ಇವತ್ತಿನ ಈ ಲೇಖನದಲ್ಲಿ ಭಕ್ತಿಯ ಕುರಿತು ಸ್ವಲ್ಪ ವಿವರವಾಗಿ ನೋಡೋಣ. ಭಕ್ತಿ ಭಾವದಿಂದ ಹಾಗೂ ಪ್ರೀತಿಯಿಂದ ಹುಟ್ಟಬೇಕಾದ ವಿಷಯ. ಭಯದಿಂದ ಅಲ್ಲ. ಶನಿ ದೇವರ ಬಗ್ಗೆ ಎಲ್ಲರೂ ಕೇಳಿಯೇ ಇರುತ್ತೀರಿ. ಆದ್ರೆ ಆ ಹೆಸರು ಕೇಳಿ ಎಲ್ಲರೂ ಸ್ವಲ್ಪ ಭಯ ಬೀಳುವುದು ಸಾಮಾನ್ಯ. ಭಯದಿಂದ ಶನಿ ದೇವರ ಭಕ್ತಿ ಮಾಡುತ್ತೇವೆ. ಯಾವಾಗಲೂ ಶನಿ ದೇವರಿಗೆ ಭಯದಿಂದ ಭಕ್ತಿ ಮಾಡುವ ಅಗತ್ಯ ಇರಲ್ಲ. ಯಾವಾಗಲೂ ಶನಿ ಕಾಡುತ್ತಾನೆ, ಶನಿ ಹೆಗಲು ಏರುತ್ತಾನೆ… ಅಂತ ಭಯ ಪಡುತ್ತೇವೆ. ಆದರೆ ಶನಿ ಕಾಡಲ್ಲ ಶನಿ ಹೆಗಲು ಎರಲ್ಲ. ಶನಿ ದೇವರು ಕೇವಲ ನಮ್ಮ ನಮ್ಮ ಕರ್ಮ ಫಲ ಧಾತ. ನಮ್ಮ ನಮ್ಮ ಕರ್ಮಗಳಿಗೆ ನಾವೇ ಕಾರಣ ಆಗಿರುತ್ತೇವೆ. ನಮ್ಮ ಹಣೆ ಬರಹವನ್ನು ಬರೆದುಕೊಳ್ಳುವುದು ಕೂಡ ನಾವೇ. ನಾವು ಪಡೆದ ಕರ್ಮದ ಫಲಗಳನ್ನು ನಾವು ಉಣ್ಣಲೇ ಬೇಕು. ನಾವು ಮಾಡಿದ ಪಾಪ ನಮ್ಮ ಬೆನ್ನ ಹಿಂದೆಯೇ ಇರತ್ತೇ ನಾವದನ್ನು ಅನುಭವಿಸಲೇ ಬೇಕು. ಈ ಲೆಕ್ಕಾಚಾರವನ್ನು ಸರಿಯಾಗಿ ಸರಿದೂಗಿಸಿಕೊಂಡು ಹೋಗುವುದು ಮಾತ್ರ ಶನಿ ದೇವರ ಕೆಲಸ. ಶನಿ ದೇವರು ನಮಗೆ ಹಿಂಸೆ ಕೊಡಲ್ಲ, ಭಯ ಪಡುವ ಅವಶ್ಯಕತೆ ಇರಲ್ಲ. ಆದರೂ ಕೂಡಾ ಶನಿ ದೇವರನ್ನ ಒಲಿಸಿಕೊಳ್ಳಬೇಕು ಅಂದರೆ ಏನು ಮಾಡಬೇಕು. ಈ ಒಂದು ಶ್ಲೋಕ ಇದೆ. ಆದರೆ ಶ್ಲೋಕವನ್ನು ಹೇಳಿದರೆ ಶನಿ ದೇವರು ಒಲಿಯುತ್ತಾರ ಅನ್ನುವ ಪ್ರಶ್ನೆ ಕಾಡಬಹುದು. ಹಾಗಿದ್ರೆ ಏನಿದು ಶ್ಲೋಕ.ಕೆಲವರು ದೇವರನ್ನ ನಂಬದವರು ವೈಜ್ಞಾನಿಕವಾಗಿ ನೋಡುವುದಾದ್ರೆ, ವಿಫುಲವಾದ ಜ್ಞಾನವನ್ನ ವಿಜ್ಞಾನ ಎನ್ನುತ್ತೇವೇ. ಹಾಗಿದ್ರೆ ಕಣ್ಣಿಗೆ ಕಾಣಿಸದು ಮಾತ್ರ ವಿಜ್ಞಾನವಾ? ಅಥವಾ ಶ್ಲೋಕ ಮಂತ್ರಗಳಲ್ಲಿ ಯಾವುದೇ ಅರ್ಥವೇ ಇರಲ್ವಾ ಹಾಗಾದ್ರೆ?
ಗ್ರಹಣಾಮಾದಿರಾದಿತ್ಯಂ ಲೋಕ ರಕ್ಷಣ ಕಾರಕಾಹ ವಿಷಮಸ್ವಾನ ಸಂಭೂತಮ್ ಪೀಡಾಂ ಹರತು ಮೇ ರವಿಃ ಗ್ರಹಗಳಲ್ಲೇ ಆದಿ, ಮೊದಲನೇಯವ, ಲೋಕವನ್ನು ರಕ್ಷಣೆ ಮಾಡುವವನು ನೀನು ಸೂರ್ಯ ಮನುಷ್ಯನ ದೇಹದಲ್ಲಿ ಇರುವ ವಿಷಮತೆಯನ್ನು ಸುಟ್ಟು ಹಾಕುವವ ನೀನು. ದೇಹದಲ್ಲಿ ಇರುವಂತಹ ಪೀಡೆಗಳನ್ನು ನಾಶ ಮಾಡುವವನೂ ನೀನೇ ಸೂರ್ಯ ಸೂರ್ಯನಿಗೆ ನಮಸ್ಕರಿಸುವ ಈ ಶ್ಲೋಕ ಇದನ್ನು ಪಠಿಸಿದರೆ ಶನಿ ದೇವರೂ ಕೂಡ ಪ್ರಸನ್ನ ಆಗುತ್ತಾರೆ ಅನ್ನುವ ಉಲ್ಲೇಖ ಇದೆ. ಯಾಕೆ? ಅಂತ ಪ್ರಶ್ನೆ ಉದ್ಭವಿಸಬಹುದು. ಸೂರ್ಯ ದೇವರ ಸುತ (ಪುತ್ರ) , ಶಿಷ್ಯ, ಸೂರ್ಯ ದೇವನ ಒಂದು ಅಂಶ ಶನಿ. ಹಾಗಾಗಿ ಸೂರ್ಯ ದೇವರನ್ನು ಸ್ತುತಿ ಮಾಡುವುದರಿಂದ ಶನಿ ದೇವರನ್ನೂ ಒಲಿಸಿಕೊಳ್ಳಬಹುದು ಎನ್ನುವ ಉಲ್ಲೇಖ ಹಾಗೂ ನಂಬಿಕೆ. ಇದರ ಜೊತೆಗೆ ನೀಲಾ ಮಣಿ. ನೀಲಿ ಬಣ್ಣ ಇರುವ ಹರಳನ್ನು ಕೊರಳಲ್ಲಿ ಅಥವಾ ಉಂಗುರದಲ್ಲಿ ಧರಿಸುವುದರಿಂದ ಶನಿ ದೇವರು ಪ್ರಸನ್ನ ಆಗುತ್ತಾರೆ. ಈ ರೀತಿಯಾಗಿ ಮಾಡಿಕೊಂಡು ಶನಿ ದೇವರನ್ನು ಪ್ರಸನ್ನ ಗೊಳಿಸಬಹುದು. ಆದರೆ ಈ ಶ್ಲೋಕಗಳಿಂದ ಶನಿ ದೇವರನ್ನು ಪ್ರಸನ್ನಗೊಳಿಸುವುದರಿಂದ ನೀಲಿ ಬಣ್ಣದ ಹರಳನ್ನು ಧರಿಸುವುದರಿಂದ ಪ್ರಸನ್ನಗೊಳಿಸಬಹುದು.
ಆದರೆ ಇದಕ್ಕಿಂತ ಹೆಚ್ಚಾಗಿ ನಮ್ಮ ನಮ್ಮ ಕರ್ಮ ಲೆಕ್ಕಾಚಾರಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ನಮ್ಮ ನಾಳೇಗಳು ಸರಿಯಾಗಿ ಇರಬೇಕು ಅಂದರೆ, ಇವತ್ತು ಒಳ್ಳೆಯದನ್ನು ಮಾಡಬೇಕು. ಇವತ್ತು ಒಳ್ಳೆಯದನ್ನು ಮಾಡಿದರೆ ಅದರ ಫಲ ನಾಳೆ ಒಳ್ಳೆಯದು ಆಗಲೇಬೇಕು. ಒಂದುವೇಳೆ ಇವತ್ತು ನಾವು ಬೇವಿನ ಬೀಜ ಬಿತ್ತಿದರೆ ಅದು ಬೇವಿನ ಮರವೇ ಆಗಿ ಕಹಿಯನ್ನೇ ಕೊಡತ್ತೆ ಹೊರತು ಮಾವಿನ ಮರ ಆಗಿ ಸಿಹಿಯಾದ ಹಣ್ಣನ್ನು ಕೊಡಲ್ಲ. ಅದೇ ಮಾವಿನ ಗಿಡವನ್ನು ಬೆಳೆಸಿದರೆ ಅದು ನಾಳೆ ದಿನ ಒಳ್ಳೆಯ ಸಿಹಿಯಾದ ಹಣ್ಣನ್ನು ಕೊಡತ್ತೆ. ಹಾಗೆಯೇ ನಾವು ಮಾಡುವ ಕಾರ್ಯಗಳು ಕೂಡಾ… ಒಳ್ಳೆಯ ಕೆಲಸ ಕಾರ್ಯ ಮಾಡಿದರೆ ಉತ್ತಮ ಫಲ, ಕೆಟ್ಟ ಕೆಲಸ ಕಾರ್ಯ ಮಾಡುದರೆ ಕೆಟ್ಟ ಫಲ… ಫಲ ಕೊಡುವವ ಕರ್ಮ ಫಲಧಾತ. ಹಾಗಾಗಿ ಯಾರೇ ಆದರೂ ಸಹ ಒಳ್ಳೆಯ ಕೆಲಸಗಲನ್ನು ಮಾಡಿದರೆ ಭಯ ಪಡುವ ಅಗತ್ಯ ಇಲ್ಲ. ಭಯದಿಂದ ಭಕ್ತಿ ತೋರದೆ. ಪ್ರೀತಿಯಿಂದ ಭಕ್ತಿಯನ್ನು ತೋರಿಸಬೇಕು. ಭಕ್ತಿಯಿಂದ ಭಕ್ತಿಯನ್ನು ತೋರಿಸಬೇಕೆ ವಿನಃ ತೋರಿಕೆಗೋ ಅಥವಾ ಭಯದಿಂದಲೋ ಭಕ್ತಿ ತೋರಿಸಿ ಪೂಜೆ ಮಾಡುವುದು ಅಲ್ಲ.
ಇದು ಸಾಮಾಜಿಕವಾಗಿಯೂ ಹಾಗೂ ಆರೋಗ್ಯವಾಗಿಯೂ ಅನ್ವಯ ಆಗುತ್ತದೆ. ನಾವು ಇಂದು ಉತ್ತಮ ಆಹಾರವನ್ನು ಸೇವಿಸಿದರೆ ನಾಳೆ ನಮ್ಮ ಆರೋಗ್ಯ ಸರಿಯಾಗಿ ಇರುತ್ತದೆ. ನಾಳೆ ನಮಗೆ ಖಾಯಿಲೆ ಬರತ್ತೆ ಅಂದರೆ ಅದಕ್ಕೆ ಶನಿ ದೇವರು ಅಥವಾ ಶನಿ ದೇವರು ಕೊಡುವ ಕಾಟ ಕಾರಣ ಅಲ್ಲ. ಇವತ್ತಿಗೆ ಬರಬಾರದ ಕಾಯಿಲೆಗಳು ಬಂದಿವೆ ಅಂದರೆ ಶನಿ ದೇವರ ಶಾಪ ಕಾರಣ ಅಲ್ಲ.
ನಾವೇ ಕಾರಣ ಬೇಡವಾದ್ದನ್ನು ತಿಂದು ಬೇಡವಾದ್ದನ್ನು ಮಾಡಿ ಕೆಟ್ಟ ಆಲೋಚನೆಗಳು ಇವುಗಳಿಂದ ನಮ್ಮ ಆರೋಗ್ಯ ಕೆಡಿಸಿಕೊಂಡಿರುತ್ತೇವೆ. ಶನಿ ದೇವರ ಕೆಲಸ ಕರ್ಮ ಫಲಧಾತ ನಾವು ಯಾವ ರೀತಿ ಕರ್ಮವನ್ನು ಮಾಡಿರುತ್ತೇವೆಯೋ ಅದರ ಫಲವನ್ನು ನಾವೇ ಇವತ್ತು ಅನುಭವಿಸಬೇಕು. ನಾಳೆ ಚೆನ್ನಾಗಿ ಇರಬೇಕು ಅಂದರೆ ನಮ್ಮನ್ನ ನಮ್ಮ ಆಹಾರ – ವಿಹಾರವನ್ನು, ನಮ್ಮ ವಿಚಾರಗಳನ್ನು ಇವತ್ತೇ ನಾವು ತಿದ್ದುಕೊಳ್ಳಬೇಕು. ಆಗ ಹೇಗೆ ತಾನೇ ನಮಗೆ ಶನಿ ದೇವರು ಕೆಟ್ಟದ್ದು ಮಾಡಲು ಸಾಧ್ಯ!? ನಮ್ಮ ಇಂದಿನ ವಿಚಾರಗಳು ಒಳ್ಳೆಯದಿದ್ದಾಗ ನಮ್ಮ ನಾಳೆಗಳಿಗೆ ಶನಿ ದೇವರು ಖಂಡಿತ ಒಳ್ಳೆಯ ಫಲವನ್ನೇ ಕೊಡುತ್ತಾರೆ.