ಕೃಷಿ ಅಂದ್ರೆ ಮೂಗು ಮುರಿಯುವ ಮಂದಿ ಕೆಲವರು ಇದ್ದಾರೆ, ಕೃಷಿಯಿಂದ ಆದಾಯ ಕಡಿಮೆ ಬರಬಹುದು ಆದ್ರೆ ಮನುಷ್ಯನ ಆರೋಗ್ಯವನ್ನು ವೃದ್ಧಿಸುವಂತ ಕ್ಷೇತ್ರ ಅಂದ್ರೆ ತಪ್ಪಾಗಲಾರದು, ಏಕೆಂದರೆ ಪ್ರಕೃತಿಯ ಮಡಿಲಿನಲ್ಲಿ ನೈಸಗಿಕ ಚಿಕಿತ್ಸೆ ಪಡೆಯುವಂತಾಗುತ್ತದೆ. ಅದಕ್ಕೆ ಗ್ರಾಮೀಣ ಪ್ರದೇಶದ ಜನರು ಹಾಗು ಹಳ್ಳಿಗಳಲ್ಲಿ ಗಟ್ಟಿಮುಟ್ಟಾಗಿರುತ್ತಾರೆ, ಬಲಶಾಲಿಗಳಾಗಿರುತ್ತಾರೆ ಅಷ್ಟೇ ಅಲ್ಲದೆ ಅರೋಗ್ಯ ಪೂರ್ವಕರಾಗಿರುತ್ತಾರೆ.
ಇಲ್ಲೊಬ್ಬ ವ್ಯಕ್ತಿ ಕೈಯಲ್ಲಿ ಸರ್ಕಾರಿ ಕೆಲಸ ಕೈ ತುಂಬ ಸಂಬಳ ಇದ್ರೂ ಕೂಡ ಇವುಗಳನ್ನು ಬಿಟ್ಟು ತನ್ನ ಹುಟ್ಟೂರಿಗೆ ಬಂದು ಕೃಷಿಯಲ್ಲಿ ನೆಮ್ಮದಿಯ ಜೀವನದ ಜೊತೆಗೆ ಹೆಚ್ಚಿನ ಅಧಾಯವನ್ನು ಪಡೆಯುವಂತ ಯಶಸ್ವೀ ವ್ಯಕ್ತಿಯಾಗಿದ್ದಾರೆ. ಅಷ್ಟಕ್ಕೂ ಇವರು ಬೆಳೆದಿರುವ ಬೆಳೆಗಳು ಯಾವುವು ಇವರು ಸರ್ಕಾರಿ ಕೆಲಸ ಬಿಟ್ಟು ಕೃಷಿಗೆ ಒತ್ತು ಕೊಟ್ಟಿದು ಯಾಕೆ ಅನ್ನೋದನ್ನ ಮುಂದೆ ನೋಡಿ.
ಇವರು ಕೋಲಾರದ ಮೂಲದವರು ಹೆಸರು ರಾಜಶೇಖರ್ ಎಂಬುದಾಗಿ ವೃತ್ತಿ ಸಾರಿಗೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಇವರಿಗೆ ಚಿಕ್ಕ ವಯಸ್ಸಿನಲ್ಲೇ ಹಲವಾರು ಕಾಯಿಲೆಗಳು ಬಂದಿರೋ ಕಾರಣಕ್ಕೆ ಸರ್ಕಾರಿ ಕೆಲಸ ಬಿಟ್ಟು ಕೃಷಿಯ ಕಡೆ ಒಲವು ತೋರಿಸಿದರು. ಇವರ ಸ್ನೇಹಿತರು ಕೂಡ ಇದನ್ನೇ ಹೇಳುತ್ತಾರೆ ಕೃಷಿಯ ಕಡೆ ಒಲವು ಕೊಟ್ಟರೆ ನೈಸರ್ಗಿಕ ಚಿಕಿತ್ಸೆ ಸಿಗುವಂತಾಗುತ್ತದೆ ಅನ್ನೋದನ್ನ ಹೇಳುತ್ತಾರೆ ಹಾಗಾಗಿ ಕೃಷಿ ಕಡೆಗೆ ಒತ್ತು ಕೊಟ್ಟು ಹಲವು ರೀತಿಯ ಬೆಳೆಗಳನ್ನು ಬೆಳೆದು ಉತ್ತಮ ಆದಾಯದ ಜೊತೆಗೆ ಉತ್ತಮ ಜೀವನವನ್ನು ರೂಪಿಸಿಕೊಂಡಿದ್ದಾರೆ.
ಕೋಲಾರದ ಚಾಮರಹಳ್ಳಿ ಇಲ್ಲಿ ತಮ್ಮ ಜಾಮೀನು 40 ಎಕರೆ ಇದ್ದು ಇದರಲ್ಲಿ ಇದೀಗ ಹಲವು ಬಗೆ ಬಗೆಯ ಮರ ಗಿಡಗಳನ್ನು ಬೆಳೆಸಿದ್ದಾರೆ, ಇದರಲ್ಲಿ ಮಾವು, ಸಪೋಟ, ನೇರಳೆ ಹೀಗೆ ಹಲವು ಗಿಡ ಮರಗಳನ್ನು ಬೆಳೆಸುವ ಜೊತೆಗೆ ಔಷದಿಯ ಗುಣಗಳನ್ನು ಒದಗಿಸುವಂತ ಗಿಡಗಳನ್ನು ಬೆಳೆಸಿದ್ದಾರೆ. ಅದೇನೇ ಇರಲಿ ಸಾಧಿಸುವ ಛಲ ಇದ್ರೆ ಬರಿ ಸರ್ಕಾರಿ ಕೆಲಸ ಅಷ್ಟೇ ಅಲ್ಲ ಯಾವ ಕ್ಷೇತ್ರದಲ್ಲಿ ಬೇಕಾದ್ರು ಸಾಧನೆ ಮಾಡಬಹುದು ಅನ್ನೋದನ್ನ ಇವರಿಂದ ತಿಳಿಯಬಹುದಾಗಿದೆ. ಕೃಷಿ ಬೇಡ ಆನೂರಿಗೆ ಕೃಷಿಯೇ ಒಳ್ಳೆ ಜೀವನ ಅನ್ನೋದನ್ನ ಇವರಿಂದ ತಿಳಿಯಬಹುದಾಗಿದೆ.