Taurus astrology on life time: ಪ್ರತಿಯೊಬ್ಬರೂ ಸಹ ಒಂದೇ ತರನಾಗಿ ಇರುವುದು ಇಲ್ಲ ಪ್ರತಿಯೊಂದು ರಾಶಿಯವರ ಗುಣ ಸ್ವಭಾವದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಹನ್ನೆರಡು ರಾಶಿಗಳಲ್ಲಿ ಎರಡನೆಯ ರಾಶಿ ವೃಷಭ (Taurus) ರಾಶಿಯಾಗಿದೆ ಈ ರಾಶಿಯ ಅಧಿಪತಿ ಶುಕ್ರ ಹಾಗೆಯೇ ಇವರು ವೈಯಕ್ತಿಕ ಸಂಬಂಧದಲ್ಲಿ ಪ್ರಾಮಾಣಿಕತೆಯನ್ನು ಬಯಸುವ ಸಭ್ಯ ವ್ಯಕ್ತಿಗಳಾಗಿರುತ್ತಾರೆ ಹಾಗೆಯೇ ಮಾಡುವ ಕೆಲಸದಲ್ಲಿ ಕಠಿಣ ಪರಿಶ್ರಮ ಹಾಕುತ್ತಾರೆ
ಹಾಗೆಯೇ ತಾಳ್ಮೆ ಮತ್ತು ಗುರಿಯಿಂದಾಗಿ ಮಾಡುವ ಉದ್ಯೋಗದಲ್ಲಿ ಸೂಕ್ತ ಆಸಕ್ತಿ ಹಾಗೂ ಕೆಲಸ ಕಾರ್ಯದಲ್ಲಿ ತಲ್ಲೀನರಾಗಿ ಇರುತ್ತಾರೆ . ಸ್ಥಿರವಾದ ಉದ್ಯೋಗ ವ್ಯಾಪಾರ ವ್ಯವಹಾರದಲ್ಲಿ ತೊಡಗಿರುತ್ತಾರೆ ಹಾಗೆಯೇ ಕೆಲವೊಮ್ಮೆ ಮೇಲ್ನೋಟಕ್ಕೆ ಶಾಂತ ರೀತಿಯ ಪ್ರವೃತ್ತಿ ಹೊಂದಿರುವಂತೆ ಕಂಡುಬಂದರೂ ಆಂತರಿಕವಾಗಿ ಒಂದಿಷ್ಟು ಕೋಪ ಹಾಗೂ ಗೊಂದಲವನ್ನು ಹೊಂದಿರುತ್ತಾರೆ
ವೃಷಭ ರಾಶಿಯವರ ಭಾಗ್ಯಕಾರಕ ಗ್ರಹ ಶನಿ ಗ್ರಹವಾಗಿದೆ ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ ನಾವು ಈ ಲೇಖನದ ಮೂಲಕ ಹನ್ನೆರಡು ರಾಶಿಗಳಲ್ಲಿ ಎರಡನೆಯ ರಾಶಿಯಾದ ವೃಷಭ ರಾಶಿಯವರ ಕೆಲವು ರಹಸ್ಯ ಸಂಗತಿಗಳ ಬಗ್ಗೆ ತಿಳಿದುಕೊಳ್ಳೋಣ.
ವೃಷಭ ರಾಶಿ ರಾಶಿ ಚಕ್ರದ ಎರಡನೆಯ ರಾಶಿಯಾಗಿದೆ ಸ್ತ್ರೀ ರಾಶಿ ಹಾಗೂ ಸ್ಥಿರ ರಾಶಿಯಾಗಿದೆ ಈ ರಾಶಿಗೆ ಅಧಿಪತಿ ಶುಕ್ರ ಗ್ರಹ ಕೃತಿಕಾ ನಕ್ಷತ್ರ ಎರಡು ಮೂರು ಹಾಗೂ ನಾಲ್ಕನೇ ಪಾದ ಹಾಗೂ ರೋಹಿಣಿ ನಕ್ಷತ್ರ ಹಾಗೂ ಮೃಗಶಿರಾ ಒಂದು ಮತ್ತು ಎರಡನೇ ಪಾದದವರು ವೃಷಭ ರಾಶಿಗೆ ಸೇರುತ್ತಾರೆ ಈ ರಾಶಿಯವರು ಸಾಮಾನ್ಯವಾಗಿ ಎತ್ತರದವರು ಗುಂಗುರು ಕೂದಲು ಕೆಲವರಿಗೆ ನೇರ ಕೂದಲು ಇರುತ್ತದೆ ದುಂಡಾದ ಹಾಗೂ ಚೌಕಾಕಾರದ ಮುಖವನ್ನು ಹೊಂದಿರುತ್ತಾರೆ ಹಾಗೆಯೇ ಬಲಿಷ್ಟವಾದ ದೇಹ ಹಾಗೂ ಬಾಹುವನ್ನು ಹೊಂದಿರುತ್ತಾರೆ
ಬಿಳಿಯ ಬಣ್ಣ ಮತ್ತು ವೇಗವಾಗಿ ನಡೆಯುತ್ತಾರೆ ಹಾಗೆಯೇ ಈ ರಾಶಿಯವರು ಭೋಜನಾ ಪ್ರಿಯರು ಹಾಗೂ ಅಲಂಕಾರ ಪ್ರಿಯರು ಆಗಿರುತ್ತಾರೆ ತುಂಬಾ ಸುಂದರವಾದ ಕನಸ್ಸನ್ನು ಕಾಣುತ್ತಾರೆ ಈ ರಾಶಿಯ ಚಿನ್ಹೆ ಎತ್ತು ಅದು ಯಾರ ಸುದ್ದಿಗು ಹೋಗುವುದು ಇಲ್ಲ ಈ ರಾಶಿಯವರು ಕೆಲಸ ಕಾರ್ಯದಲ್ಲಿ ತಮ್ಮದೇ ಲೋಕದಲ್ಲಿ ಇರುತ್ತಾರೆ ಈ ರಾಶಿಯ ಅಧಿಪತಿ ಶುಕ್ರ ಗ್ರಹ ಹಾಗೂ ಸಕಲ ಕಲಾ ವಲ್ಲಭರಾಗಿ ಇರುತ್ತಾರೆ ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ ವೃಷಭ ರಾಶಿಯವರು ಸ್ವಂತ ವ್ಯಾಪಾರ ವ್ಯವಹಾರವನ್ನು ಮಾಡುತ್ತಾರೆ ಪ್ರಾಣಿ ಪಾಲನೆ ಹೋಟೆಲ್ ಉದ್ಯಮ ಹಾಗೂ ಇಂಜಿನಿಯರಿಂಗ್ ಉದ್ಯೋಗವನ್ನು ಮಾಡುತ್ತಾರೆ ಹಣ್ಣು ಹೂವಿನ ವ್ಯಾಪಾರ ಸುಗಂಧ ದ್ರವ್ಯದ ವ್ಯಾಪಾರ ಅಲಂಕಾರಿಕ ವಸ್ತುಗಳ ವ್ಯಾಪಾರ ವ್ಯವಹಾರ ಮಾಡುತ್ತಾರೆ.
ಜಾತಕದಲ್ಲಿ ಶನಿ ಬುಧ ಶುಕ್ರ ಬಲವಾಗಿ ಇದ್ದರೆ ಹಣಕಾಸಿನ ತೊಂದರೆ ಕಂಡು ಬರುವುದು ಇಲ್ಲ ಕಂಪ್ಯೂಟರ ಉದ್ಯೋಗ ಸರಕಾರಿ ಉದ್ಯೋಗ ಹಣಕಾಸಿನ ವ್ಯವಹಾರದಲ್ಲಿ ಇರುತ್ತಾರೆ ವೃಷಭ ರಾಶಿ ಸ್ಥಿರ ರಾಶಿಯಾಗಿದೆ ಆದಾಯ ಸ್ಥಿರವಾಗಿ ಇರುತ್ತದೆ ಸ್ಥಿರವಾದ ಉದ್ಯೋಗ ವ್ಯಾಪಾರ ವ್ಯವಹಾರದಲ್ಲಿ ತೊಡಗಿರುತ್ತಾರೆ ಇವರು ವಾಹನ ಪ್ರಿಯರು ಹಾಗೂ ಅನೇಕರು ವಾಹನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ
ಅನೇಕ ವಾಹನಗಳ ಒಡೆಯರು ಆಗಿರುತ್ತಾರೆ ಕೆಲವೊಂದು ಗೀತ ವಾದ್ಯಗಳಲ್ಲಿ ಪ್ರಿಯರಾಗಿ ಇರುತ್ತಾರೆ ತುಂಬಾ ಭಾವುಕರಾಗಿ ಇರುತ್ತಾರೆ ತುಂಬಾ ಮಹತ್ವಾಕಾಂಕ್ಷೆ ಹೊಂದಿರುವ ವ್ಯಕ್ತಿಗಳಾಗಿ ಇರುತ್ತಾರೆ. ಇವರು ತುಂಬಾ ಧೈರ್ಯವಂತರು ಆಗಿರುತ್ತಾರೆ ಆಕರ್ಷಕ ವ್ಯಕ್ತಿತ್ವ ಹೊಂದಿದ ಸಂಗಾತಿ ಸಿಗುತ್ತಾರೆ ಹೆಚ್ಚಿನ ಕೋಪ ಅನುಮಾನದಿಂದ ಪ್ರೀತಿ ಕೂಡಿರುತ್ತದೆ ವೈವಾಹಿಕ ಜೀವನ ಸುಮಧುರವಾಗಿ ಇರುತ್ತದೆ ವೃಷಭ ರಾಶಿಯವರು ಸದೃಢವಾದ ಶರೀರವನ್ನು ಹೊಂದಿರುತ್ತಾರೆ ಆರೋಗ್ಯ ಉತ್ತಮವಾಗಿ ಇರುತ್ತದೆ ವೃಷಭ ರಾಶಿಯವರು ಆದಷ್ಟು ಕೊಬ್ಬಿರುವ ಆಹಾರ ಪದಾರ್ಥವನ್ನು ಕಡಿಮೆ ಸೇವಿಸಬೇಕು ಇದರಿಂದ ದೀರ್ಘಾಯುಷ್ಯವನ್ನು ಹೊಂದಿರುತ್ತಾರೆ.
ವೃಷಭ ರಾಶಿಯವರಿಗೆ ಸ್ತ್ರೀಯರು ಹೆಚ್ಚಿನ ಶತ್ರುಗಳು ಇರುತ್ತಾರೆ ಮುಂಗೋಪ ಇವರ ಪರಮ ಶತ್ರು ಆಗಿದೆ ಇವರ ವೈಭವ ಜೀವನವನ್ನು ನೋಡಿ ಅನೇಕರು ಶೋಕಿ ಮಾಡುವರು ಎಂದು ಭಾವಿಸುತ್ತಾರೆತುಂಬಾ ಹೃದಯವಂತರು ಆಗಿರುತ್ತಾರೆ ಕುಟುಂಬವನ್ನು ಪ್ರೀತಿಸುವರು ಆಗಿರುತ್ತಾರೆ ವೃಷಭ ರಾಶಿಯವರ ಭಾಗ್ಯಕಾರಕ ಗ್ರಹ ಶನಿ ಗ್ರಹ ಶನಿಯ ಅಧಿದೇವತೆ ಶಿವನ ಆರಾಧನೆ ಮಾಡಬೇಕು ಹೀಗೆ ಮಾಡುವುದರಿಂದ ಹೆಚ್ಚಿನ ಫಲವನ್ನು ಪಡೆದುಕೊಳ್ಳಬಹುದು
ಧನಾಧಿಪತಿ ಹಾಗೂ ಪೂರ್ವ ಪುಣ್ಯಾಧಿಪತಿಯಾದ ಬುಧ ಗ್ರಹ ಪುಣ್ಯದ ಅಧಿಪತಿಯಾಗಿ ಇರುತ್ತಾನೆ ಶ್ರೀ ಕೃಷ್ಣನ ಆರಾಧನೆ ವಿಷ್ಣು ಸಹಸ್ರನಾಮದಿಂದ ಹೇಳಬೇಕು ಇದರಿಂದ ಸುಖ ಸಂತೋಷ ಧನ ಕನಕಗಳು ಪ್ರಾಪ್ತಿಯಾಗುತ್ತದೆ. ಪಚ್ಚೆ ಮತ್ತು ನೀಲ ಅದೃಷ್ಟ ರತ್ನಗಳಾಗಿದೆ ಪಚ್ಚೆಯನ್ನು ಬಲಗೈ ಕಿರುಬೆರಳಿಗೆ ಧರಿಸಬೇಕು ನೀಲವನ್ನು ಮಧ್ಯ ಬೆರಳಿಗೆ ಧರಿಸಬೇಕು ಇದರಿಂದ ಜೀವನದಲ್ಲಿ ಕೀರ್ತಿ ಯಶಸ್ಸು ಲಭಿಸುತ್ತದೆ ಶುಭ ಸಂಖ್ಯೆ ಐದು ಮತ್ತು ಆರು ಎಂಟು ಯಾಗಿದೆ ದಕ್ಷಿಣ ಹಾಗೂ ಪಶ್ಚಿಮ ಶುಭ ದಿಕ್ಕುಗಳಾಗಿದೆ ನೀಲಿ ಹಸಿರು ಶುಭ ಬಣ್ಣಗಳಾಗಿದೇ ಹೀಗೆ ವೃಷಭ ರಾಶಿಯವರು ಮಹತ್ವಾಕಾಂಕ್ಷಿಗಳಾಗಿ ಹಾಗೂ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಹಾಗೆಯೇ ಆದಾಯ ಸಹ ಸ್ಥಿರವಾಗಿ ಇರುತ್ತದೆ.