Lord Lakshmi: ಮನುಷ್ಯನ ಜೀವನದಲ್ಲಿ ಒಂದು ಬಾರಿಯಾದರೂ ಒಳ್ಳೆ ಸಮಯ ಹಾಗೂ ಕೆಟ್ಟ ಸಮಯ ಎಂಬುದು ಬಂದೇ ಬರುತ್ತದೆ. ಹಾಗಾದರೆ ಒಳ್ಳೆ ಸಮಯ ಬರುವುದಕ್ಕೂ ಮುನ್ನ ಲಕ್ಷ್ಮಿ ದೇವತೆ (Lord Lakshmi) ನೀಡುವ ಸಂಕೇತಗಳು ಯಾವುವು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಕೆಲವೊಂದು ಬಾರಿ ಮುಂಜಾನೆ ಎದ್ದಾಗ ಸಕಾರಾತ್ಮಕ (Positive) ಶಕ್ತಿಯು ನಮ್ಮಲ್ಲಿ ಹೆಚ್ಚಿರುತ್ತದೆ ಹಾಗೂ ಅಂದು ನಾವು ಯಾವುದೇ ಕೆಲಸ ಮಾಡಿದರೂ ಯಶಸ್ಸು ದೊರೆಯುತ್ತದೆ ಎಂಬುದು ಅನಿಸುತ್ತಿದ್ದರೆ ಇದು ಯಾವುದಾದರೂ ಒಂದು ಶುಭ ಸಮಾಚಾರ (Good news) ಅಥವಾ ಒಳ್ಳೆಯ ಕಾರ್ಯ (Good work) ನಿಮ್ಮಿಂದ ಆಗುತ್ತದೆ ಎಂಬುದನ್ನು ಸೂಚಿಸುತ್ತದೆ ಒಂದು ವೇಳೆ ನಿಮ್ಮ ಮನೆಗೆ ಸಂಬಂಧಿಕರು ಬಂದು ಯಾವುದೇ ಕಾರಣಗಳಿಲ್ಲದೇ ನಿಮಗೆ ಹಣವನ್ನು ನೀಡುತ್ತಿದ್ದರೆ ಇದು ಕೂಡ ಶುಭ ಸಂಕೇತವಾಗಿರುತ್ತದೆ.
ಒಂದು ವೇಳೆ ಯಾವುದಾದರೂ ಮುಖ್ಯ ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗಬೇಕಾದರೆ ಬಿಂದಿಗೆಯಲ್ಲಿ ನೀರು ತುಂಬಿರುವ ದೃಶ್ಯ ಕಣ್ಣಿಗೆ ಬಿದ್ದರೆ ಅಥವಾ ಹಾಲು ತುಂಬಿರುವ ಪಾತ್ರೆ ನಿಮ್ಮ ಕಣ್ಣಿಗೆ ಬಿದ್ದರೆ ಇದು ಶುಭ ಸಂಕೇತವಾಗಿರುತ್ತದೆ ಹಾಗೂ ಇದರಿಂದ ಅಂದು ಮಾಡುವಂತಹ ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ಕಾಣಬಹುದು.
ಒಂದು ವೇಳೆ ನಿಮ್ಮ ಮನೆಯ ಮುಂದೆ ಬೆಕ್ಕುಗಳು ಮರಿಯನ್ನು ಹಾಕಿದರೆ ಆಕಸ್ಮಿಕವಾಗಿ ಧನ ಲಾಭವಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಸಾಮಾನ್ಯವಾಗಿ ಯಾವುದೇ ರೀತಿಯ ಶುಭ ಫಲಗಳು ಸಿಗುವ ಮುನ್ನ ಪ್ರಕೃತಿಯ ಮೂಲಕ ಭಗವಂತ ನಮಗೆ ಕೆಲವು ಸಂಕೇತಗಳನ್ನು ನೀಡುತ್ತಾನೆ. ಸಾಮಾನ್ಯವಾಗಿ ಒಳ್ಳೆಯ ಸಮಯ ಬರುವುದಕ್ಕಿಂತ ಮುಂಚಿತವಾಗಿ ಭಗವಂತ ಪ್ರಾಣಿ ಪಕ್ಷಿಗಳ ಮೂಲಕ, ಪ್ರಕೃತಿಯ ಮೂಲಕ ಹಾಗೂ ಕೆಲವನ್ನು ಮನುಷ್ಯರ ಮೂಲಕ ಕೆಲವು ಸಂಕೇತಗಳನ್ನು ನೀಡುತ್ತಾನೆ. ಅಂತಹ ಕೆಲವು ಸಂಕೇತಗಳ ಬಗ್ಗೆ ತಿಳಿಯೋಣ ಬನ್ನಿ.
ಬ್ರಾಹ್ಮಿ ಮುಹೂರ್ತದಲ್ಲಿ ಒಳ್ಳೆಯ ಕನಸುಗಳು ಬೀಳುವುದು ಮುಂದೆ ನಮಗೆ ಒಳ್ಳೆಯ ಸಮಯದ ಆಗಮನದ ಸಂಕೇತವಾಗಿರುತ್ತದೆ. ಕೆಲವೊಮ್ಮೆ ಬ್ರಾಹ್ಮಿ ಮುಹೂರ್ತ ಅಂದರೆ 3 ರಿಂದ 5 ಗಂಟೆಯ ಸಮಯದಲ್ಲಿ ಕನಸುಗಳು ಬೀಳುತ್ತವೆ. ಅಂತಹ ಕನಸುಗಳಲ್ಲಿ ಒಂಟಿಯಾಗಿ ಗುರಿಯ ಕಡೆ ನಡೆಯುತ್ತಾ ಸಾಗುವುದು ಒಳ್ಳೆಯ ಸಂಕೇತವಾಗಿದೆ. ಮುಂಬರುವ ದಿನಗಳಲ್ಲಿ ಗುರಿಯನ್ನು ತಲುಪಿ ನಮ್ಮ ಕಷ್ಟಗಳೆಲ್ಲ ನಿವಾರಣೆಯಾಗುತ್ತದೆ ಎಂಬುದರ ಸಂಕೇತವಾಗಿರುತ್ತದೆ.
ಇದನ್ನೂ ಓದಿ..Marriage Astrology: ವೃಷಭ ರಾಶಿಯವರಿಗೆ ದಾಂಪತ್ಯದಲ್ಲಿ ಹೊಂದಾಣಿಕೆ ಆಗುವ ರಾಶಿ ಯಾವುದು? ಗೊತ್ತಾ..
ಯಾವುದೇ ಕಾರಣವಿಲ್ಲದೆ ಮನಸ್ಸು ಪ್ರಫುಲ್ಲದಿಂದ ಇದ್ದರೆ, ಖುಷಿಯಾಗಿದ್ದರೆ, ಯಾವುದೋ ಸಾಧಿಸಿದ ಮನೋ ಭಾವ ಮೂಡುತ್ತಿದ್ದರೆ, ಈ ರೀತಿ ಖುಷಿಗೆ ಯಾವುದೇ ಕಾರಣ ಸಿಗದಿದ್ದರೆ ಇದು ಕೂಡ ಒಳ್ಳೆಯ ಸಮಯ ಬರುವುದಕ್ಕಿಂತ ಮುಂಚೆಯ ಶುಭ ಶಕುನ ವಾಗಿರುತ್ತದೆ. ಗೋಮಾತೆಯು ಪದೇ ಪದೆ ಮನೆಯ ಮುಂದೆ ನಿಲ್ಲುವುದು ಸಹ ಶುಭ ಸಂಕೇತವಾಗಿರುತ್ತದೆ. ಹಾಗಾಗಿ ಗೋಮಾತೆಯು ಪದೇ ಪದೇ ನಿಮ್ಮ ಮನೆಯ ಮುಂದೆ ಕಾಣಿಸಿಕೊಂಡರೆ ಅದಕ್ಕೆ ಫಲ ಆಹಾರಗಳನ್ನು ನೀಡಿ ಸಂತೃಪ್ತಿಗೊಳಿಸಿ.
ಕೋತಿ ಬಂದು ಮನೆಯಲ್ಲಿರುವ ಆಹಾರ ಅಥವಾ ಫಲ ಗಳನ್ನು ಸೇವಿಸಿದರೆ ಇದು ಶುಭ ಸೂಚನೆ. ಬೆಕ್ಕು ಮನೆಯಲ್ಲಿ ಮರಿಗಳಿಗೆ ಜನ್ಮ ನೀಡುವುದು ಸಹ ಶುಭ ಸೂಚನೆಯಾಗಿರುತ್ತದೆ. ಕಾಗೆ ,ಗೂಬೆ ಗಳನ್ನು ಹೊರತುಪಡಿಸಿ ಇನ್ನಿತರ ಯಾವುದೇ ರೀತಿಯ ಪಕ್ಷಿಗಳು ಮನೆಯ ಅಂಗಳದಲ್ಲಿ ಗೂಡನ್ನು ಕಟ್ಟಿ ಮರಿ ಮಾಡಿದರೆ ಮನೆಗೆ ಇದು ಶುಭವನ್ನು ಉಂಟುಮಾಡುತ್ತದೆ ಹಾಗೂ ಇದು ಒಳ್ಳೆಯ ಸಂಕೇತವಾಗಿರುತ್ತದೆ
ಇದನ್ನೂ ಓದಿ..Taurus And Scorpio: ವೃಷಭ ಹಾಗೂ ವೃಶ್ಚಿಕ ರಾಶಿಯವರ ದಾಂಪತ್ಯ ಜೀವನ ಹೇಗಿರತ್ತೆ? ನೋಡಿ
ಒಂದು ವರ್ಷದ ಕೆಳಗಿನ ಮಕ್ಕಳು ಕಾರಣವಿಲ್ಲದೆ ನಿಮ್ಮನ್ನು ನೋಡಿ ಸದಾ ನಗುತ್ತಿದ್ದರೆ ಇದು ಕೂಡ ಒಳ್ಳೆಯ ದಿನಗಳು ಬರುವ ಸೂಚನೆಯಾಗಿರುತ್ತದೆ. ಪೂಜೆ ಮಾಡುವ ಸಮಯದಲ್ಲಿ ದೇವರ ಮೇಲಿರುವ ಪುಷ್ಪಗಳು ಕೆಳಗೆ ಬಿದ್ದರೆ ಅದು ಕೂಡ ಶುಭ ಸೂಚನೆಯಾಗಿರುತ್ತದೆ. ಪುರುಷರಿಗೆ ಬಲಗಣ್ಣು ಮತ್ತು ಮಹಿಳೆಯರಿಗೆ ಎಡಗಣ್ಣು ಹಾರಿದರೆ ಶುಭ ಸಂಕೇತವಾಗಿರುತ್ತದೆ. ಬೆಳಿಗ್ಗೆ ಕೆಲಸಕ್ಕೆ ಹೋಗುವ ಸಮಯದಲ್ಲಿ ಗೋಮಾತೆಯ ದರ್ಶನವಾದರೆ ಮುಂಬರುವ ದಿನಗಳಲ್ಲಿ ಒಳ್ಳೆಯ ದಿನಗಳು ಬರಲಿದೆ ಎಂಬುದರ ಸಂಕೇತವಾಗಿರುತ್ತದೆ.