ರಾಗಿ ತಿಂದವನು ನಿರೋಗಿ ಅನ್ನೋ ಮಾತು ಹಿಂದಿನಿಂದಲೂ ಬಂದಿದೆ ಯಾಕೆಂದರೆ ರಾಗಿಯಲ್ಲಿ ಅಷ್ಟೊಂದು ಆರೋಗ್ಯಕಾರಿ ಅಂಶಗಳನ್ನು ಕಾಣಬಹುದಾಗಿದೆ. ಹತ್ತಾರು ರೋಗಗಳನ್ನು ನಿಯಂತ್ರಿಸುವ ಶಕ್ತಿ ರಾಗಿಯಲ್ಲಿದೆ. ರಾಗಿಯಿಂದ ಹಲವು ಬಗೆಯ ಅಡುಗೆಗಳನ್ನು ಮಾಡಿ ಸೇವನೆ ಮಾಡಲಾಗುತ್ತದೆ.
ಇನ್ನು ಕೆಲವರು ದಿನ ನಿತ್ಯ ರಾಗಿಯನ್ನು ಅಡುಗೆಗೆ ಬಳಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.
ಈ ಮೂಲಕ ರಾಗಿಯಿಂದ ಶರೀರಕ್ಕೆ ಏನೆಲ್ಲಾ ಲಾಭವಿದೆ ಅನ್ನೋದನ್ನ ತಿಳಿಯೋಣ. ಮೊದಲನೆಯದಾಗಿ ರಾಗಿಯಿಂದ ಯಾವೆಲ್ಲ ಆಹಾರ ತಯಾರಿಸಲಾಗುತ್ತದೆ ಅನ್ನೋದನ್ನ ನೋಡುವುದಾದರೆ ರಾಗಿಮುದ್ದೆ, ರಾಗಿರೊಟ್ಟಿ, ರಾಗಿ ದೋಸೆ, ಹೀಗೆ ಹಲವು ಆಹಾರಗಳನ್ನು ತಯಾರಿಸಿ ಸೇವನೆ ಮಾಡಲಾಗುತ್ತದೆ.
ರಾಗಿ ಸೇವನೆಯಿಂದ ದೇಹಕ್ಕೆ ರಿಲ್ಯಾಕ್ಸ್ ಮೂಡುತ್ತದೆ ಹಾಗು ದೇಹದಲ್ಲಿ ಅನಗತ್ಯ ಬೊಜ್ಜು ಬೆಳೆಯುವುದಿಲ್ಲ ಶರೀರವನ್ನು ಬಲವಾಗಿ ರೂಪಿಸುತ್ತದೆ ಇನ್ನು ಇದರಲ್ಲಿ ಕ್ಯಾಲ್ಶಿಯಂ ಪ್ರೊಟೀನ್ ಇರೋದ್ರಿಂದ ದೇಹಕ್ಕೆ ಉತ್ತಮ ಅರೋಗ್ಯ ಪೂರೈಕೆ ಆಗುತ್ತದೆ. ವೈದ್ಯರೇ ಹೇಳುವ ಪ್ರಕಾರ ರೋಗಿಗಳಿಗೆ ರಾಗಿ ಅಂಬಲಿ ಗಂಜಿ ಮಾಡಿ ಕೊಡೋದು ಕೂಡ ಅರೋಗ್ಯ ಸುಧಾರಿಸಿಕೊಳ್ಳಬಹುದು. ರಕ್ತ ಹೀನತೆ ಸಮಸ್ಯೆ ಕಾಡೋದಿಲ್ಲ ಹಾಗು ಗರ್ಭಿಣಿಯರಿಗೆ ಉತ್ತಮ ಆಹಾರ ಕೂಡ ಇದಾಗಿದೆ. ಸಕ್ಕರೆಕಾಯಿಲೆ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳು ಕಾಡೋದಿಲ್ಲ. ಒಟ್ಟಾರೆಯಾಗಿ ರಾಗಿಯಿಂದ ಶರೀರಕ್ಕೆ ಉತ್ತಮ ಲಾಭವಿದೆ ಅನ್ನೋದನ್ನ ಹೇಳಲಾಗುತ್ತದೆ.