Gemini Horoscope: 2023ರ ಏಪ್ರಿಲ್ (April) ತಿಂಗಳ ಮಿಥುನ ರಾಶಿಯ ಮಾಸವು ಎಷ್ಟು ಲಾಭದಾಯಕವಾಗಿದೆ ಎಂದು ತಿಳಿಯೋಣ ಬನ್ನಿ. ಸಣ್ಣ ಸಣ್ಣ ಬದಲಾವಣೆಗಳು ಕೂಡಿಕೊಂಡು ದೊಡ್ಡದೊಂದು ಬದಲಾವಣೆಯು ಈ ತಿಂಗಳಲ್ಲಿ ನಿಮ್ಮ ಜೀವನದಲ್ಲಿ ನಡೆಯಲಿದೆ. ಜನವರಿಯಿಂದ ನಿಮ್ಮ ಗ್ರಹಗತಿಗಳಲ್ಲಿ ಸಣ್ಣ ಸಣ್ಣ ಬದಲಾವಣೆಗಳು ನಡೆಯುತ್ತಲೆ ಇದ್ದು, ಉತ್ತಮ ಪ್ರಗತಿಯ ಕಡೆ ನೀವು ಮುಖ ಮಾಡಿದ್ದಿರಿ. ಉದ್ಯೋಗದಲ್ಲಿ ಈಗಾಗಲೇ ನೀವು ಮೇಲು ಸ್ಥರಕ್ಕೆ ಏರಿದ್ದಿರಿ. ಇನ್ನು ಏನೇನು ಒಳ್ಳೆಯದಾಗಲಿದೆ ಎನ್ನುವುದನ್ನು ಮುಂದೆ ನೋಡಿ.
ಮಿಥುನ ರಾಶಿಯವರ (Gemini) ಗುರುವು ಹನ್ನೊಂದನೆಯ ಮನೆಯನ್ನು ಈ ತಿಂಗಳಲ್ಲಿ ಪ್ರವೇಶಿಸುತ್ತಾನೆ. ಇದು ಬಹಳ ಶುಭಕರವಾಗಿದೆ. ಏಪ್ರಿಲ್ (April Month) ತಿಂಗಳ 21ರಂದು ಗುರುವಿನ ಸ್ಥಾನ ಬದಲಾಗಲಿದ್ದು, ಇಲ್ಲಿಂದ ಒಂದು ವರ್ಷಗಳ ಕಾಲ ಗುರುವು ನಿಮ್ಮ ರಾಶಿಗೆ ಒಳ್ಳೆಯದನ್ನು ಮಾಡಲಿದ್ದಾನೆ. 6ನೇ ತಾರೀಕಿನಂದು ಶುಕ್ರನು (Shukra) ಹನ್ನೆರಡನೆಯ ಮನೆಗೆ ಬರಲಿದ್ದು, ಮೇಷ (Aries) ರಾಶಿಯಿಂದ ವೃಷಭ (Taurus) ರಾಶಿಗೆ ಬರುವ ಶುಕ್ರನಿಂದಾಗಿ ಬಹಳಷ್ಟು ಶುಭ ಫಲಗಳು ನಿಮಗೆ ಸಿಗಲಿದೆ.
ಈ ತಿಂಗಳಲ್ಲಿ ಪರಮೋಚ್ಚ ಸ್ಥಾನಕ್ಕೆ ಬರುವಂತಹ ಸೂರ್ಯನು ಲಾಭಸ್ಥಾನವನ್ನು ಅಲಂಕರಿಸಲಿದ್ದಾನೆ. ಹನ್ನೊಂದನೆಯ ಮನೆಯಲ್ಲಿ ಇರುವಂತಹ ಬುಧ ಹಾಗೂ ಮಿಥುನ (Gemini) ರಾಶಿಯಲ್ಲಿ ಇರುವಂತಹ ಕುಜನು ಪರಿವರ್ತನಾ ಯೋಗವನ್ನು ಹೊಂದಿದ್ದು ಇದು ಸಹ ಶುಭವೆ ಆಗಿದೆ. ಇದೆಲ್ಲವು ಸೇರಿ ಈ ತಿಂಗಳು ಮಿಥುನ ರಾಶಿಯಲ್ಲಿ ಯಾವುದೆ ಅಶುಭ ಕೆಲಸಗಳು ಸಹ ನಡೆಯದಂತೆ ನೋಡುತ್ತವೆ. ರಾಹು ಜೊತೆಯಲ್ಲಿ ಗುರುವು ಇರುವುದರಿಂದ ಈ ರಾಶಿಯವರು ಅವರ ಗುರುಗಳನ್ನು ಬಹಳಷ್ಟು ಗೌರವಿಸಿ.
ಗುರು ಶಾಪಗಳು ಬೀಳದಂತೆ ಎಚ್ಚರ ವಹಿಸುವ ಅಗತ್ಯವು ಮಿಥುನ ರಾಶಿಯ ಜನರಿಗಿದೆ. ಅಷ್ಟಮ ಶನಿಯ (Shani) ಕಾಟವು ತಪ್ಪಿದ್ದು, ಈಗ ಶನಿಯು ಒಂಬತ್ತನೇ ಮನೆಯನ್ನು ಪ್ರವೇಶಿಸಿದ್ದಾನೆ. ಇದು ಭಾಗ್ಯ ಸ್ಥಾನವಾಗಿದ್ದು, ಶನಿಯಿಂದ ಎಲ್ಲ ಕೆಲಸಗಳು ಉತ್ತಮವಾಗಿ ನಡೆಯಲಿವೆ. ಉದ್ಯೋಗದಲ್ಲಿ ವಿದೇಶ ಪ್ರಯಾಣದಂತಹ ಉತ್ತಮ ಸಮಯಗಳು ಮಿಥುನ ರಾಶಿಯವರಿಗೆ ದೊರೆಯಲಿದೆ. ಆರೋಗ್ಯವು ಸಹ ಸುಧಾರಿಸಲಿದೆ. ಗುರುವು (Guru)ಹಣಕ್ಕೆ ಅಧಿಪತಿಯಾಗಿರುವುದರಿಂದ ಹಣಕಾಸಿನ ನೆರವು ಎಲ್ಲ ಕಡೆಯಿಂದ ಒದಗಿ ಬರಲಿದೆ.
ಗುರು ಬಲ ಹಾಗೂ ಶನಿಯ ಭಾಗ್ಯದಿಂದ ಸಂತಾನ ಯೋಗವು ಬರಲಿದ್ದು, ಸಂತಾನದಲ್ಲಿ ಸಮಾಧಾನವಿಲ್ಲದಿದ್ದಲ್ಲಿ ಈ ಸಮಯದಲ್ಲಿ ಪ್ರಯತ್ನಿಸಬಹುದು. ಏಕಾದಶದಲ್ಲಿ ಸೂರ್ಯ, ಗುರು, ರಾಹು ಹಾಗೂ ಬುಧ ಗ್ರಹಗಳು ಕೂಡಿರುವುದರಿಂದ ಈ ರಾಶಿಯವರ ಮನೆಯಲ್ಲಿ ಭಾಗ್ಯದ ಹೊಳೆಯೆ ಹರಿಯುತ್ತದೆ. ಪೂರ್ವಜರ ಆಶೀರ್ವಾದವು ದೊರೆಯಲಿದ್ದು ತೀರ್ಥಕ್ಷೇತ್ರಗಳ ದರ್ಶನ ಭಾಗ್ಯವು ಲಭಿಸಲಿದೆ. ತಂದೆ-ತಾಯಿಗಳ ಆಸ್ತಿಯಲ್ಲಿ ಪಾಲು ಬರುವುದಿದ್ದರೆ, ಅದರ ಸಂಬಂಧ ಕೋರ್ಟು ಕಚೇರಿಗಳಿಗೆ ಅಲೆದಾಡುತ್ತಿದ್ದರೆ ಈ ಸಮಯದಲ್ಲಿ ಅವೆಲ್ಲ ಮುಗಿದು ಮಿಥುನ ರಾಶಿಯವರಿಗೆ ಜಯವಾಗಲಿದೆ.
ಇದನ್ನೂ ಓದಿ..ವೃಶ್ಚಿಕ ರಾಶಿಯವರಿಗೆ ಯುಗಾದಿ ನಂತರ ಕಷ್ಟಗಳು, ಮಂಜಿನಂತೆ ಕರಗುತ್ತಾ? ಯಾಕೆಂದರೆ..
ಬ್ಯಾಂಕಿಂಗ್ ಎಗ್ಸಾಮ್’ಗಳನ್ನು (Banking Exam) ಬರೆಯುತ್ತಿರುವವರಿಗೆ, ಸಿಎ ಎಗ್ಸಾಮ್ ತೆಗೆದುಕೊಂಡವರಿಗೆ ಇದು ಶುಭ ಸಮಯವಾಗಿದೆ. ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ನಿರೀಕ್ಷಿಸಬಹುದು. ಈ ರಾಶಿಯವರು ತಮ್ಮವರ ನಂಬಿಕೆಯನ್ನು ಉಳಿಸಿಕೊಳ್ಳುವ ಅಗತ್ಯವಿದೆ. ನಿಮ್ಮನ್ನು ನಂಬಿಕೊಂಡವರನ್ನು ಎಂದಿಗೂ ಕೈ ಬಿಡಬೇಡಿ. ನಿಮ್ಮ ಕಷ್ಟ ಸಮಯದಲ್ಲಿ ಜೊತೆಗಿರುವವರನ್ನು ಎಂದಿಗೂ ನೆನಪಿಸಿಕೊಳ್ಳಿ. ಹೊಸ ಕೆಲಸಗಳಲ್ಲಿ ಜಾಗ್ರತಿಯ ಅಗತ್ಯವಿದೆ. ಉಳಿದಂತೆ ಎಲ್ಲವು ಶುಭವಾಗುತ್ತದೆ.