ಸಮಾನ್ಯವಾಗಿ ಬಹುತೇಕ ಜನರ ಮನೆಗಳಲ್ಲಿ ಒಂದಲ್ಲ ಒಂದು ದಿನ ರಾತ್ರಿ ಅನ್ನ ಉಳಿದಿರುತ್ತದೆ, ಅದನ್ನು ವ್ಯರ್ಥ ಮಾಡುವ ಬದಲು ಅದರಿಂದ ಮತ್ತೊಂದು ಸ್ವೀಟ್ ಮಾಡಿ ತಿನ್ನುವುದು ಕೂಡ ಒಳ್ಳೆಯ ಉಪಾಯವಾಗಿದೆ. ಹಾಗಾದ್ರೆ ಬನ್ನಿ ರಾತ್ರಿ ಉಳಿದ ಅನ್ನದಿಂದ ರಸಗುಲ್ಲಾ ಸ್ವೀಟ್ ಹೇಗೆ ತಯಾರಿಸೋದು ಅಂತ ಒಮ್ಮೆ ನೋಡಣ.
ರಾತ್ರಿ ಉಳಿದ ಅನ್ನದಿಂದ ರಸಗುಲ್ಲಾ ಸ್ವೀಟ್ ಹೇಗೆ ತಯಾರಿಸೋದು ಅನ್ನೋದನ್ನ ನೋಡುವುದಾದರೆ, ಇದಕ್ಕೆ ಬೇಕಾಗುವ ಸಾಮಗ್ರಿಗಳು ಮೊದಲನೆಯಾಗಿ ಅರ್ಧ ಬೊಲ್ ಅನ್ನ ಇದನ್ನು ಮಿಕ್ಷಿಯಲ್ಲಿ ಹಾಕಿ ನೀರು ಹಾಕದೆ ರುಬ್ಬಿಕೊಳ್ಳಿ ನಂತರ ಒಂದು ಪಾತ್ರೆಗೆ ಹಾಕಿ ಅದಕ್ಕೆ 2 ಟೇಬಲ್ ಚಮಚ ಮೈದಾ ಹಿಟ್ಟು ಹಾಗೂ 2 ಟೇಬಲ್ ಚಮಚ ಕಾರ್ನ್ ಪ್ಲೋರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಚನ್ನಾಗಿ ಮಿಕ್ಸ್ ಆದ ನಂತರ ಅನ್ನು ಉಂಡೆಯ ರೀತಿಯಲ್ಲಿ ಮಾಡಿಕೊಳ್ಳಿ.
ಎರಡನೆಯದಾಗಿ ಪಾಕವನ್ನು ರೆಡಿ ಮಾಡಿಕೊಳ್ಳಬೇಕು ಹೇಗೆ ಅಂದ್ರೆ ಒಂದು ಪಾತ್ರೆಯನ್ನು ತಗೆದುಕೊಂಡು ಅದಕ್ಕೆ1 ಕಪ್ ಸಕ್ಕರೆ ಮತ್ತು 1 ಕಪ್ ನೀರನ್ನು ಹಾಕಿ ಚೆನ್ನಾಗಿ ಕುದಿಸಿ ಅದಕ್ಕೆ ನಿಂಬೆ ರಸ ಮತ್ತು ಏಲಕ್ಕಿ ಪುಡಿ ಹಾಕಿ ಪಾಕ ತಯಾರಿಸಿಕೊಳ್ಳಿ, ಪಾಕ ರೆಡಿಯಾದ ಮೇಲೆ ಉಂಡೆಗಳನ್ನು ಅದರಲ್ಲಿ ಹಾಕಿ ಸ್ವಲ್ಪ ಸಮಯದ ನಂತರ ಉಂಡೆಗಳು ಚನ್ನಾಗಿ ಪಾಕದಲ್ಲಿ ನೆನೆದ ಬಳಿಕ ಅವುಗಳನ್ನು ಸ್ಪೂನ್ ನಿಂದ ಹೊರಗೆ ತಗೆದು ತಿನ್ನಿ.