ಮಕರ ರಾಶಿ (Capricorn) ವ್ಯಕ್ತಿಗಳ ರಹಸ್ಯಗಳನ್ನು ಮತ್ತು ಅವರ ಗುಣ ಸ್ವಭಾವಗಳನ್ನು ತಿಳಿಸಿಕೊಡುತ್ತೇನೆ ಹಾಗೆ ಮಕರ ರಾಶಿಯವರಿಗೆ (Capricorn) ಅದೃಷ್ಟ ಖ್ಯಾತಿ ಬರಬೇಕು ಎಂದರೆ ಏನು ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಮಕರ ರಾಶಿ (Capricorn) ರಾಶಿ ಚಕ್ರದಲ್ಲಿ ಹತ್ತನೇ ರಾಶಿ ಕಾಲಪುರುಷನ ಮೊಣಕಾಲನ್ನು ಸೂಚಿಸುತ್ತದೆ ಸ್ತ್ರೀ ರಾಶಿ, ಚರ ರಾಶಿ, ಪೃಥ್ವಿ ತತ್ವ ರಾಶಿ, ರಾಶಿ ಅಧಿಪತಿ ಕರ್ಮಕಾರಕ ಶನಿಗ್ರಹ (Shani) ಉತ್ತರಷಾಡ ನಕ್ಷತ್ರ ಎರಡು ಮೂರು ನಾಲ್ಕನೇ ಪಾದದವರು ಮತ್ತು ಶ್ರವಣ ನಕ್ಷತ್ರ 4 ಪಾದದವರು ಹಾಗೂ ಧನಿಷ್ಠ ನಕ್ಷತ್ರದ ಒಂದು ಎರಡನೇ ಪಾದದಲ್ಲಿ ಜನಿಸಿದವರು ಮಕರ ರಾಶಿಗೆ (Capricorn) ಸೇರುತ್ತಾರೆ
ಇವರ ರಾಶಿಯ ಚಿನ್ಹೆ ಕೊಂಬಿನ ಮೇಕೆ ಈ ಪ್ರಾಣಿಯ ಸ್ವಭಾವದಂತೆ ಯಾವುದೇ ಒಂದು ವಿಷಯ ಕೆಲಸ ಹಿಡಿದರು ಎಂದರೆ ಅದನ್ನು ಮುಗಿಸುವವರೆಗೂ ಜಪ್ಪಯ್ಯ ಎಂದರು ಬಿಡುವವರಲ್ಲ, ಈ ಮಕರ ರಾಶಿಯವರು ಮಕರ ರಾಶಿಯವರ ಅಧಿಪತಿ ಶನಿ ಗ್ರಹ (Shani) ಕರ್ಮಕಾರಕ ದಂಡನಾಯಕ ಈ ರಾಶಿಯವರು ಉತ್ತಮ ಆದರ್ಶ ಹೊಂದಿದ್ದರು ಕೊನೆಯಲ್ಲಿ ನಿರಾಶೆ ಹೊಂದುತ್ತಾರೆ ಈ ರಾಶಿಯಲ್ಲಿ ಜನಿಸಿದವರು ಉದ್ದ ಶರೀರದವರು ಕೆಲವರು ಮಧ್ಯಮ ಎತ್ತರದವರಾಗಿರುತ್ತಾರೆ
ಬಿಳಿ ಬಣ್ಣದವರು (White Color) ಸುಂದರ ಕಣ್ಣುಗಳುಳ್ಳವರು ಹೇ ವಾಭಿಲಾಷಿಗಳು ಸದೃಢವಾದ ಶರೀರ ಮತ್ತು ನಿಧಾನವಾದ ನಡಿಗೆಯವರಾಗಿರುತ್ತಾರೆ ಶನಿ (Shani) ವೈರಾಗ್ಯ ಉಂಟುಮಾಡುವ ಗ್ರಹ ಕೆಲವೊಂದು ಹಂತದಲ್ಲಿ ಈ ರಾಶಿಯವರು ಆಧ್ಯಾತ್ಮಿಕದ (Spiritual) ಜೀವನದೇಡೆಗೆ ಸಾಗಿಬಿಡುತ್ತಾರೆ ಇವರು ಧೈರ್ಯಶಾಲಿಗಳು (Brave) ತ್ಯಾಗಿಗಳು ಗೃಹಸ್ಥ ಜೀವನದಲ್ಲಿ ಸಫಲತೆ ಹೊಂದುತ್ತಾರೆ
ಇದನ್ನೂ ಓದಿ..Scorpio Astrology: ವೃಶ್ಚಿಕ ರಾಶಿಯವರಿಗೆ ಯುಗಾದಿ ನಂತರ ಕಷ್ಟಗಳು, ಮಂಜಿನಂತೆ ಕರಗುತ್ತಾ? ಯಾಕೆಂದರೆ..
ಸಂಸಾರದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡು ಕೊನೆಯಲ್ಲಿ ಯಶಸ್ಸನ್ನು ಕಾಣುವವರು ಮಕರ ರಾಶಿ ಎಂದರೆ ಶ್ರಮಪಡುವ ರಾಶಿ ಎಂತಲೂ ಕರೆಯುತ್ತಾರೆ ಪಕ್ಕ ಪ್ರಾಕ್ಟಿಕಲ್ (Practical) ಪರ್ಸನ್ ಮಾತು ಮತ್ತು ವ್ಯವಹಾರದಲ್ಲಿ (Business) ಕಟ್ಟುನಿಟ್ಟು ಆದರೆ ಒಬ್ಬರು ಇವರಿಗೆ ಇಷ್ಟವಾದರೂ ಎಂದರೆ ಎಷ್ಟೇ ಕಷ್ಟವಾದರೂ ಆ ವ್ಯಕ್ತಿಯ ಜೊತೆ ಕೊನೆಯವರೆಗೂ ನಿಲ್ಲುತ್ತಾರೆ
ಮಕರ ರಾಶಿಯವರು ಭಾವಜೀವಿಗಳು ಏಕಾಂತದಲ್ಲಿ ಸಿಲುಕಿದವರಾಗುತ್ತಾರೆ ವಿಚಾರಶೀಲರು ಆದರ್ಶ ಗುಣವುಳ್ಳವರು ಹಟಸ್ವಭಾವದವರು ಕೋಪ ಬರುವುದಿಲ್ಲ ಕಡಿಮೆ ಆದರೂ ಏನಾದರೂ ಬಂದರೆ ನಿಯಂತ್ರಣ ಮಾಡುವುದು ಕಷ್ಟ ಇವರ ಜಾತಕದಲ್ಲಿ ಬುಧ ಮತ್ತು ಶುಕ್ರಾಧಿಗಳು ಶುಭವಾಗಿ ಇದ್ದರೆ ಕ್ರೀಡೆ ಮತ್ತು ಕಲೆಯಲ್ಲಿ ಅದ್ಭುತ ಸಾಧನೆ ಮಾಡುತ್ತಾರೆ ವ್ಯಾಪಾರ ಮತ್ತು ಉದ್ಯಮಿ ಸ್ಥಾಪಿಸಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ ಕೀರ್ತಿ ಗೌರವ ಇವರನ್ನು ಹುಡುಕಿಕೊಂಡು ಬರುತ್ತದೆ.
ಇದನ್ನೂ ಓದಿ..ಮಿಥುನ ರಾಶಿಯವರಿಗೆ ಗುರು ಹಾಗೂ ಶನಿಬಲ ಇರುವುದರಿಂದ ಏಪ್ರಿಲ್ ತಿಂಗಳಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ..
ನಿಮ್ಮ ಕುಟುಂಬದಲ್ಲಿ ಮತ್ತು ನಿಮ್ಮ ಸ್ನೇಹಿತರಲ್ಲಿ ಗಮನಿಸಿ ಮಕರ ರಾಶಿಯವರು ಹೆಚ್ಚಿನದಾಗಿ ರೈಲ್ವೆ ವಾಯು ಯಾನ ನೌಕಯಾನ ಕ್ಷೇತ್ರ ದಲ್ಲಿ ಇರುತ್ತಾರೆ ಹಾಗೆಯೇ ಗೃಹ ನಿರ್ಮಾಣ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಸೇವಾ ವೃತ್ತಿಯಲ್ಲಿ ಕಂಪ್ಯೂಟರ್ ಕ್ಷೇತ್ರಗಳಲ್ಲಿ ಹಾಗೆ ಸ್ವಂತ ಉದ್ಯೋಗ ಮಾಡುವವರು ಹೆಚ್ಚಾಗಿ ಇರುತ್ತಾರೆ ಮಕರ ರಾಶಿಯವರು ವಿನೋದ ಸ್ವಭಾವದವರು ಆಡಂಬರ ಉಳ್ಳವರು ಸಂಗೀತ ಮತ್ತು ನೃತ್ಯ ಪ್ರೇಮಿಗಳು ಸಾಹಿತ್ಯಪ್ರಿಯರು ಉತ್ತಮ ಆರ್ಥಿಕ ಸ್ಥಿತಿ ಉಳ್ಳವರು ಆಗಿರುತ್ತಾರೆ ಇವರು ತುಂಬಾ ಬುದ್ಧಿವಂತರು ಹಾಗೆ ಅದನ್ನು ಸಮರ್ಪಿಸುವವರು ಆಗಿರುತ್ತಾರೆ ತಂದೆ ಹಾಗೂ ಇತರ ಕೆಲವು ವ್ಯಕ್ತಿಗಳಿಗೆ ಕೆಲವೊಂದು ವಿಷಯಗಳಲ್ಲಿ ಭಿನ್ನಾಭಿಪ್ರಾಯವನ್ನು ಹೊಂದಿರುತ್ತಾರೆ