Father’s house children to their names: ಹಳ್ಳಿಯಲ್ಲಿರುವ ಜಮೀನನ್ನು ಜಮೀನುದಾರ ತನ್ನ ಮಕ್ಕಳ ಹೆಸರಿಗೆ ವರ್ಗಾವಣೆ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಯಾವುದೇ ಒಂದು ಮನೆಯ ದಾಖಲೆ ಹಾಗೂ ಹಕ್ಕು ಪತ್ರ ಅಥವಾ ಮನೆಯ ನಕ್ಷೆ ಅಥವಾ ತೆರಿಗೆ ಕಟ್ಟಿದ ರಶೀದಿ ಇವುಗಳು ನಿಮ್ಮ ಮನೆಯಲ್ಲಿ ಇದ್ದೇ ಇರುತ್ತವೆ ಒಂದು ವೇಳೆ ಇಂತಹ ದಾಖಲೆಗಳು ನಿಮ್ಮ ಬಳಿ ಇಲ್ಲದೆ ಇದ್ದ ಪರಿಸ್ಥಿತಿಯಲ್ಲಿ ಪಂಚಾಯಿತಿಗೆ ಹೋಗಿ ಇದರ ನಕಲು ಪ್ರತಿಯನ್ನು ಪಡೆದುಕೊಳ್ಳಬೇಕು.
ತಂದೆಯು ತನ್ನ ಜಾಗವನ್ನು ಮಗನ ಹೆಸರಿನಲ್ಲಿ ವರ್ಗಾಯಿಸಲು ತೀರ್ಮಾನ ಮಾಡಿದಾಗ ಕೆಲವೊಂದು ಅವಶ್ಯಕ ದಾಖಲಾತಿಗಳನ್ನು ನೀಡಬೇಕಾಗುತ್ತದೆ ಮತ್ತು ನೋಂದಣಿಯನ್ನು ಮಾಡಿಕೊಳ್ಳಬೇಕಾಗುತ್ತದೆ ಕೊನೆಯದಾಗಿ ಇ-ಸ್ವತ್ತು ಸಹ ಮಾಡಿಸಬೇಕಾಗುತ್ತದೆ.
ಮೊದಲನೆಯದಾಗಿ ತಂದೆಯು ಮಗನ ಹೆಸರಿಗೆ ಆಸ್ತಿಯನ್ನು ವರ್ಗಾಯಿಸಲು ಅವಶ್ಯಕವಾಗಿ ಬೇಕಾಗುವ ದಾಖಲೆ ಎಂದರೆ ಹಕ್ಕು ಪತ್ರ ಅಂದರೆ ಅದು ಕ್ರಯಾ ಪತ್ರ ಆಗಿರಬಹುದು ಅಥವಾ ಸರ್ಕಾರದಿಂದ ಮಂಜೂರಾದ ಮನೆ ಆಗಿರಬಹುದು ಅಥವಾ ತಲತಲಾಂತರದಿಂದ ಬಂದ ಮನೆ ಆಗಿರಬಹುದು ಆದರೆ ಆ ಒಂದು ಮನೆ ನಿಮ್ಮದೆನ್ನುವ ದಾಖಲೆ ಬೇಕೇ ಬೇಕಾಗುತ್ತದೆ.
ಎರಡನೆಯದಾಗಿ ಪಂಚಾಯಿತಿ ಕಚೇರಿಯಿಂದ ಫಾರಂ 11 ಮತ್ತು ಫಾರಂ 9 ತೆಗೆದುಕೊಳ್ಳಬೇಕು ಇದನ್ನು ಐವತ್ತು ರೂಪಾಯಿ ಶುಲ್ಕ ಪಾವತಿಸಿ ಪಂಚಾಯಿತಿ ಕಚೇರಿಯಲ್ಲಿ ಪಡೆದುಕೊಳ್ಳಲು ಅವಕಾಶವಿರುತ್ತದೆ ಮೂರನೆಯದಾಗಿ ತಂದೆ ಹಾಗೂ ಮಕ್ಕಳ ಆಧಾರ್ ಕಾರ್ಡ್ ಮತ್ತು ಸಾಕ್ಷಿಗಳು ಮತ್ತು ಅವರ ಹಸ್ತಾಕ್ಷರ ಬಹಳ ಮುಖ್ಯವಾಗಿರುತ್ತವೆ.
ತಂದೆಯಿಂದ ಮಗನಿಗೆ ಆಸ್ತಿ ವರ್ಗಾವಣೆ ಮಾಡುವಾಗ ಮೂರು ರೀತಿಯಾಗಿ ಆಸ್ತಿಯನ್ನು ವರ್ಗಾಯಿಸಲು ಅವಕಾಶವಿದೆ ಅವುಗಳೆಂದರೆ ವಿಭಾಗದ ಮೂಲಕ ಅಥವಾ ದಾನಪತ್ರದ ಮೂಲಕ ಅಥವಾ ಕ್ರಯದ ಮೂಲಕ ಆಗಿರಬಹುದು. ಸಾಮಾನ್ಯವಾಗಿ ತಂದೆಯಾದವರು ತನ್ನ ಸ್ವಂತ ಮಗನಿಗೆ ದಾನ ಪತ್ರದ ಮೂಲಕ ಆಸ್ತಿಯನ್ನು ವರ್ಗಾವಣೆ ಮಾಡುತ್ತಾರೆ ಏಕೆಂದರೆ ದಾನ ಪತ್ರದ ಮೂಲಕ ಮನೆಯನ್ನು ವರ್ಗಾಯಿಸುವುದರಿಂದ ರಿಜಿಸ್ಟರ್ ನ ಸಮಯದಲ್ಲಿ ಸ್ಟಾಂಪ್ ಡ್ಯೂಟಿ ಖರ್ಚು ಉಳಿತಾಯವಾಗುತ್ತದೆ ಜೊತೆಗೆ ಇನ್ನಿತರ ಖರ್ಚುಗಳು ಕಡಿಮೆಗೊಳ್ಳುತ್ತದೆ ಈ ಮೂಲಕ ವರ್ಗಾವಣೆ ಮಾಡುವುದರಿಂದ ಅಂದಾಜು ಮೂರರಿಂದ ನಾಲ್ಕು ಸಾವಿರ ರೂಪಾಯಿಗಳ ಒಳಗೆ ಖರ್ಚು ಉಂಟಾಗಬಹುದು.
ಹೀಗೆ ಮೇಲೆ ತಿಳಿಸಲಾದ ಎಲ್ಲಾ ದಾಖಲೆಗಳ ಜೊತೆಗೆ ನಿಮಗೆ ಸಂಬಂಧಪಟ್ಟಂತಹ ಉಪನಂದಣಿ ಕಛೇರಿಗೆ ಹೋಗಿ ನೋಂದಣಿಯನ್ನು ಮಾಡಿಸಬೇಕಾಗುತ್ತದೆ ಇನ್ನು ನೋಂದಣಿ ಪ್ರಕ್ರಿಯೆ ಹೇಗಿರುತ್ತದೆ ಎಂದರೆ ಈ ಮೇಲೆ ತಿಳಿಸಿದ ವ್ಯಕ್ತಿಗಳು ಸಾಕ್ಷಿದಾರರೊಂದಿಗೆ ಮುದ್ರಣ ಪತ್ರದ ಮೇಲೆ ಆಸ್ತಿ ವರ್ಗಾವಣೆಯ ಕುರಿತು ದಾನ ಪತ್ರ ಬರೆಸಬೇಕು ದಾನ ಪತ್ರದಲ್ಲಿ ನಿವೇಶನದ ಸಂಪೂರ್ಣ ವಿವರ ದಾಖಲಿಸಬೇಕು ಅಂತೆಯೇ ನೋಂದಣಿ ಸಮಯದಲ್ಲಿ ಸಾಕ್ಷಿದಾರರ ಸಹಿ ಮತ್ತು ದಾಖಲೆಗಳು ಅವಶ್ಯಕವಾಗಿರುವುದರಿಂದ ಆತ್ಮೀಯರನ್ನು ಸಾಕ್ಷಿದಾರರಾಗಿ ಕರೆದುಕೊಂಡು ಹೋಗುವುದು ಉತ್ತಮ ನಂತರ ಉಪನಂದಣಿ ಕಚೇರಿಯಲ್ಲಿ ರಿಜಿಸ್ಟರ್ ಮಾಡಲಾಗುವುದು.
ರಿಜಿಸ್ಟರ್ ಆದ ನಂತರ ರಿಜಿಸ್ಟರ್ ಪತ್ರದ ನಕಲು ದಾಖಲಾತಿಯನ್ನು ತೆಗೆದುಕೊಂಡು ಗ್ರಾಮ ಪಂಚಾಯಿತಿಯಲ್ಲಿ ಖಾತೆ ವರ್ಗಾವಣೆಗೆ ಸಲ್ಲಿಸಬೇಕಾಗುತ್ತದೆ ಇಲ್ಲಿ ನೋಂದಣಿ ಮಾಡಿದ ವಿವರ ಮತ್ತು ಉದ್ದೇಶವನ್ನು ಬರೆದು ಗ್ರಾಮ ಪಂಚಾಯಿತಿಗೆ ನೀಡಬೇಕು ಇಲ್ಲಿ ನಿಗದಿ ಪಡಿಸಿದ ದಿನಾಂಕದ ಒಳಗಡೆ ಯಾರಿಂದಲಾದರೂ ತಕರಾರು ಬರದಿದ್ದರೆ ಖಾತೆಯನ್ನು ಬದಲಾಯಿಸಿ ಇ ಸ್ವತ್ತು ಮುಖಾಂತರ ಆದೇಶವನ್ನು ಹೊರಡಿಸಲಾಗುತ್ತದೆ ಇ ಸ್ವತ್ತನ್ನು ಕಡ್ಡಾಯವಾಗಿ ಮಾಡಲೇಬೇಕಾಗುತ್ತದೆ.
ಇದನ್ನೂ ಓದಿ..ಆಸ್ತಿ ಮಾರಾಟ ಮತ್ತು ಖರೀದಿಗೆ ಸರ್ಕಾರದಿಂದ ಹೊಸ ರೂಲ್ಸ್
ಇ- ಸ್ವತ್ತು ವರ್ಗಾವಣೆಯ ಮೂಲಕ ಮಾಡಲಾದ ಹಕ್ಕು ಬದಲಾವಣೆ ಕಾನೂನು ಬದ್ಧವಾಗಿರುತ್ತವೆ ಆದ್ದರಿಂದ ಮನೆಯನ್ನು ಅಥವಾ ಜಾಗವನ್ನ ವರ್ಗಾಯಿಸಬೇಕಾದರೆ ಇ- ಸ್ವತ್ತಿನ ಮುಖಾಂತರವೇ ಮಾಡಬೇಕು ಇನ್ನೂ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿನ ಮುಖ್ಯ ಅಧಿಕಾರಿ ಪಿ ಡಿ ಓ ಅವರನ್ನು ಸಂಪರ್ಕಿಸಿ ಮಾಹಿತಿಯನ್ನು ತಿಳಿದುಕೊಳ್ಳಿ.