Virgo Horoscope: ಇಂದಿನ ದಿನಮಾನದಲ್ಲಿ ವ್ಯಾಪರ ವ್ಯವಹಾರಗಳಲ್ಲಿ (Business) ಎಷ್ಟು ಎಚ್ಚರಿಕೆ ವಹಿಸಿದರು ಕಡಿಮೆಯೆ! ಭೂಮಿಯಾಗಲಿ, ಹೆಣ್ಣಾಗಲಿ, ಸಂತಾನವಾಗಲಿ ಎಲ್ಲವೂ ಸಹ ಋಣದ ಮೇಲೆ ದೊರೆಯುವಂತದ್ದಾದರೂ, ಹೊಸ ಉದ್ಯಮಗಳನ್ನು ಪ್ರಾರಂಭಿಸುವ ಸಮಯದಲ್ಲಿ ಜಾತಕಗಳನ್ನು ನೋಡಿಯೆ ಮುಂದುವರೆಯುವುದು ನಮ್ಮ ಸಂಪ್ರದಾಯವಾಗಿದೆ. ಯಾವ ರಾಶಿಯವರನ್ನು (Which zodiac sign) ನಂಬಿ ವ್ಯವಹಾರ ಒಪ್ಪಿಸಬಹುದು ಎನ್ನುವುದನ್ನು ತಿಳಿದುಕೊಳ್ಳದೆ ಮುಂದುವರೆಯುವುದರಿಂದ ನಷ್ಟವನ್ನು ಅನುಭವಿಸಬೇಕಾಗುತ್ತದೆ.
Virgo Horoscope
ಕೇವಲ ಮದುವೆ ಮಾತ್ರವಲ್ಲದೆ ವ್ಯವಹಾರ, ವ್ಯಾಪರಗಳಲ್ಲಿಯೂ ಸಹ ನಮಗೆ ಅನುಕೂಲ ಆಗುವ ರಾಶಿಯ ಜನರೊಡನೆ ವ್ಯವಹರಿಸಿದಲ್ಲಿ ಉತ್ತಮ ಫಲಗಳನ್ನು ಕಾಣಬಹುದಾಗಿದೆ. ಹಾಗಿದ್ದರೆ ಕನ್ಯಾ ರಾಶಿಯಲ್ಲಿ ಜನಿಸಿದವರು ಯಾವ ರಾಶಿಯವರೊಡನೆ ವ್ಯಾಪಾರ ವ್ಯವಹಾರ ಮಾಡಬಹುದು ಎನ್ನುವುದನ್ನು ನೋಡೋಣ. ಕನ್ಯಾರಾಶಿಗೆ ಬುಧನು ಅಧಿಪತಿಯಾಗಿದ್ದಾನೆ ಹಾಗೂ ಬ್ರಹಸ್ಪತಿ ಗ್ರಹವು ಯೋಗವನ್ನು ತರುವಂತದ್ದಾಗಿದೆ. ಸಿಂಹರಾಶಿ, ಮಿಥುನರಾಶಿ ಹಾಗೂ ಮೇಷ ರಾಶಿಯು ಕನ್ಯಾರಾಶಿಗೆ ಮಿತ್ರರಾಶಿಗಳಾಗಿವೆ. ಜಲಚರರಾಶಿಯಾದ ಕಟಕವು ಶತೃರಾಶಿಯಾಗಿ ಪರಿಣಮಿಸಿದೆ. ಪಶ್ಚಿಮ ಹಾಗೂ ದಕ್ಷಿಣ ದಿಕ್ಕುಗಳು ಬಹಳ ಅದೃಷ್ಟದ ದಿಕ್ಕುಗಳಾಗಿವೆ.
ಕನ್ಯಾರಾಶಿಗೆ ಶುಭವಾಗಿರುವ ರಾಶಿಗಳಲ್ಲಿ ಮೊದಲನೆಯದು ಸಿಂಹ ರಾಶಿಯಾಗಿದೆ. ಸಿಂಹ ರಾಶಿಯಲ್ಲಿಯ ರವಿಗೂ ಕನ್ಯಾರಾಶಿಯ ಬುಧನಿಗು ಬಹಳ ಮಿತ್ರತ್ವವು ಇರುವುದರಿಂದ, ಈ ಎರಡು ರಾಶಿಗಳ ವ್ಯವಹಾರ ಸಂಬಂಧವು ಉತ್ತಮವಾಗಿರುತ್ತದೆ. ಜಾತಕದಲ್ಲಿ ಬುಧಾದಿತ್ಯ ಯೋಗವು ಬಂದಿದ್ದರೆ ಸಿಂಹರಾಶಿಯವರಿಂದ ಬಹಳ ಅನುಕೂಲವು ಆಗಲಿದೆ. ಕನ್ಯಾರಾಶಿಯವರು ಸ್ವಭಾವತಃ ಗಟ್ಟಿ ಮನಸ್ಸಿನವರು. ಅಂತೆಯೇ ಸಿಂಹ ರಾಶಿಯವರು ಸಹ ಹಿಡಿದ ಕೆಲಸವನ್ನು ಸಾಧಿಸುವ ಛಲ ಹೊಂದಿರುವುದರಿಂದ ಎರಡು ರಾಶಿಯವರು ಸೇರಿ ಉದ್ಯಮಗಳನ್ನು ಹುಟ್ಟು ಹಾಕಿದಲ್ಲಿ ಒಳ್ಳೆಯ ಲಾಭಗಳನ್ನು ಪಡೆಯಬಹುದಾಗಿದೆ.
ವೃಷಭ ಹಾಗೂ ತುಲಾ ರಾಶಿಯವರೊಡನೆ ಉದ್ಯಮ, ರಿಯಲ್ ಎಸ್ಟೇಟ್’ನಂತಹ ಪಾರ್ಟ್ನರ್’ಶಿಪ್ ಬ್ಯುಸಿನೆಸ್ ಉತ್ತಮವಾಗಿ ಬೆಳೆಯುತ್ತದೆ. ಕನ್ಯಾರಾಶಿಯಲ್ಲಿ ಇರುವಂತವರು ಮುಖ್ಯವಾಗಿ ಈ ವೃಷಭ ಹಾಗೂ ತುಲಾ ರಾಶಿಯವರೊಡನೆ ಪಾಲುದಾರಿಕೆಯ ವ್ಯವಹಾರದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣುತ್ತಾರೆ. ತುಲಾ ಹಾಗೂ ವೃಷಭ ರಾಶಿಯ ಅಧಿಪತಿ ಆದಂತಹ ಶುಕ್ರನು ಲಾಭವನ್ನು ತರುತ್ತಾನೆ ಜೊತೆಯಲ್ಲಿ ಶುಕ್ರನು ಕನ್ಯಾರಾಶಿಯವರಿಗೆ ಮಿತ್ರನು ಆಗುತ್ತಾನೆ.
ಅದೇ ರೀತಿ ಕನ್ಯಾರಾಶಿಗೆ ತುಂಬಾ ಚೆನ್ನಾಗಿ ಹೊಂದಿಕೆಯಾಗುವಂತ ರಾಶಿಯೆಂದರೆ ಮಿಥುನ ರಾಶಿ. ಕನ್ಯಾರಾಶಿಯವರು ಮಿಥುನ ರಾಶಿಯವನ್ನು ನಂಬಿಕೊಂಡು ವ್ಯವಹಾರವನ್ನು ಒಪ್ಪಿಸಬಹುದು. ಇವರಿಂದ ಬಹಳ ಆದಾಯವು ಸಿಗದೆ ಹೋದರು, ನಂಬಿಕೆಗೆ ಮೋಸವಾಗುವುದಿಲ್ಲ. ಅಂತೆಯೇ ಕನ್ಯಾರಾಶಿಯವರ ವ್ಯಾಪಾರವು ಕುಸಿಯದ ಹಾಗೆ ಮಿಥುನ ರಾಶಿಯವರು ನಾಜುಕಿನಿಂದ ನೋಡಿಕೊಳ್ಳುತ್ತಾರೆ. ಸಣ್ಣ ಪುಟ್ಟ ವ್ಯತ್ಯಾಸಗಳು ಬಂದರು ಸಹ ಈ ಎರಡು ರಾಶಿಗಳ ವ್ಯವಹಾರ ಸಂಬಂಧವು ಚೆನ್ನಾಗಿಯೇ ಮುಂದುವರೆಯುತ್ತದೆ.
ಇದನ್ನೂ ಓದಿ..Sri Krishna: ಹಸುವಿನ ಆ ಅಂಗ ಮುಟ್ಟಿದರೆ ದಾರಿದ್ರ್ಯತೆ ನಿವಾರಣೆ ಆಗುತ್ತೆ, ಬಡತನ ಇರೋದಿಲ್ಲ ಶ್ರೀ ಕೃಷ್ಣಾ ಹೇಳಿದ ಮಾತು
ಹಾಗೆಯೇ ಕನ್ಯಾರಾಶಿಯವರು ಕಟಕ ರಾಶಿಯವರೊಡನೆ ವ್ಯವಹರಿಸಬೇಕಾದರೆ ಬಹಳ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಕಟಕ ರಾಶಿಯ ಅಧಿಪತಿಯಾದಂತಹ ಚಂದ್ರನಿಗೂ, ಕನ್ಯಾರಾಶಿಯ ಅಧಿಪತಿಯಾಗಿರುವ ಬುಧನಿಗೂ ಹೊಂದಾಣಿಕೆ ಸಾಧ್ಯವಿಲ್ಲ. ಇಲ್ಲಿ ಶತೃತ್ವವು ಉಂಟಾಗುತ್ತದೆ. ಆದ್ದರಿಂದ ಕನ್ಯಾರಾಶಿಯವರು ಕಟಕ ರಾಶಿಯವರೊಡನೆ ವ್ಯವಹಾರ ಮಾಡದಿರುವುದೆ ಉತ್ತಮ. ಅದರಂತೆಯೇ ಮೀನ ಮತ್ತು ಧನಸ್ಸು ರಾಶಿಯವರೊಡನೆ ಸಹ ಕನ್ಯಾರಾಶಿಯ ವ್ಯವಹಾರ ಉತ್ತಮವಾಗಿರುವುದಿಲ್ಲ. ತೊಡಕುಗಳೇ ಹೆಚ್ಚಾಗಿ, ವ್ಯವಹಾರ ಮೇಲೆರದಂತೆ ತಡೆಯುತ್ತವೆ. ಇವಿಷ್ಟು ಕನ್ಯಾರಾಶಿಯ ವ್ಯವಹಾರ ಫಲಗಳಾಗಿವೆ.