Gold Rate today for Karnataka ಇಡೀ ಪ್ರಪಂಚದಲ್ಲಿ ಸರಿಯಾಗಿ ಸಂಶೋಧನೆ ಮಾಡಿ ನೋಡಿದರೆ ಅತ್ಯಂತ ಹೆಚ್ಚು ಅಂದರೆ 12 ಪ್ರತಿಶತಕ್ಕೂ ಅಧಿಕ ಚಿನ್ನ ಖರೀದಿ ಮಾಡುವಂತಹ ದೇಶ ನಮ್ಮ ಭಾರತ ದೇಶವಾಗಿದೆ. ಇದಕ್ಕೆ ನಾವು ನಮ್ಮ ಮಹಿಳಾ ಮಣಿಯರಿಗೆ ಶ್ರೇಯವನ್ನು ಸಲ್ಲಿಸಬೇಕು ಎಂದರು ತಪ್ಪಾಗಲಾರದು. ಇನ್ನು ಇಂದಿನ ಲೇಖನಿಯಲ್ಲಿ ಇಂತಹ ಸ್ವರ್ಣ ಹಾಗೂ ಬೆಳ್ಳಿ ಪ್ರಿಯರಿಗೆ ಇಂದಿನ ಬೆಳ್ಳಿ ಹಾಗೂ ಚಿನ್ನದ ಬೆಲೆಯನ್ನು ಸರಿಯಾಗಿ ವಿವರವಾಗಿ ತಿಳಿಸಲು ಹೊರಟಿದ್ದೇವೆ ಬನ್ನಿ.
Gold Rate today
22 ಹಾಗೂ 24 ಕ್ಯಾರೆಟ್ (24 carats) ಬಂಗಾರದ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ ಎಂಬುದಾಗಿ ತಿಳಿದು ಬಂದಿದ್ದು ಒಂದು ಕೆಜಿ ಬೆಳ್ಳಿಯಲ್ಲಿ (kg silver) 400 ರೂಪಾಯಿ ಬೆಲೆ ಇಳಿಕೆ ಕಂಡು ಬಂದಿದೆ ಎಂಬುದಾಗಿ ಮಾರುಕಟ್ಟೆ ಎಂದು ತಿಳಿದುಬಂದಿದೆ. ರಾಷ್ಟ್ರದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯನ್ನು ತಿಳಿದುಕೊಳ್ಳೋಣ.
ಚೆನ್ನೈನಲ್ಲಿ 53050 ರೂಪಾಯಿ ಮುಂಬೈ ಕೊಲ್ಕತ್ತಾ ಹೈದರಾಬಾದ್ ಕೇರಳ ಹಾಗೂ ಪುಣೆಗಳಲ್ಲಿ 52,200 ರೂಪಾಯಿ. ದೆಹಲಿಯಲ್ಲಿ 52,350 ರೂಪಾಯಿ. ಬೆಂಗಳೂರು ಮಂಗಳೂರು ಹಾಗೂ ಮೈಸೂರಿನಲ್ಲಿ 52,250 ರೂಪಾಯಿಗಳಿವೆ. ಇನ್ನು 24 ಕ್ಯಾರೆಟ್ ಬಂಗಾರದ ಬೆಲೆ ಮಂಗಳೂರು ಬೆಂಗಳೂರು ಹಾಗೂ ಮೈಸೂರಿನಲ್ಲಿ 57000 ರೂಪಾಯಿಗಳು. ಮುಂಬೈ ಕೊಲ್ಕತ್ತಾ ಹೈದರಾಬಾದ್ ಕೇರಳ ಪುಣೆ ನಲ್ಲಿ 56950 ರೂಪಾಯಿಗಳು ಹಾಗೂ ದೆಹಲಿಯಲ್ಲಿ 57100 ರೂಪಾಯಿಗಳಲ್ಲಿ ಬೆಲೆ ಇದೆ.
ಬಂಗಾರದ ಬೆಲೆಯನ್ನು ಸರಿಯಾಗಿ ಗಮನಿಸಿ ನೋಡುವಾಗ ಸದ್ಯಕ್ಕಂತೂ ಬಂಗಾರದ ಬೆಲೆಯಲ್ಲಿ ಇಳಿಕೆ ದೊಡ್ಡ ಮಟ್ಟದಲ್ಲಿ ಕಾಣಿಸುವಂತಹ ನಿರೀಕ್ಷೆ ಇಲ್ಲ ಎಂದು ಹೇಳಬಹುದಾಗಿದೆ. ಹೀಗಾಗಿ ಹೂಡಿಕೆದಾರರಿಗೆ ಇದೊಂದು ಸುವರ್ಣ ಅವಕಾಶವಾಗಿದೆ.
ಇದನ್ನೂ ಓದಿ..ಆದಾಯ ಇಲಾಖೆಯಿಂದ ನೇಮಕಾತಿ ನಡೆಯುತ್ತಿದೆ, ಪುರುಷ ಮತ್ತು ಮಹಿಳೆಯರು ಅರ್ಜಿಹಾಕಿ
ಇನ್ನು ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ ಬೆಂಗಳೂರು ಮೈಸೂರು, ಮಂಗಳೂರು ಚೆನ್ನೈ ಹಾಗೂ ಹೈದರಾಬಾದ್ ನಲ್ಲಿ 75300 ರೂಪಾಯಿ ಆಗಿದೆ. ಮುಂಬೈ ದೆಹಲಿ ಹಾಗೂ ಕೊಲ್ಕತ್ತಾದಲ್ಲಿ ಅಂದರೆ ಭಾರತದ ಉತ್ತರ ಭಾಗದಲ್ಲಿ 72,500 ರೂಪಾಯಿ ಬೆಲೆ ಇದೆ. ಬೆಳ್ಳಿಯ ಬೆಲೆ ಕೂಡ ಕೇಜಿಗೆ 400 ರೂಪಾಯಿ ಕಡಿಮೆ ಆಗಿದ್ದು ಇದು ಕೂಡ ಖರೀದಿದಾರರಿಗೆ ಒಂದೊಳ್ಳೆ ಅವಕಾಶವಾಗಿದೆ.