ಹಿಂದೂ ಧರ್ಮದ (Hinduism) ಪ್ರಕಾರ ಯುಗಾದಿ (Ugadi) ಹಬ್ಬವನ್ನು ಹೊಸ ವರ್ಷ ಎಂದು ಆಚರಣೆ ಮಾಡಲಾಗುತ್ತದೆ ಯುಗಾದಿ (Ugadi) ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ ಮಾರ್ಚ್ 22ರಂದು ಶೋಭಕೃತಿ ಸಂವತ್ಸರ ಯುಗಾದಿ ಹಬ್ಬ (Ugadi Festival) ಆಚರಣೆ ಮಾಡಲಾಗುತ್ತದೆ ಯುಗಾದಿಯ ಸಮಯದಲ್ಲಿ ಪ್ರತಿಯೊಂದು ಗಿಡ ಮರದಲ್ಲಿ ಸಹ ಚಿಗುರಿಡೆಯಲು ಪ್ರಾರಂಭ ಆಗುತ್ತದೆ ಕೋಗಿಲೆಯ ಇಂಪಾದ ಕೂಗು ಎಲ್ಲ ಕಡೆಗಳಲ್ಲಿ ಕೇಳಿ ಬರುತ್ತದೆ
ಯುಗಾದಿ ಬಂದರೆ ಸಾಕು ಈ ಸಮಯದಲ್ಲಿ ನಮ್ಮ ಜೀವಕ್ಕೆ ನವ ಚೈತನ್ಯವನ್ನು ತಂದು ಕೊಡುತ್ತದೆ. ಪರಿಸರವೆಲ್ಲ ಸ್ವಚ್ಛಂದವಾಗಿ ಇರುತ್ತದೆ ಎಲ್ಲ ಕಡೆಗಳಲ್ಲಿ ಹಸಿರಿನಿಂದ ಪ್ರಕೃತಿ ಕಂಗೊಳಿಸುತ್ತದೆ ಹಾಗೆಯೇ ಯುಗಾದಿಯ ನಂತರ ರಾಶಿಚಕ್ರದಲ್ಲಿ (Zodiac) ಗ್ರಹಗಳ ಬದಲಾವಣೆ ಕಂಡು ಬರುತ್ತದೆ, ಗ್ರಹಗಳ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಕೆಲವು ರಾಶಿಯವರಿಗೆ ರಾಜಯೋಗ ಹಾಗೂ ಕೆಲವು ರಾಶಿಯವರಿಗೆ ಮಿಶ್ರ ಫಲ ಹಾಗೂ ಕೆಲವು ರಾಶಿಯವರಿಗೆ ಅಶುಭ ಫಲಗಳಿಂದ ಕೂಡಿ ಇರುತ್ತದೆ ನಾವು ಈ ಲೇಖನದ ಮೂಲಕ 2023 ಯುಗಾದಿಯಿಂದ 2024ರ ಯುಗಾದಿಯ ವರೆಗಿನ ಯುಗಾದಿಯ ಭವಿಷ್ಯವನ್ನು ತಿಳಿದುಕೊಳ್ಳೋಣ.
ಯುಗಾದಿಯ ನಂತರ ಹನ್ನೆರಡು ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಅದರಲ್ಲಿ ಮೇಷ (Aries) ರಾಶಿಯವರಿಗೆ ಹೆಣ್ಣು ಮಕ್ಕಳಿಂದ ತೊಂದರೆ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗೆಯೇ ಗಂಡು ಮಕ್ಕಳಾಗಿದ್ದರೆ ಹೆಣ್ಣು ಮಕ್ಕಳಿಂದ ತೊಂದರೆ ಕಂಡು ಬರುತ್ತದೆ ಹಾಗಾಗಿ ಹಣಕಾಸಿನ (Money)ಹಾಗೂ ಇನ್ನಿತರ ವಿಷಯಗಳಲ್ಲಿ ಬಹಳ ಜಾಗರೂಕತೆಯಿಂದ ಇರಬೇಕು
ಯಾವುದೇ ವ್ಯವಹಾರ ಮಾಡುವಾಗ ಬಹಳ ಎಚ್ಚರ ವಹಿಸಬೇಕು ಹೋದ ವರ್ಷಕಿಂತ ಈ ವರ್ಷದಲ್ಲಿ ಮೇಷ ರಾಶಿಯವರಿಗೆ (confidence) ಕಡಿಮೆ ಇರುತ್ತದೆ ಹೆಚ್ಚಿನ ಶುಭ ಫಲವನ್ನು ಪಡೆದುಕೊಳ್ಳಲು ಕೊಲ್ಲಾಪುರ ಮಹಾಲಕ್ಷ್ಮಿ ದೇವಸ್ಥಾನಕ್ಕೆ ದೇಣಿಗೆ ರೂಪದಲ್ಲಿ ಊಟಕ್ಕೆ ಸಹಾಯ ಮಾಡಬೇಕು ಹಾಗೆಯೇ ಇನ್ನಿತರ ದೇವಸ್ಥಾನಕ್ಕೆ ದೇಣಿಗೆ ನೀಡುವ ಹೆಚ್ಚಿನ ಫಲವನ್ನು ಪಡೆದುಕೊಳ್ಳಬಹುದು.
ಇದನ್ನೂ ಓದಿ..Libra Astrology: ತುಲಾ ರಾಶಿಯವರಿಗೆ ಒಂದು ಸ್ತ್ರೀಯಿಂದ ನಿಮ್ಮ ಲೈಫ್ ಟರ್ನಿಂಗ್ ಪಾಯಿಂಟ್ ಆಗಲಿದೆ
ವೃಷಭರಾಶಿ (Taurus) ಯವರು ಈ ಹಿಂದೆ ರಾಜಯೋಗವನ್ನು ಅನುಭವಿಸಿದ್ದರು ಈ ವರ್ಷದಲ್ಲಿ ಗುರು ಬಲ ಇರುವುದು ಇಲ್ಲ ಅತಿಯಾಗಿ ಸಾಲವನ್ನು ಮಾಡಬಾರದು ಶಿವನ ದೇವಾಲಯಕ್ಕೆ ಅನ್ನ ದಾನಕ್ಕೆ ದೇಣಿಗೆಯನ್ನು ಕೊಡುವ ಮೂಲಕ ಹೆಚ್ಚಿನ ಫಲವನ್ನು ಪಡೆದುಕೊಳ್ಳಬಹುದು ಸಮುದ್ರ ಸ್ನಾನವನ್ನು ಮಾಡಬೇಕು ಮಿಥುನ ರಾಶಿ (Gemini) ಯೋಗ ಆರಂಭ ಆಗಿದೆ ಈ ವರ್ಷದಲ್ಲಿ ಸುಖ ಶಾಂತಿ ನೆಮ್ಮದಿ ಸಿಗುತ್ತದೆ ಕೆಲಸದಲ್ಲಿ ಪ್ರಮೋಷನ್ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ .
ಮಿಥುನ ರಾಶಿಯವರು ತಿರುಪತಿ ದೇವಸ್ಥಾನಕ್ಕೆ ದೇಣಿಗೆಯನ್ನು ನೀಡಬೇಕು ಇದರಿಂದ ಹೆಚ್ಚಿನ ಫಲಗಳು ಲಭಿಸುತ್ತದೆ ಕಟಕ ರಾಶಿಯವರು ಹೊಸದಾಗಿ ಖರೀದಿ ಹಾಗೂ ಬಿಸ್ನೆಸ್ ಮಾಡುವಾಗ ಯೋಚಿಸಬೇಕು ಹಾಗೆಯೇ ಶಿವನ ಕ್ಷೇತ್ರವನ್ನು ದರ್ಶನ ಮಾಡಬೇಕು
ಹಾಗೆಯೇ ಸಿಂಹ ರಾಶಿಯವರಿಗೆ ಈ ವರ್ಷ ಒಂದು ಒಳ್ಳೆಯ ಸಮಯವಾಗಿದೆ ಇಷ್ಟು ದಿನ ತುಂಬಾ ನೋವನ್ನು ಅನುಭವಿಸಿದ್ದರು ಆದರೆ ಈ ವರ್ಷದಲ್ಲಿ ಶುಭದಾಯಕವಾಗಿ ಇರುತ್ತದೆ ಹೆಚ್ಚಿನ ಶುಭ ಫಲವನ್ನು ಪಡೆಯಲು ಮನೆದೇವರ ದರ್ಶನ ಮಾಡಬೇಕು ಹಾಗೂ ದೇಣಿಗೆಯನ್ನು ನೀಡಬೇಕು
ಕನ್ಯಾ ರಾಶಿಯವರು ಯಾವುದೇ ಸಮಸ್ಯೆಗೆ ಸಿಲುಕಿಕೊಳ್ಳಬಾರದು ಇರುವುದರಲ್ಲಿ ಅಚ್ಚು ಕಟ್ಟಾಗಿ ನಿರ್ವಹಿಸಬೇಕು ಸಾಧ್ಯವಾದರೆ ತಿರುಪತಿಯ ದರ್ಶನ ಮಾಡಬೇಕು .ಅನ್ನದಾನಗಳಿಗೆ ದೇಣಿಗೆಯನ್ನು ಕೊಡಬೇಕು ತುಲಾ ರಾಶಿಯವರಿಗೆ ಒಳ್ಳೆಯ ಸಮಯ ಇದಾಗಿದೆ ಅನೇಕ ಸಂಕಷ್ಟವನ್ನು ಈ ಹಿಂದೆ ಅನುಭವಿಸಿದ್ದರು ಈಗ ಶುಭದಾಯಕವಾಗಿ ಇರುತ್ತದೆ ಮನೆದೇವರ ದರ್ಶನ ಮಾಡಬೇಕು ಹಾಗೂ ದೇಣಿಗೆಯನ್ನು ಕೊಡಬೇಕು ಹಾಗೆಯೇ ವೃಶ್ಚಿಕ ರಾಶಿಯವರ ಜೀವನದಲ್ಲಿ ಶತ್ರುಗಳು ಮಿತ್ರರಾಗಲು ಬರುತ್ತಾರೆ ಆದರೆ ಶತ್ರುಗಳನ್ನು ಆದಷ್ಟು ದೂರ ಇರಬೇಕು ಕಟೀಲು ದುರ್ಗಾ ಪರಮೇಶ್ವರಿ ದೇವರ ದರ್ಶನ ಮಾಡಬೇಕು ಅಲ್ಲಿ ಅನ್ನದಾನಗಳಿಗೆ ದೇಣಿಗೆಯನ್ನು ನೀಡಬೇಕು.
ಇದನ್ನೂ ಓದಿ..Leo Astrology: ಸಿಂಹ ರಾಶಿಯವರು ಯುಗಾದಿ ನಂತರ ಈ 5 ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು
ಧನುರ್ ರಾಶಿಯವರಿಗೆ ಮಕ್ಕಳ ನಿರೀಕ್ಷೆಯಲ್ಲಿ ಇರುವರಿಗೆ ಸಂತಾನ ಫಲ ಲಭಿಸುತ್ತದೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ದರ್ಶನ ಮಾಡಬೇಕು ಹಾಗೂ ಅನ್ನದಾನಕ್ಕೆ ದೇಣಿಗೆಯನ್ನು ನೀಡಬೇಕು ಹಾಗೆಯೇ ಮಕರ ರಾಶಿಯವರಿಗೆ ಹೊಸ ಬಿಸ್ನೆಸ್ ವಾಹನ ಖರೀದಿ ಮಾಡಲು ಸುವರ್ಣಾವಕಾಶವಾಗಿದೆ ಮನೆ ಕಟ್ಟಲು ಹಾಗೂ ಭೂಮಿ ಖರೀದಿ ಮಾಡಲು ಸಹ ಸುವರ್ಣಾವಕಾಶವಾಗಿದೆ ಹೊರನಾಡು ಅನ್ನಪೂರ್ಣೇಶ್ವರಿಯ ದರ್ಶನ ಮಾಡಬೇಕು
ಹಾಗೆಯೇ ಕುಂಭ ರಾಶಿಯವರಿಗೆ ಸಾಧಿಸುವ ಛಲ ಇದೆ ಆದರೆ ಇನ್ವೆಸ್ಟ್ಮೆಂಟ್ ಮಾಡಬಾರದು ಸಮಯ ಸರಿಯಾಗಿ ಇಲ್ಲ ಹಾಗಾಗಿ ಗೋಕರ್ಣ ದೇವಸ್ಥಾನಕ್ಕೆ ಭೇಟಿ ನೀಡಬೇಕು ಅನ್ನದಾನಕ್ಕೆ ದೇಣಿಗೆ ನೀಡಬೇಕು ಮೀನ ರಾಶಿಯವರಿಗೆ ಮುಟ್ಟಿದ್ದೆಲ್ಲ ಬಂಗಾರ ಎನ್ನುವ ಹಾಗೆ ಇರುತ್ತದೆ ಶುಭ ಸಮಾರಂಭ ನಡೆಯುತ್ತದೆ ಮನೆ ಕಟ್ಟಲು ಹಾಗೂ ಭೂಮಿ ಖರೀದಿ ಮಾಡಲು ಒಳ್ಳೆಯ ಸಮಯವಾಗಿದೆ ಶನಿ ಮಹಾತ್ಮ ಕೊಟ್ಟರೆ ಭಿಕ್ಷುಕನನ್ನು ರಾಜನಾಗಿ ಮಾಡುತ್ತಾನೆ ಆದರೆ ಕಿತ್ತುಕೊಂಡರೆ ರಾಜನನ್ನು ಸಹ ಭಿಕ್ಷುಕನ ಸ್ಥಿತಿಗೆ ತಂದು ಬಿಡುತ್ತಾನೆ
ಮೀನ ರಾಶಿಯವರು ಮಂತ್ರಾಲಯದ ರಾಯರ ದರ್ಶನ ಮಾಡಬೇಕು ಸಾಧ್ಯವಾದಷ್ಟು ಅನ್ನದಾನಕ್ಕೆ ದೇಣಿಗೆಯನ್ನು ನೀಡಬೇಕು ಹೀಗೆ ಯುಗಾದಿಯ ಫಲಗಳು ಪ್ರತಿಯೊಂದು ರಾಶಿಯಲ್ಲಿ ಭಿನ್ನಭಿನ್ನವಾಗಿರುತ್ತದೆ ಕೆಲವು ರಾಶಿಯವರಿಗೆ ರಾಜಯೋಗ ಹಾಗೂ ಮಿಶ್ರ ಫಲ ಹಾಗೂ ಅಶುಭ ಫಲಗಳು ಕೂಡಿ ಇರುತ್ತದೆ.