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!