govt loan scheme: ಹಣಕಾಸಿನ ತೊಂದರೆಗಳನ್ನು ನಿವಾರಿಸಿಕೊಳ್ಳಲು ಅನೇಕ ಜನರು ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯುತ್ತಾರೆ ಏಕೆಂದರೆ ವಾಸ್ತವವಾಗಿ ಪ್ರತಿಯೊಬ್ಬರಿಗೂ ಹಣದ ಅವಶ್ಯಕತೆ ಇರುತ್ತದೆ ಹಾಗೇ NBFC. ಮತ್ತು ಇತರೆ ಕಂಪನಿಗಳು ಮತ್ತು ಬ್ಯಾಂಕುಗಳು ಸುಲಭವಾಗಿ ಸಾಲ ನೀಡುತ್ತಿವೆ ಇದರ ಜೊತೆಗೆ ಇತ್ತೀಚಿಗೆ ಕೇಂದ್ರ ಸರ್ಕಾರವು (Central Govt) ವಿಶೇಷ ಯೋಜನೆಯೊಂದನ್ನು ಜಾರಿಗೆ ತಂದಿದ್ದು ಕೇಂದ್ರ ಸರ್ಕಾರದ (Central Govt) ಈ ಯೋಜನೆಯ ಹೆಸರು (Mudra Scheme) ಮುದ್ರಾ ಯೋಜನೆ.
ಈ ಮೂಲಕ ಅರ್ಹ ಜನರಿಗೆ ಸುಲಭವಾಗಿ ಸಾಲದ ಪ್ರವೇಶವನ್ನು ಖಚಿತಪಡಿಸುತ್ತದೆ ಜನರು ಹೊಸ ವ್ಯವಹಾರವನ್ನ ಪ್ರಾರಂಭ ಮಾಡಲು ಅಥವಾ ಪ್ರಸ್ತುತ ವ್ಯವಹಾರವನ್ನು ವಿಸ್ತರಿಸಿಕೊಂಡು ಹೋಗಲು ಯೋಚಿಸಿದ್ದರೆ ಈ ಮುದ್ರಾ ಯೋಜನೆಯ ಅಡಿಯಲ್ಲಿ ಸಾಲವನ್ನು ಪಡೆಯಬಹುದಾಗಿದೆ.
ಅಂದ ಹಾಗೆ ಈ ಮುದ್ರಾ ಯೋಜನೆಗೆ ಸಂಬಂಧಿಸಿದಂತೆ ಸಾಲ ಪಡೆಯಲು ಜನರು 1,750 ಪಾವತಿಸಬೇಕು ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಈ ಸುದ್ದಿ ನಿಜವಲ್ಲ ಕೇಂದ್ರ ಸರ್ಕಾರದ ಪಿಐಬಿ ಫ್ಯಾಕ್ಟ್ ಚೆಕ್ ಈ ವಿಷಯದ ಬಗ್ಗೆ ಅಧ್ಯಯನ ನಡೆಸಿ ಇದು ಸುಳ್ಳು ಎಂದು ಬಹಿರಂಗಪಡಿಸಿದೆ ಮುದ್ರಾ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರವು ಯಾವುದೇ ರೀತಿಯ ಶುಲ್ಕವನ್ನು ವಿಧಿಸುವುದಿಲ್ಲ ಎಂಬುದಾಗಿ ಹಣಕಾಸು ಇಲಾಖೆ ಸ್ಪಷ್ಟನೆ ಯನ್ನು ಸಹ ನೀಡಿದೆ
ಕೇಂದ್ರ ಸರ್ಕಾರವು 2015ರಲ್ಲಿ ಮುದ್ರಾ ಯೋಜನೆಯನ್ನು ಜಾರಿಗೆ ತಂದಿದ್ದು ಇದರ ಭಾಗವಾಗಿ ಕಾರ್ಪೊರೇಟ್ ಮತ್ತು ಇತರ ಕೆಲಸಗಳಿಗೆ ಜನರು ಸುಲಭವಾಗಿ ಸಾಲವನ್ನು ಪಡೆಯಬಹುದು ಯಾವುದೇ ಅಡಮಾನ ಇಲ್ಲದೆ 10 ಲಕ್ಷ ರೂಗಳ ವರೆಗೆ ಸಾಲವನ್ನು ಈ ಮೂಲಕ ಪಡೆಯಬಹುದಾಗಿದೆ.
ಇನ್ನು ಮುದ್ರಾ ಯೋಜನೆಯ ಅಡಿಯಲ್ಲಿ ಮೂರು ವಿಭಾಗಗಳಲ್ಲಿ ಸಾಲಗಳು ಜನರಿಗೆ ಲಭ್ಯವಿದ್ದು ಶಿಶುವರ್ಗದ ಅಡಿಯಲ್ಲಿ 50,000 ರೂಗಳಷ್ಟು ಸಾಲ ಸಿಗುತ್ತದೆ ಅಂತೆಯೇ ಕಿಶೋರ್ ವರ್ಗದ ಅಡಿಯಲ್ಲಿ 5 ಲಕ್ಷದ ವರೆಗೆ ಸಾಲ ಪಡೆಯಬಹುದು ಮೂರನೆಯದಾಗಿ ತರುಣ್ ವರ್ಗದ ಅಡಿಯಲ್ಲಿ ಹತ್ತು ಲಕ್ಷದವರೆಗೆ ಸಾಲದ ದೊರೆಯುತ್ತದೆ ಜನರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಬೇಕಾದ ಸಾಲದ ಮೊತ್ತಕ್ಕೆ ಅರ್ಜಿ ಸಲ್ಲಿಸಬಹುದು
ಹೀಗೆ ಪಡೆದ ಸಾಲವನ್ನು 12 ತಿಂಗಳಿಂದ ಐದು ವರ್ಷಗಳ ಅವಧಿಯಲ್ಲಿ ಮರುಪಾವತಿ ಮಾಡಬಹುದು ಅಂದರೆ ನಿಮ್ಮ EMI ಅವಧಿ ಇರುತ್ತದೆ ಐದು ವರ್ಷದ ಒಳಗೆ ಪಾವತಿ ಮಾಡದಿದ್ದರೆ ಅಧಿಕಾರ ಅವಧಿಯನ್ನು ಮತ್ತಷ್ಟು ವಿಸ್ತರಿಸಬಹುದಾಗಿದೆ.
ಅಖಿಲ ಮಿತ್ರ ವೆಬ್ಸೈಟ್ ಗೆ ಹೋಗಿ ಈ ಸಾಲದ ಅರ್ಜಿ ಸಲ್ಲಿಸಬಹುದು ಇನ್ನು ಯಾವೆಲ್ಲ ಬ್ಯಾಂಕ್ಗಳಲ್ಲಿ ವರ್ಜಿ ಸಲ್ಲಿಸಬಹುದು ಎಂದರೆ ಸರ್ಕಾರಿ ಬ್ಯಾಂಕ್ ಖಾಸಗಿ ಬ್ಯಾಂಕ್ ಗ್ರಾಮೀಣ ಬ್ಯಾಂಕುಗಳು ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಹಣಕಾಸುರ ಕಂಪನಿಗಳಿಂದ ಈ ಯೋಜನೆಯ ಅಡಿಯಲ್ಲಿ ಸಾಲವನ್ನು ಪಡೆಯಬಹುದು.