This is the time when this long time dream of Gemini comes true ಮಿಥುನ ರಾಶಿ ಮಿಥುನ ಲಗ್ನ 2023ರ ವರ್ಷ ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ. ಯಾವ ರೀತಿಯ ಲಾಭಗಳು ಹಾಗೂ ನಷ್ಟಗಳು ಆಗುತ್ತದೆ ಮತ್ತು ಸಮಸ್ಯೆಗಳಿಗೆ ಪರಿಹಾರ ಏನೆಂದು ತಿಳಿದುಕೊಳ್ಳೋಣ.
ಮಿಥುನ ರಾಶಿಯವರು ಉತ್ತಮವಾದ ಫಲಗಳನ್ನು ನಿರೀಕ್ಷೆ ಮಾಡಬಹುದು ಈ ಬರುವಂತಹ ವರ್ಷದಲ್ಲಿ ಮುಖ್ಯವಾಗಿ ನಿಮಗೆ 4 ಗ್ರಹಗಳು ಸ್ಥಿರವಾದಂತಹ ಫಲಗಳು ಕೊಡುತ್ತದೆ ಶನೇಶ್ಚರ ಗುರು ರಾಹು ಕೇತು ಶನೇಶ್ಚರನ ಸ್ಥಿತಿ ನಿಮ್ಮ ಭಾಗ್ಯದಲ್ಲಿದೆ ಗುರು ನಿಮಗೆ ಒಳ್ಳೆಯ ಫಲವನ್ನು ನೀಡುತ್ತಾನೆ ರಾಹು ಕೂಡ ಲಾಭ ಸ್ಥಾನದಲ್ಲಿದ್ದಾನೆ ಕೇತು ಸ್ವಲ್ಪ ಮಿಶ್ರಫಲಗಳನ್ನು ಕೊಡುತ್ತಾನೆ.
Gemini Astrology on 2023
ಬರುವಂತಹ ವರ್ಷದಲ್ಲಿ ನಿಮ್ಮ ಆರೋಗ್ಯ ಹೇಗಿರುತ್ತದೆ ಎಂದರೆ ಆರೋಗ್ಯದಲ್ಲಿ ವೃದ್ಧಿಯನ್ನು ಕಾಣುವ ವರ್ಷವಾಗಿರುತ್ತದೆ ಆದರೆ ಕೆಲವೊಂದು ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಕೇತು ಪಂಚಮದಿಂದ ಸಂಚಾರ ಮಾಡುವಾಗ ಸ್ವಲ್ಪ ಆತಂಕ ಉಂಟಾಗುತ್ತದೆ ಮತ್ತು ಗ್ಯಾಸ್ಟಿಕ್ ಗೆ ಸಂಬಂಧಿಸಿದಂತಹ ತೊಂದರೆಗಳು ಕಿಡ್ನಿ ಗೆ ಸಂಬಂಧಪಟ್ಟಂತಹ ತೊಂದರೆಗಳು ಲಿವರ್ ಗೆ ಸಂಬಂಧಪಟ್ಟಂತಹ ತೊಂದರೆಗಳು ಅಥವಾ ನಿಮ್ಮ ಚಟ ಅಥವಾ ಹವ್ಯಾಸದಿಂದ ಬರುವಂತಹ ಕಾಯಿಲೆಗಳು ಇದರಿಂದ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಆದರೆ ಗುರುವಿನ ಸ್ಥಾನ ಬದಲಾವಣೆಯಾದ ನಂತರ ನಿಮ್ಮ ಆರೋಗ್ಯದಲ್ಲಿ ಅಭಿವೃದ್ಧಿಗೊಳ್ಳುತ್ತದೆ.
ಹಣಕಾಸಿನ ಸ್ಥಿತಿ ಹೇಗಿರುತ್ತದೆ ಎಂದರೆ ಮೊದಲು ಐದು ತಿಂಗಳು ಸಾಮಾನ್ಯ ಮಟ್ಟದ ಅಭಿವೃದ್ಧಿ ಇದ್ದರೂ ಕೂಡ ಧನ ಸಂಗ್ರಹಣೆ ಮಾಡುವ ಅವಕಾಶಗಳು ದೊರಕುತ್ತದೆ. ಹಣಕಾಸಿನ ಹೊಸ ಹೊಸ ಮಾರ್ಗಗಳನ್ನು ಕೊಂಡುಕೊಳ್ಳವಲ್ಲಿ ಯಶಸ್ವಿಯನ್ನು ಕಾಣುತ್ತೀರ ರಾಹುವಿನಿಂದ ನಿಮ್ಮ ತೀಕ್ಷ್ಣ ಬುದ್ಧಿ ,ಕುಟಿಲತೆ, ಹುಡುಕುವಂತಹ ದಾರಿ ಅದ್ಭುತವಾಗಿರುತ್ತದೆ. ಯಾರು ಮಾರ್ಕೆಟಿಂಗ್ ಫೀಲ್ಡ್ ಅಲ್ಲಿ ಜಾಸ್ತಿ ಇದಾರೆ ಅವರಿಗೆ ಹಣಕಾಸಿನ ದಾರಿಗಳು ಹೆಚ್ಚಾಗುತ್ತದೆ ಗುರು ರಾಹುವಿನ ಸಂಚಾರ ಲಾಭದಲ್ಲಿರುವುದರಿಂದ ಹೊಸ ಮಾರ್ಗಗಳು ಮತ್ತು ವಿದೇಶದಿಂದ ಲಾಭವನ್ನು ಪಡೆಯುತ್ತೀರಾ.
ಮಾನಸಿಕ ಸ್ಥಿತಿ ತುಂಬಾ ಚೆನ್ನಾಗಿರುತ್ತದೆ, ನಿಮ್ಮ ಸಹದ್ಯೋಗಿಗಳ ಸಹಾಯದಿಂದ ನಿಮ್ಮ ಸಾಧನೆಯನ್ನು ನೋಡುತ್ತೀರಾ ಮೊದಲನೇ ಹಂತ ಮಿಶ್ರಫಲ ಇದ್ದರೂ ಕೂಡ ನಂತರ ನೀವು ಲಾಭವನ್ನು ನೋಡುತ್ತೀರಾ. ಸುಖಸೌಕರ್ಯದಲ್ಲಿ ವೃದ್ಧಿ ಇರುತ್ತದೆ ಮಾಡುವಂತಹ ಭೂಮಿಯಾಗಿರಬಹುದು, ಉಳಿಮೆ ಮಾಡುವಂತದ್ದು, ಮನೆ ಕಟ್ಟುವಂತದ್ದು, ಪ್ರಾಪರ್ಟಿಯಿಂದ ಧನ ಲಾಭಗಳು ಆಗುವ ಸಾಧ್ಯತೆಗಳಿವೆ. ಹೂಡಿಕೆಯಿಂದ ಲಾಭಗಳು ಬರುವ ಸಾಧ್ಯತೆಗಳು ಫ್ಲಾಟ್ ತೆಗೆದುಕೊಳ್ಳುವ ಕನಸಿದ್ದರೆ ಜನವರಿಯಲ್ಲಿ ತೆಗೆದುಕೊಳ್ಳಿ ಒಳ್ಳೆಯ ಸಮಯ.
ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಕುಂದು ಕೊರತೆ ಆಗುವ ಸಾಧ್ಯತೆಗಳಿವೆ ಸ್ಪರ್ಧಾತ್ಮಕವಾಗಿ ಸ್ವಲ್ಪ ಮಾನಸಿಕ ಸ್ಥಿತಿ ಏಪ್ರಿಲ್ ವರೆಗೂ ಸ್ವಲ್ಪ ಕಡಿಮೆ ಇರುತ್ತದೆ ಏಪ್ರಿಲ್ವರೆಗೂ ವಿದ್ಯಾಭ್ಯಾಸದಲ್ಲಿ ಜಾಸ್ತಿ ಶ್ರಮವನ್ನು ಪಡಬೇಕಾಗುತ್ತದೆ ಗುರುವಿನ ಸಂಚಾರವಾದ ನಂತರ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಅಭಿವೃದ್ಧಿಯನ್ನು ಕಾಣುತ್ತೀರಿ ಪಂಚಮದಲ್ಲಿ ಕೇತು ಇದ್ದಾಗ ಸಾವಾಸ ದೋಷ ನಿಮ್ಮ ಯೋಜನೆಗಳಾಗಿರಬಹುದು ಹವ್ಯಾಸ ಅದರಲ್ಲಿ ಸಮಸ್ಯೆ ಬರುವ ಸಾಧ್ಯತೆಗಳಿರುತ್ತದೆ.
ಇಷ್ಟಪಟ್ಟವರ ಜೊತೆ ಸ್ವಲ್ಪ ಮನಸ್ತಾಪವಾಗಬಹುದು ಏಪ್ರಿಲ್ 22ರ ತನಕ ಪ್ರೇಮ ವಿವಾಹದಲ್ಲಿ ಸ್ವಲ್ಪ ಅಡೆತಡೆಗಳು ಉಂಟಾಗಬಹುದು. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ತೋರುವುದಕ್ಕಿಂತ ಉದ್ಯೋಗದಲ್ಲಿ ಹೆಚ್ಚಿನ ಆಸಕ್ತಿಯನ್ನು ಕಾಣುತ್ತಾರೆ ದೂರ ಪ್ರಯಾಣದ ಅವಕಾಶಗಳು ದೊರಕುತ್ತದೆ ಉದ್ಯೋಗದಲ್ಲಿ ಸ್ಥಳಾಂತರ ಆಗುವ ಸಾಧ್ಯತೆಗಳಿವೆ.
ಇದನೊಮ್ಮೆ ಓದಿ..ಕನ್ಯಾ ರಾಶಿಯ ವ್ಯಕ್ತಿಗಳು ಹೀಗೇಕೆ? ಇವರ ಗುಣಸ್ವಭಾವ ಹೇಗಿರತ್ತೆ ನೋಡಿ
ನಿಮ್ಮ ಪತ್ನಿಯ ಅಥವಾ ಪತಿಯ ಸಹಕಾರವಿರಬಹುದು ಅಥವಾ ನೀವು ಮಾಡುವಂತಹ ವ್ಯವಹಾರದಲ್ಲಿ ಉದ್ಯೋಗದ ಪಾರ್ಟ್ನರ್ ಇರಬಹುದು ಇವರ ಸಹಕಾರದಿಂದ ನಿಮಗೆ ಆದಾಯ ಲಾಭಗಳು ದೊರಕುತ್ತವೆ. ಪತಿ ಪತ್ನಿಯ ಸಂಬಂಧಗಳು ತುಂಬಾ ಚೆನ್ನಾಗಿರುತ್ತದೆ ಕುಟುಂಬದ ನಿವಾರಣೆ ಆಗಿರಬಹುದು ಸಂಬಂಧಗಳ ನಿಮ್ಮ ಸುಖ ಸೌಕರ್ಯದಲ್ಲಿ ವೃದ್ಧಿ ಮಾಡುವ ಪಾಲುದಾರಿಕೆ ಅವರದಾಗಿರುತ್ತದೆ ಗುರುವಿನ ಸಂಚಾರ ಲಾಭಕ್ ಹೋದಾಗ ಮದುವೆ ಕಾರ್ಯವಾಗಿರಬಹುದು ಶುಭ ಕಾರ್ಯವಾಗಿರಬಹುದು ಮತ್ತೆ ನಿಶ್ಚಿತಾರ್ಥ ಮಾಡುವುದಕ್ಕೆ ಇದು ಒಳ್ಳೆಯ ಸಮಯ. ದುಡಿಮೆ ಮಾಡುವ ಪತ್ನಿ ಅಥವಾ ಪತಿ ಸಿಗುವ ಸಾಧ್ಯತೆಗಳಿವೆ ಅವರ ಕೆಲಸದಲ್ಲಿ ಅಭಿವೃದ್ಧಿ ಅಥವಾ ಬಡ್ತಿ ಸಿಗುವ ಸಾಧ್ಯತೆಗಳಿವೆ.
ದೀರ್ಘ ಕಾಲದ ಸಮಸ್ಯೆಗಳಿದ್ದರೆ ಅದು ಪರಿಹಾರವಾಗುವ ಸಾಧ್ಯತೆಗಳಿವೆ ಮಾಡುವಂತಹ ಕೆಲಸದಲ್ಲಿ ಒಳ್ಳೆಯ ಅಭಿವೃದ್ಧಿಯನ್ನು ಕಾಣುತ್ತೀರಿ. ಕುಟುಂಬದವರ ಸಹಕಾರದಿಂದ ಹೊಸ ಬ್ಯುಸಿನೆಸ್ ಗಳನ್ನು ಸ್ಟಾರ್ಟ್ ಮಾಡುವ ಸಾಧ್ಯತೆಗಳಿವೆ. ವಿದೇಶದಲ್ಲಿ ಉದ್ಯೋಗದ ತೊಂದರೆ ಇದ್ದವರಿಗೆ ಉದ್ಯೋಗ ದೊರಕುವ ಸಾಧ್ಯತೆಗಳಿವೆ.
ಇದನೊಮ್ಮೆ ಓದಿ..ಇನ್ನೆರಡು ವರ್ಷ ಸುಖಗಳೇ ಇವೆ ಮೇಷ ರಾಶಿಯವರಿಗೆ ಯಾಕೆಂದರೆ..
ಮಿಥುನ ರಾಶಿಯವರು ಕೇತುವಿನ ಪರಿಹಾರವನ್ನು ಮಾಡಬೇಕಾಗುತ್ತದೆ ಬೆಳ್ಳುಳ್ಳಿ ಅಥವಾ ಈರುಳ್ಳಿಯನ್ನು ಹರಿಯುವ ನೀರಿನಲ್ಲಿ ಬಿಡುವುದರಿಂದ ಕೇತುವಿನ ತತ್ವ ಹಾಗೂ ನಕರತ್ಮಕ ಶಕ್ತಿಗಳು ದೂರವಾಗುತ್ತದೆ. ಮನೆಯಲ್ಲಿರುವ ಹಲ್ಲಿಯ ಸಂಖ್ಯೆಯನ್ನು ಕಡಿಮೆ ಮಾಡುವುದರಿಂದ ಕೇತುವಿನ ಪರಿಣಾಮ ಕಮ್ಮಿ ಆಗುತ್ತದೆ. ಅಂಗವಿಕಲರಿಗೆ ಹಾಗೂ ಹಕ್ಕಿಗಳಿಗೆ ನೀವು ಮಾಡಿದಂತಹ ತಿಂಡಿಗಳನ್ನು ನೀಡಿದರೆ ಕೇತುವಿನಿಂದ ಬರುವ ಸಮಸ್ಯೆಗಳು ಸ್ವಲ್ಪ ದೂರವಾಗಬಹುದು. ಗಣಪತಿಯ ಆರಾಧನೆಯನ್ನು ಮಾಡಿ.